Saturday, May 4, 2024

ಪ್ರಾಯೋಗಿಕ ಆವೃತ್ತಿ

13 ರಾಗಿ ತಳಿಗಳ ಸಂಶೋಧಕ ರಾಗಿ ಲಕ್ಷ್ಮಣಯ್ಯ

ಅನ್ನಪೂರ್ಣ, ಇಂಡಾಫ್ ಸೇರಿದಂತೆ ಒಟ್ಟು 13 ಹೊಸ ರಾಗಿ ತಳಿಗಳನ್ನು ಸಂಶೋಧಿಸುವ ಮೂಲಕ ರಾಗಿ ಲಕ್ಷ್ಮಣಯ್ಯ ಅಧಿಕ ರಾಗಿಯ ಅಧಿಕ‌ ಇಳುವರಿಗೆ ಕಾರಣರಾಗಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ರಾಜೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ವತಿಯಿಂದ ನಡೆದ ಹರಿವಾಣ ತುಂಬಿದ ತೆನೆ ಸಂಸ್ಮರಣ ಗ್ರಂಥ ಲೋಕಾ ರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಧಿಕ ಇಳುವರಿಗೆ ರಾಗಿ ಲಕ್ಷ್ಮಣಯ್ಯ ಅವರ ಕೊಡುಗೆ ಅಪಾರವಾದುದು. 1978ರಲ್ಲಿ ಇಂಡೋ-ಆಫ್ರಿಕಾ ತಳಿಯ ಮಿಶ್ರ ಮಾಡಿ ಹೊಸ ತಳಿ ಇಂಡಾಫ್ ಸಂಶೋಧನೆ ಮಾಡಿದ್ದಾರೆ.ತಮಗೆ ಒದಗಿ ಬಂದ ಪದೋನ್ನತಿಯನ್ನು ತಿರಸ್ಕರಿಸಿ ರಾಗಿಯ ಹೊಸ ತಳಿಗಳ ಸಂಶೋಧನೆಗೆ ಶ್ರಮಿಸಿ, ತಮ್ಮ ಸಹದ್ಯೋಗಿಗಳಿಗೂ ಪ್ರೋತ್ಸಾಹ, ಪ್ರೇರಣೆ ನೀಡಿದ ಮಹನೀಯರು ಎಂದರು.

ರಾಗಿ ಲಕ್ಷ್ಮಣಯ್ಯ ಅವರ ಗ್ರಂಥವು ಸುಮಾರು 400 ಪುಟಗಳಾಗಿದ್ದು, ರಾಗಿ ಲಕ್ಷ್ಮಣಯ್ಯ ಅವರ ಜೀವನ ಗಾಥೆಯನ್ನು. ಸಂಶೋಧನಾ ಮಾಹಿತಿ ಯನ್ನು ಹೊಂದಿದೆ. ಈ ಗ್ರಂಥಕ್ಕೆ ಹಲವಾರು ಕೃಷಿ ಸಂಶೋ ಧಕರು ತಮ್ಮ ಅನಿಸಿಕೆ ಹಾಗೂ ಲೇಖನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.

ದೇಶದ ಕೃಷಿಯ ಆರ್ಥಿಕತೆ ಯಲ್ಲಿ 1800 ವರ್ಷಗಳ ಹಿಂದೆಯೇ ರಾಗಿ ಬೆಳೆಯು ತ್ತಿದ್ದರು ಎಂದು ಕನಕದಾಸರು ತಮ್ಮ ರಾಮ ಧಾನ್ಯ ಚರಿತೆಯಲ್ಲಿ ಹೇಳಿದ್ದಾರೆ. ದೇಶದ ರಾಗಿ ಉತ್ಪಾದನೆಯಲ್ಲಿ ಶೇ.೬೦ ರಷ್ಟು ಕೊಡುಗೆ ಕರ್ನಾಟಕದ್ದೇ ಆಗಿದೆ. ಸರ್ವ ರೋಗಕ್ಕೂ ರಾಗಿಯೇ ರಾಮ ಬಾಣ. ಅದರಲ್ಲೂ ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ರಾಗಿಯ ಮಹತ್ವ ದೊಡ್ಡದು. ರಾಗಿ ಬಳಸಿದವರು ಎಲ್ಲರೂ ಆರೋಗ್ಯ ವಂತರಾಗಿದ್ದಾರೆ. ರಾಗಿ ಲಕ್ಷ್ಮಣಯ್ಯ ಅವರ ಸಂಶೋಧನೆ ಅದ್ಬುತವಾದುದು.ಇಂದು ರಾಗಿಯನ್ನು ಉತ್ತರ ಭಾರತದಲ್ಲೂ ರೈತರು ಬೆಳೆಯುವಂತಾಗಿರುವ ಅಚ್ಚರಿ ವಿಷಯ ಎಂದರು.

ರಾಗಿ ಲಕ್ಷ್ಮಣಯ್ಯ ಅವರ ಅಮೋಘ ಸಾಧನೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ ಎಂದ ಅವರು, ರಾಗಿ ಲಕ್ಷ್ಮಣಯ್ಯ ಅವರ ಸಾಧನೆ ಇಂದಿನ ಪೀಳಿಗೆಗೆ ಪ್ರೇರಕವಾಗಲಿ ಎಂದು ಆಶಿಸಿದರು.

ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಅಧ್ಯಕ್ಷ ಕೆ.ಬೋರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ರೈತ ಸಂಘಕ್ಕೂ ರಾಗಿ ಲಕ್ಷ್ಮಣಯ್ಯ ಅವರಿಗೂ ಅವಿನಾಭಾವ ಸಂಬಂಧವಿದೆ.

ರೈತ ಸಂಘದಿಂದ ಮೊದಲ ಬಾರಿಗೆ ಸನ್ಮಾನಗೊಂಡ ಮಹಾನ್ ವ್ಯಕ್ತಿಯೇ ರಾಗಿ ಲಕ್ಷ್ಮಣಯ್ಯ ಅವರಾಗಿದ್ದಾರೆ ಎಂದರು. ರೈತ ನಾಯಕಿ ಸುನಂದಾ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಒಟ್ಟು ಮೂರು ವರ್ಷದ ಸಾಧಕರಿಗೆ ವಿವಿಧ ರೈತ ಪ್ರಶಸ್ತಿ ಗಳನ್ನು ವಿತರಿಸಿ ಗೌರವಿಸಲಾಯಿತು. ಮಂಜುಳಾ ತಂಡದವರು ರೈತ ಗೀತೆ ಹಾಡಿದರು. ಮೈಸೂರಿನ ರಾಜ್ಯ ಸಂಪನ್ಮೂಲ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ತುಕಾರಾಮ್ ಸ್ಮಾರಕ ಉಪನ್ಯಾಸ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!