Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆಲಸ ಮಾಡಿ ಅಂದದ್ದಕ್ಕೆ ಕಪಾಳಕ್ಕೆ ಬಾರಿಸಿದ ಎಂಎಲ್ಎ ಯಾರು ಗೊತ್ತಾ?

ಎಂಎಲ್ಎ ಆದವರು ಜನರ ಸಮಸ್ಯೆ ಆಲಿಸಿ, ಅದಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸೋ ಕೆಲಸ ಮಾಡೋದು ಕರ್ತವ್ಯ. ಆದ್ರೇ.. ನಮ್ಮೂರಿಗೆ ಹೋಗೋದಕ್ಕೆ ರಸ್ತೆ ಸರಿಯಿಲ್ಲ, ಕಿತ್ತೋಗಿ ಹಾಳಾಗಿದೆ.

ನೀರಿನ ಸೌಕರ್ಯ ಸರಿಯಾಗಿಲ್ಲ ಸರಿ ಮಾಡಿಸಿಕೊಂಡಿ ಅಂದಿದ್ದಕ್ಕೆ, ಪಾವಗಡ ಎಂಎಲ್ಎ ವೆಂಕಟರಮಣಪ್ಪ ಕಪಾಳ ಮೋಕ್ಷ ಮಾಡಿ ದರ್ಪತೋರಿರೋ ಘಟನೆ, ಪಾಗಡದಲ್ಲಿ ನಡೆದಿದೆ.

ಪಾವಗಡ ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದಂತ ಸಭೆಯೊಂದರಲ್ಲಿ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಭಾಗವಹಿಸಿದ್ದರು.

ಈ ಮಾಹಿತಿ ತಿಳಿದ ನಾಗೇನಹಳ್ಳಿಯ ಯುವಕ ನರಸಿಂಹಮೂರ್ತಿ ಎಂಬುವರು, ತಮ್ಮ ಗ್ರಾಮದ ಸಮಸ್ಯೆಯನ್ನು ಶಾಸಕರ ಬಳಿಯಲ್ಲಿ ಹೇಳಿಕೊಂಡು, ಪರಿಹಾರಕ್ಕೆ ಮನವಿ ಮಾಡೋದಕ್ಕಾಗಿ ಹೋಗಿದ್ದಾರೆ.

ಪಾವಗಡ ತಾಲ್ಲೂಕು ಆಡಳಿತ ಕಛೇರಿಯಲ್ಲಿನ ಸಭೆ ಮುಗಿಸಿ ಹೊರ ಬಂದಾಗ, ಶಾಸಕರ ವೆಂಕಟರಮಣಪ್ಪ ಅವರನ್ನು ಭೇಟಿಯಾದಂತ ನರಸಿಂಹಮೂರ್ತಿ, ಸಾರ್ ನಮ್ಮೂರ ರಸ್ತೆ ಕಿತ್ತೋಗಿ ಹಾಳಾಗಿದೆ.

ರಿಪೇರಿ ಮಾಡಿಸಿಕೊಡಿ, ಸರಿಯಾಗಿ ಕುಡಿಯೋ ನೀರಿನ ಸೌಲಭ್ಯ ಕೂಡ ಇಲ್ಲ. ಅದರ ಬಗ್ಗೆಯೂ ಗಮನಿಸಿ ಸಾರ್ ಎಂಬುದಾಗಿ ಮನವಿ ಮಾಡಿದ್ದಾನೆ.

ಈ ವೇಳೆ ಶಾಸಕರು ಆಯ್ತು ಮಾಡಿಸಿಕೊಡುವೆ ಎಂದಾಗ, ಅಲ್ಲ ನೀವು ಯಾವಾಗ್ಲೂ ಕೇಳಿದಾಗ ಇದೇ ಹೇಳ್ತೀರಿ. ರಿಪೇರಿ ಮಾತ್ರ ಆಗಿಲ್ಲ ಎಂದು ಎಲ್ಲರೆದುರು ಬಹಿರಂಗವಾಗಿಯೇ ಕೇಳಿದಾಗ ಸಿಟ್ಟಾದಂತ ಶಾಸಕರು ಕಪಾಳ ಮೋಕ್ಷ ಮಾಡಿದ್ದಾರೆ.

ಅಲ್ಲದೇ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ, ಹೇ ಇವನನ್ನು ಒದ್ದು ಒಳಗೆ ಹಾಕಿ ಎಂಬುದಾಗಿ ದರ್ಪ ತೋರಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಲ್ಲದೇ ವೀಡಿಯೋ ನೋಡಿದಂತ ಸಾರ್ವಜನಿಕರು ಶಾಸಕರು ಕಪಾಳಮೋಕ್ಷ ಮಾಡಿದ್ದು ಸರಿಯಿಲ್ಲವೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!