Friday, September 20, 2024

ಪ್ರಾಯೋಗಿಕ ಆವೃತ್ತಿ

ವರಮಹಾಲಕ್ಷ್ಮಿ ಹಬ್ಬ| ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಜನರು ಹೂವು,ಹಣ್ಣು ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಕಾರಣ ಮಂಡ್ಯ ನಗರದ ಹಲವೆಡೆ ಭಾರೀ ಜನಜಂಗುಳಿ ಉಂಟಾಗಿತ್ತು.

ಮಂಡ್ಯ ನಗರದ ವಿ.ವಿ ರಸ್ತೆ, ಮಹಾವೀರ ವೃತ್ತ, ಹೊಸಹಳ್ಳಿ ವೃತ್ತ, ಪೇಟೆಬೀದಿ,ಹೊಳಲು ಸರ್ಕಲ್,ಗುತ್ತಲು ರಸ್ತೆ ಸೇರಿದಂತೆ ಹಲವೆಡೆ ಜನರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಗತ್ಯ ವಸ್ತುಗಳಾದ ಹೂವು, ಹಣ್ಣು, ಬಾಳೆಕಂದು, ಮಾವಿನಸೊಪ್ಪು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು. ಪೇಟೇಬೀದಿ, ವಿ.ವಿ‌.ರಸ್ತೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

ಟ್ರಾಫಿಕ್ ಪೋಲಿಸರು ಪೇಟೆ ಬೀದಿ,ಹೊಳಲು ಸರ್ಕಲ್ ಎರಡೂ ಕಡೆ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳ ಸಂಚಾರಕ್ಕೆ ತಡೆ ಹಾಕಿದ ಪರಿಣಾಮ ಜನರು ನಡೆದುಕೊಂಡೇ ಅಗತ್ಯ ವಸ್ತುಗಳ ಖರೀದಿಸಿದರು. ಚಿನ್ನ-ಬೆಳ್ಳಿ ಅಂಗಡಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ವರ ಮಹಾಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಖರೀದಿಸುವಲ್ಲಿ ಮಹಿಳೆಯರು ನಿರತರಾಗಿದ್ದರು.ಇನ್ನು ನಗರದ ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದರು. ಸೀರೆ ಮತ್ತಿತರ ಬಟ್ಟೆಗಳ ಖರೀದಿ ಜೋರಾಗಿತ್ತು. ಸ್ವೀಟ್ಸ್ ಮತ್ತು ದಿನಸಿ ಅಂಗಡಿಗಳಲ್ಲೂ ಭರ್ಜರಿ ವ್ಯಾಪಾರ ನಡೆದಿತ್ತು.ಜನರು ತಮಗಿಷ್ಟದ ಸಿಹಿತಿನಿಸುಗಳನ್ನು,ದಿನಸಿ ವಸ್ತುಗಳನ್ನು ಖರೀದಿಸಿದರು.

ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ ಹೂವು,ಹಣ್ಣಿನ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು.ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ 130 ರಿಂದ 150 ರೂ.ಗೆ ಮಾರಾಟವಾದರೆ, ಪಚ್ಚಬಾಳೆ ಕೆ.ಜಿ.ಗೆ 50 ರೂ.ಗೆ ಏರಿಕೆ ಕಂಡಿತ್ತು. ಸೇವಂತಿಗೆ ಹೂ ಮಾರು 150 ರಿಂದ 200 ರೂ.ವರೆಗೆ ಮಾರಾಟ ಮಾಡಲಾಗುತ್ತಿತ್ತು. ಉತ್ತಮ ಸೇಬು 300 ರೂ.ಆಗಿತ್ತು. ಮೂಸಂಬಿ 130, ಮರಸೇಬು 140, ದಾಳಿಂಬೆ 160 ರಿಂದ 180 ರೂ.ಗಳಷ್ಟಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಿಯೇ ಸಿದ್ಧ ಎಂಬಂತೆ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!