Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರಗತಿಪರ ಚಿಂತಕರ ಬಳಗದಿಂದ ಪ್ರೊ.ಕರಿಮುದ್ದೀನ್‌ ಶ್ರದ್ಧಾಂಜಲಿ ಸಭೆ

ಮೈಸೂರು ರಾಜ್ಯದ ಇತಿಹಾಸ ಮತ್ತು ನೆಪೋಲಿಯನ್ನನ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದ್ದವರು ಫ್ರೊ.ಕರಿಮುದ್ದೀನ್‌, ಜಗತ್ತಿನಲ್ಲಿ 4000 ಧರ್ಮಗಳಿವೆ ಅದರಲ್ಲಿ ಧರ್ಮ ಸಂಸ್ಥಾಪಕರಲ್ಲಿ ಕೆಲವೇ ಕೆಲವು ಮಂದಿ ಮಾತ್ರ, ಇನ್ನುಳಿದವರು ಧರ್ಮೋದಾರಕರಾಗಿದ್ದರು ಎಂದು ಪಿಇಟಿ ನಿರ್ದೇಶಕರಾದ ಡಾ.ರಾಮಲಿಂಗಯ್ಯ ವಿವರಿಸಿದರು.

nudikarnataka.com Prof. M. Karimuddin
ಫ್ರೊ.ಕರಿಮುದ್ದೀನ್‌

ನಗರದ ಗಾಂಧಿ ಭವನದಲ್ಲಿ ಪ್ರಗತಿಪರ ಚಿಂತಕರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ದಿವಂಗತ ಪ್ರೊ.ಕರಿಮುದ್ದೀನ್‌ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡಿದ್ದರು, ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ ರೋಗಕ್ಕೆ ಒಳಗಾಗಿದ್ದರು ಎಂಬುದು ಅತ್ಯಂತ ಬೇಸರದ ಸಂಗತಿಯಾಗಿದೆ. ನಾವು ಬೆಳಕನ್ನು ಸಾಮಾನ್ಯವಾಗಿ ಪೂಜೆ ಮಾಡುತ್ತೇವೆ ಬೆಳಕಿನಲ್ಲಿ ಜ್ಞಾನ ಇದೆ ಎಂದು ಆದರೆ ಕತ್ತಲೆಯಲ್ಲೂ ಅಷ್ಟೇ ಜ್ಞಾನ ಪಡೆಯಬಹುದಾಗಿದೆ ಎಂದು ಹೇಳುತ್ತಿದ್ದ ಏಕೈಕ ವ್ಯಕ್ತಿಯಾಗಿ ಕರಿಮುದ್ದೀನ್‌ ಹೊರಹೊಮ್ಮಿದ್ದರು ಎಂದರು.

ಸಾಹಿತಿ ಪ್ರೊ.ಹುಲ್ಕೆರೆ ಮಹದೇವ್‌ ಮಾತನಾಡಿ, ನಿಷ್ಠುರವಾದ ವೈಚಾರಿಕತೆ ಹೊಂದಿದ್ದವರು ಪ್ರೊ.ಕರಿಮುದ್ದೀನ್‌, ಸಾಹಿತ್ಯ, ಕನ್ನಡ ಭಾಷೆ ವಿಷಯಗಳ ಬಗ್ಗೆ ಅಧ್ಯಯನ ಮಾಡಿದ್ದರು ಎಂದು ಹೇಳಿದರು.

ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಲಿಂಗಣ್ಣಬಂಧೂಕರ್, ಶ್ರೀನಿವಾಸ್‌ಶೆಟ್ಟಿ, ಪಿಇಟಿ ಕಾರ್ಯದರ್ಶಿ ರಾಮಲಿಂಗಯ್ಯ, ಕೃಷಿಕ ಲಯನ್ಸ್‌ ಸಂಸ್ಥೆಯ ಕೆ.ಟಿ.ಹನುಮಂತು, ನಿವೃತ್ತ ಪ್ರಾಂಶುಪಾಲ ತೂಬಿನಕೆರೆ ಲಿಂಗರಾಜು, ಪ್ರತಿಭಾಂಜಲಿ ಡೇವಿಡ್‌, ಮುಖಂಡ ಬೇಕ್ರಿರಮೇಶ್‌ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!