Wednesday, September 18, 2024

ಪ್ರಾಯೋಗಿಕ ಆವೃತ್ತಿ

ವಿಜೃಂಭಣೆಯಿಂದ ನಡೆದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಪ್ರತಿಷ್ಠಾಪನೆ

ಮದ್ದೂರು ತಾಲ್ಲೂಕಿನ ಭಾರತೀನಗರ ಮಾರಿಗುಡಿ ಬೀದಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಪ್ರತಿಷ್ಟಾಪನೆ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಇಂದು ಬೆಳಿಗ್ಗೆಯಿಂದಲೇ ಹೋಮ, ಹವನ ಇತ್ಯಾದಿ ಜೊತೆಗೆ ಮಹಾ ಪೂರ್ಣಾಹುತಿ ನಡೆಯಿತು. ಬೆಳಿಗ್ಗೆ 11.57ರಿಂದ12.48ರವರಿಗೆ ಸಲ್ಲುವ ಶುಭಾ ಸಿಂಹ ಲಗ್ನದಲ್ಲಿ ಅಭಿಜಿನ್ ಮಹೂರ್ತದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯವರ ಪ್ರಾಣ ಪ್ರತಿಷ್ಟಾಪನ ಮಹಾಕುಂಭಾ ಪ್ರೋಕ್ಷಣಂ ಮಹಾ ಕುಂಭಾಬಿಷೇಕ,ಅಲಾಂಕರ ದರ್ಪಣ,ಪಂಚಕನ್ಯಾ ಮಹಾನೈವೇದ್ಯ ಯಜಮಾನಶೀರ್ವಾದ ರಾಜಾಶೀರ್ವಾದ ಕಾರ್ಯಕ್ರಮಗಳು ನೆರವೇರಿದವು.

ದೇವಸ್ಥಾನದ ಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು.
ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಉಪಸ್ಥಿತರಿದ್ದರು.

ಅನ್ನ ಸಂತರ್ಪಣೆ

ಬಂದ ಭಕ್ತಾದಿಗಳಿಗೆಲ್ಲ ತಿರುಪತಿ ದೇವರಿಗೆ ಇಷ್ಟವಾದ ಲಡ್ಡು,ಒಬ್ಬಿಟ್ಟಿನ ಊಟ ಬಡಿಸಲಾಯಿತು. ಬಹಳ ಅಚ್ಚು ಕಟ್ಟಾಗಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ವೆಂಕಟೇಶ್ವರ ದೇವಾಲಯವನ್ನು ಶಾಸಕ ಡಿ.ಸಿ.ತಮ್ಮಣ್ಣ ಉದ್ಘಾಟಿಸಿ ಮಾತಾನಾಡಿದರು. ಭಾರತೀನಗರದ ಇತಿಹಾಸದಲ್ಲೆ ಸುವರ್ಣಾಕ್ಷರದಲ್ಲಿ ಬರೆದಿಡುವಂತ ದಿನ. ಇಂದು ಭಗವಂತನನ್ನು ನಂಬಿ ಯಾರು ಕೆಟ್ಟಿಲ್ಲ. ಈ ಭಾಗದಲ್ಲಿ ತಿಮ್ಮಪ್ಪನ ದೇವಸ್ಥಾನ ಇರುವುದು ನಮ್ಮ ಮನೆ ದೇವರು ಅಬಲವಾಡಿ ತೋಪಿನ ತಿಮ್ಮಪ್ಪ ದೇವಸ್ಥಾನದಂತೆ ಖ್ಯಾತಿ ಪಡೆಯಲಿದೆ ಎಂದರು.

ಈ ದೇವಸ್ಥಾನ ನಿರ್ಮಾಣ ಮಾಡಲು ಹೊರಟಾಗ ಹಲವು ಅಡೆ ತಡೆಗಳು ಎದುರಾದವು. ಅದೆಲ್ಲವಕ್ಕೂ ಹೆದರದೆ ಟ್ರಸ್ಟಿನ ಎಲ್ಲರೂ ಒಗ್ಗೂಡಿ ದೇವಸ್ಥಾನ ನಿರ್ಮಾಣ ಮಾಡುವುದರ ಜೊತೆಗೆ ಯಾತ್ರಾ ಸ್ಥಳದಂತೆ ನಿರ್ಮಾಣ ಮಾಡಿದ್ದಾರೆ.

ಅನೇಕ ಭಕ್ತಾದಿಗಳು, ದಾನಿಗಳಿಂದ ಬಂದ ಸಹಾಯ ಧನದಿಂದ ಇಷ್ಟೊಂದು ಸುಸಜ್ಜಿತ ದೇವಸ್ಥಾನ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು ದೇವಸ್ಥಾನಗಳು ಮಾನಸಿಕ ನೆಮ್ಮದಿಗೋಸ್ಕರ ನಿರ್ಮಾಣ ಮಾಡುವುದು.

ಉಸಿರು ಹೋದ ಮೇಲೆ ಹೆಸರಿರಲ್ಲ. ಉಸಿರು ಹೋದ ಮೇಲೆ ಅದನ್ನ ಹೆಣ ಅಂತಾರೆ. ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ ನಮ್ಮನ್ನು ಮುಂದಿನ ತಲೆಮಾರಿನವರೆಗೂ ಜನರು ನೆನಪಿಸಿಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಚಾಂಷುಗರ್ ಉಪಾಧ್ಯಕ್ಷ ಮಣಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನೇಗೌಡ,ಮಾದನಾಯಕನಹಳ್ಳಿ ರಾಜಣ್ಣ, ಜಿ.ಪಂ.ಮಾಜಿ ಸದಸ್ಯ ಎ.ಟಿ.ಬಲ್ಲೇಗೌಡ,ಕೂಳಗೆರೆ ಶೇಖರ್,ದೇವಸ್ಥಾನದ ಟ್ರಸ್ಟಿಗಳಾದ ಪೂಜೂರಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!