Saturday, May 18, 2024

ಪ್ರಾಯೋಗಿಕ ಆವೃತ್ತಿ

ವಿಜಯ್ ಕುಮಾರ್ ಅವರ ಮಾನವೀಯತೆ – ವೃತ್ತಿನಿಷ್ಟೆ ಎಲ್ಲರಿಗೂ ಮಾದರಿ

ಕಾವೇರಿ ನೀರಾವರಿ ನಿಗಮದ ನಿವೃತ್ತ ಅಧೀಕ್ಷಕ ಅಭಿಯಂತರ ಕೆ.ಜಿ. ವಿಜಯ್ ಕುಮಾರ್ ಅವರ ಮಾನವೀಯ ಗುಣಗಳು, ಸಮಯಪಾಲನೆ, ವೃತ್ತಿನಿಷ್ಠೆ ಹಾಗೂ ಸರಳತೆ ಅಂಶಗಳು ಮಾದರಿಯಾಗಿದ್ದು,ಎಲ್ಲರೂ ಇದನ್ನು ಅಳವಡಿಸಿಕೊಂಡರೆ ಉತ್ತಮ ಹೆಸರು ಗಳಿಸಬಹುದು ಎಂದು ಕಾ.ನೀ.ನಿ.ಕಾರ್ಯಪಾಲಕ ಅಭಿಯಂತರ ಪಿ.ಹೊನ್ನ ರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಹೊರವಲಯದಲ್ಲಿರುವ ಅಗ್ರಿಕ್ಲಬ್ ನಲ್ಲಿ ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಾನು ಕೆಲವು ವರ್ಷಗಳ ಕಾಲ ವಿಜಯಕುಮಾರ್ ಅವರ ಜೊತೆಗೆ ಕೆಲಸ ಮಾಡಿದ್ದು ನನ್ನ ಭಾಗ್ಯ. ವಿಜಯಕುಮಾರ್ ಅವರ ಸೇವಾ ಕಾರ್ಯವೈಖರಿ ಮೆಚ್ಚಿ ಸರ್ಕಾರ ಬಾಳೇಕುಂದ್ರಿ ಪ್ರಶಸ್ತಿ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದೇ ಅವರ ಸೇವೆ ಎಂತಹದ್ದು ಎನ್ನುವುದಕ್ಕೆ ಸಾಕ್ಷಿ ಎಂದರು.

ಮಾಧ್ಯಮಗಳಲ್ಲಿ ಕನ್ನಂಬಾಡಿ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂದು ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ನಾನು ರಾತ್ರಿ 11ಗಂಟೆಗೆ ಕನ್ನಂಬಾಡಿ ಡ್ಯಾಂ ಬಳಿ ಹೋಗಿ ರಾತ್ರಿ 1 ಗಂಟೆಯವರೆಗೂ ವಿಡಿಯೋ ರೆಕಾರ್ಡ್ ಮಾಡಿ ಯಾವುದೇ ತೊಂದರೆ ಇಲ್ಲವೆಂದು ಖಚಿತಪಡಿಸಿಕೊಂಡು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮನೆಗೆ ಬಂದೆವು.

ವಿಜಯ್ ಕುಮಾರ್ ಅವರು ಬೆಳಗಿನ ಜಾವ 4 ಗಂಟೆಗೆ ಮತ್ತೆ ಕನ್ನಂಬಾಡಿ ಅಣೆಕಟ್ಟೆ ಬಳಿ ಇದ್ದಾರೆಂಬ ಮಾಹಿತಿ ನನಗೆ ತಿಳಿಸಿದರು.ಇದು ಅವರ ಸೇವಾ ಬದ್ಧತೆ ಹಿಡಿದ ಕೈಗನ್ನಡಿ ಎಂದರು. ವಿಜಯ್ ಕುಮಾರ್ ಅವರು ಕೆಲಸದಲ್ಲಿ ತೊಡಗಿಸಿಕೊಳ್ಳುವ ತಲ್ಲೀನತೆ,ವೃತ್ತಿಪರತೆ ನಮಗೆಲ್ಲರಿಗೂ ಸ್ಫೂರ್ತಿ. ಯುವ ಇಂಜಿನಿಯರ್‌ಗಳು ವಿಜಯಕುಮಾರ್ ಅವರ ಈ ಸೇವಾಬದ್ಧತೆಯನ್ನು ಕಲಿಯಬೇಕು ಎಂದರು.

ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳು ಒಂದೇ ನಾಣ್ಯದ ಎರಡು ಮುಖಗಳು. ಅವರ ಜೊತೆ ಉತ್ತಮ ಬಾಂಧವ್ಯ ಇರಬೇಕು. ಅವರ ಮಾಡಿದ ಕೆಲಸಕ್ಕೆ ಸಕಾಲದಲ್ಲಿ ಬಿಲ್ ಬರೆಯಬೇಕು. ವಿನಾಕಾರಣ ಗುತ್ತಿಗೆದಾರರಿಗೆ ತೊಂದರೆ ನೀಡಬಾರದು. ನನ್ನ ಸೇವಾವಧಿಯಲ್ಲಿ ನಾನು ಯಾವ ಗುತ್ತಿಗೆದಾರರಿಗೆ ತೊಂದರೆ ಮಾಡಿಲ್ಲ. ಮುಂದೆ ಬರುವರು ಇದೇ ರೀತಿ ಗುತ್ತಿಗೆದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅಭಿವೃದ್ಧಿ ಕೆಲಸಗಳು ಆಗುವಂತೆ ನೋಡಿಕೊಳ್ಳಲಿ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಆನಂದ್ ಮಾತನಾಡಿ, ವಿಜಯಕುಮಾರ್ ಅವರು ತುಂಬಾ ಚೆನ್ನಾಗಿ ಕೆಲಸ ಮಾಡಿರುವ ಬಗ್ಗೆ ನಾನು ಹಲವರಿಂದ ಕೇಳಿ ತಿಳಿದಿದ್ದೇನೆ.ಹೊನ್ನರಾಜುರವರೊಂದಿಗೆ ನಾನು ಬಿಡಿಎನಲ್ಲಿ ಒಂದು ವರ್ಷ ಕೆಲಸ ಮಾಡಿದ್ದೇನೆ. ವಿಜಯಕುಮಾರ್ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ.ತಾವು ನಿವೃತ್ತಿಯಾಗಿದ್ದೇವೆಂದು ಭಾವಿಸದೆ,ನಿಮ್ಮ ಸೇವಾ ಅನುಭವವನ್ನು ನನಗೂ ಹಾಗೂ ನಮ್ಮ ಸಿಬ್ಬಂದಿಗೂ ತಿಳಿಸಿಕೊಡಿ.

ಗುತ್ತಿಗೆದಾರರಿಗೆ ನಾನು ತೊಂದರೆ ಮಾಡುವುದಿಲ್ಲ. ನೀವು ಸಹಕಾರ ಕೊಡಿ ನಾನು ಸಹಕಾರ ಕೊಡುತ್ತೇನೆ. ಇಬ್ಬರು ಸೇರಿ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳೋಣ ಎಂದು ಗುತ್ತಿಗೆದಾರರಿಗೆ ಮನವಿ ಮಾಡಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಸ್.ಎಸ್ ನಾಗರಾಜು, ಅಭಿಯಂತರರಾದ ಅಶೋಕ್, ಸುಚೇತಾ, ಗುತ್ತಿಗೆದಾರರಾದ ಹೆಚ್.ವಿ. ನಟರಾಜು,ತ್ಯಾಗರಾಜು ಮತ್ತಿತರರು ವಿಜಯ್ ಕುಮಾರ್ ಅವರ ಸೇವೆಯ ಬಗ್ಗೆ ಮಾತನಾಡಿದರು.

ಸಮಾರಂಭದಲ್ಲಿ ಗುತ್ತಿಗೆದಾರರ ಸಂಘ ಕೆ.ಜಿ.ವಿಜಯ್ ಕುಮಾರ್ ಹಾಗೂ ಪಿ.ಹೊನ್ನರಾಜು ದಂಪತಿಗಳಿಗೆ ಸನ್ಮಾನಿಸಿ ಬೆಳ್ಳಿ ಗದೆ ನೀಡಿ ಅಭಿನಂದಿಸಿದರು.ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮಲಿಂಗಯ್ಯ,ಖಜಾಂಚಿ ಎನ್.ಎಚ್. ಯತಿರಾಜು,ಕಾರ್ಯದರ್ಶಿ ರವೀಂದ್ರ,ಕೆ.ಎಸ್.ನವೀನ್ ಕುಮಾರ್,ಎಂ.ಯೋಗೇಶ್,ತಮ್ಮಣ್ಣ,ಸುನಿಲ್ ಬಾಬು,ಪಿ.ಬಿ.ಕರೀಗೌಡ,ಮಧು ಕುಮಾರ್ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!