Friday, September 20, 2024

ಪ್ರಾಯೋಗಿಕ ಆವೃತ್ತಿ

ಮತ್ತಿಬ್ಬರು ಬಾಲಕಿಯರ ಮೇಲೆ ಮುರುಘಾ ಶರಣರ ಅತ್ಯಾಚಾರ : ಎಫ್ ಐ ಆರ್

 


  • ಕೋವಿಡ್ ಸಂದರ್ಭದಲ್ಲಿ ಶರಣರಿಂದ ಲೈಂಗಿಕ ದೌರ್ಜನ್ಯ
  • ಸಂತ್ರಸ್ತ ಬಾಲಕಿಯರ ತಾಯಿಯಿಂದ ದೂರು

ಮತ್ತಿಬ್ಬರು ಮಠದ ವಿದ್ಯಾರ್ಥಿನಿಲಯದ  ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಒಟ್ಟು 7 ಮಂದಿಯ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ಸಂತ್ರಸ್ಥ ಬಾಲಕಿಯರ ತಾಯಿ ದೂರು ನೀಡಿದ್ದು, ವಿದ್ಯಾರ್ಥಿನಿಲಯದ ವಾರ್ಡನ್ ರಶ್ನಿ, ಬಸವಾದಿತ್ಯ, ಮೈಸೂರಿನ ಭಕ್ತರಾದ ಪರಮಶಿವಯ್ಯ, ಗಂಗಾಧರಯ್ಯ ಮಠದ ಸಿಬ್ಬಂದಿಯಾದ ಬಸವಲಿಂಗ ಹಾಗೂ ಕರಿಬಸಪ್ಪ ಅವರ ಹೆಸರನ್ನು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದೆ.

ಸಂತ್ರಸ್ಥ ಮಕ್ಕಳ ತಾಯಿ ತನ್ನ ಇಬ್ಬರು ಮಕ್ಕಳನ್ನು ಕಡು ಬಡತನ ಕಾರಣ ಮಠದ ಶಾಲೆ ಹಾಗೂ ಹಾಸ್ಟೆಲ್ ಗೆ ದಾಖಲಿಸಿದ್ದರು. 6 ವರ್ಷದ ಹಿಂದೆ ತನ್ನ ಇಬ್ಬರು ಮಕ್ಕಳನ್ನು ಕ್ರಮವಾಗಿ 3 ಹಾಗೂ 1 ನೇ ತರಗತಿಗೆ ದಾಖಲು ಮಾಡಿದ್ದರು.

ತನ್ನ ಇಬ್ಬರು ಮಕ್ಕಳ ಮೇಲೆ 2019 ಮತ್ತು 2020ರ ಕೋವಿಡ್ ಸಂದರ್ಭದಲ್ಲಿ ಶರಣರು ಲೈಂಗಿಕ ದೌರ್ಜನ್ಯ  ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆ ಹೇಳಿಕೆ ನೀಡಿದ್ದು, 14 ಮತ್ತು 15 ವರ್ಷ ವಯಸ್ಸಿನ ಮಕ್ಕಳು ತಮ್ಮ  ಮೇಲೆ ಶರಣರು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಮಕ್ಕಳಿಗೆ ಬೆದರಿಕೆ : ಮುರುಘಾ ಶರಣರ ಬಳಿಗೆ ಹೋಗಲು ನಿರಾಕರಿಸುವ ಮಕ್ಕಳನ್ನು ಮಠದ ಸಿಬ್ಬಂದಿಯಾದ ಪರಮಶಿವಯ್ಯ, ಗಂಗಾಧರಯ್ಯ ಹೆದರಿಸುತ್ತಿದ್ದರು. ಸ್ವಾಮೀಜಿಯ ಖಾಸಗಿ ಕೊಠಡಿಯ ಬಳಿ ಯಾರೂ ತೆರಳದಂತೆ ಕಾವಲು ಕಾಯಲಾಗುತ್ತಿದ್ದು ಎಂದು ಮಹಿಳೆಯು ಆರೋಪಿಸಿದ್ದಾರೆ.

ಸ್ವಾಮೀಜಿ ಅವರು ಪ್ರಸಿದ್ಧರಾಗಿದ್ದರಿಂದ ಹಾಗೂ ತಾನೂ ಮಠದಲ್ಲೇ ನಾನು ಕೆಲಸ ಮಾಡುತ್ತಿದ್ದು, ಅರ್ಥಿಕವಾಗಿ ದುರ್ಬಲಳಾಗಿದ್ದುದರಿಂದ ಇದುವರೆಗೆ ದೂರು ನೀಡಿರಲಿಲ್ಲ, ಆದರೆ ಇಬ್ಬರು ಹೆಣ್ಣುಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ದೂರು ದಾಖಲಿಸಿದ್ದರಿಂದ ದೂರು ನೀಡಲು ಮುಂದಾದೆ’ ಎಂದೂ ಹೇಳಿದ್ದಾರೆ. ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ನಜರಬಾದ್ ಪೊಲೀಸರು ತಿಳಿಸಿದ್ದಾರೆ.

ಒಡನಾಡಿ ಸಂಸ್ಥೆಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರಮುಖರಾದ ಸುಶೀಲಮ್ಮ ರತಿರಾವ್, ರಾಮೇಶ್ವರಿ ವರ್ಮ ಅವರು ಸಂತ್ರಸ್ಥ ಮಕ್ಕಳ ತಾಯಿಯೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಸಕಲ ಮಾಹಿತಿಗಳನ್ನ ಸಂಗ್ರಹಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!