Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀವು ಅವಳ ಹೃದಯದ ಬಗ್ಗೆ ತಿಳಿದುಕೊಳ್ಳಬೇಕಾದರೆ….

✍️ ಚಿದಂಬರ ನರೇಂದ್ರ

ನೀವು ಅವಳ ಹೃದಯದ ಬಗ್ಗೆ
ತಿಳಿದುಕೊಳ್ಳಬೇಕಾದರೆ
ಅವಳ ಸಿಟ್ಟಿನ ಕಾರಣಗಳನ್ನು
ಗಮನಿಸಿ ಸೂಕ್ಷ್ಮವಾಗಿ.

ಅವಳ ಮನಸ್ಸಿನ ಬಗ್ಗ
ನೀವು ಅರಿತುಕೊಳ್ಳಬೇಕಾದರೆ
ಓದುವ ಪ್ರಯತ್ನ ಮಾಡಿ
ಅವಳ ಮೌನದ ಸುತ್ತ
ಠಿಕಾಣಿ ಹಾಕಿರುವ ಶಬ್ದಗಳನ್ನು.

ಅವಳ ಆತ್ಮದ
ವಿಳಾಸ ಬಯಸುವಿರಾದರೆ
ಏನು ನೋಡುತ್ತಿವೆ ಅವಳ ಕಣ್ಣುಗಳು
ಕಣ್ಣಲ್ಲಿ ಕಣ್ಣಿಟ್ಟು ನೋಡಿ

ಆಕೆ ಮುಗುಳ್ನಗುತ್ತಿರುವಾಗ
ಒಬ್ಬಳೇ .

~ Lang Leav

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!