Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳಿಗೆ ನೋಟ್ ಬುಕ್ಸ್-ಬ್ಯಾಗ್ ವಿತರಣೆ

ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕೆಯಲ್ಲಿ ಪ್ರೋತ್ಸಾಹಿಸಬೇಕೆಂಬುದು ಸಮಾಜ ಸೇವಕ ಕದಲೂರು ಉದಯ್ ಅವರ ಆಸೆಯಾಗಿದ್ದು,ಈ ಹಿನ್ನಲೆಯಲ್ಲಿ ಉದಯ ಚಾರಿಟಬಲ್ ಟ್ರಸ್ಟ್ ಮೂಲಕ ಮಕ್ಕಳಿಗೆ ನೋಟ್ ಪುಸ್ತಕ,ಬ್ಯಾಗ್ ಹಾಗೂ ಪಠ್ಯ ಪರಿಕರಗಳನ್ನು ನೀಡಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಸಿಪಾಯಿ ಶ್ರೀನಿವಾಸ್ ತಿಳಿಸಿದರು.

ಮದ್ದೂರು ತಾಲ್ಲೂಕಿನ ಅತಗೂರು ಹೋಬಳಿಯ ಚಿನ್ನನದೊಡ್ಡಿ,ಅತಗೂರು, ತೊರೆಶೆಟ್ಟಹಳ್ಳಿ,ಯಮನಹಳ್ಳಿ ,ಯರಗನಹಳ್ಳಿಯ ಅಂಗನವಾಡಿ,ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಲೇಟ್, ಬಳಪ,ನೋಟ್ ಬುಕ್, ಬ್ಯಾಗ್ ಹಾಗೂ ಪಠ್ಯ ಪರಿಕರಗಳನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸಿ ಅವರು ಮಾತನಾಡಿದರು.

ಕದಲೂರು ಉದಯ್ ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಬಡ ಮಕ್ಕಳಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ತಾಲೂಕಿನ ಅಂಗನವಾಡಿ, ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳ ಅಧುನೀಕರಣಕ್ಕೂ ಮುಂದಾಗಿದ್ದಾರೆ.ಶಾಲಾ ಮಕ್ಕಳಿಗೆ ನೆರವಾಗುವ ಇಂತಹ ಸೇವಾಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಆಧುನೀಕರಣ ಮಾಡಬೇಕೆಂಬ ಇಚ್ಚೆ ಅವರಿಗಿದೆ.ಬಡವರ ಕಷ್ಟ- ಸುಖಗಳನ್ನು ಅರಿತಿರುವ ಇಂತಹವರು ರಾಜಕೀಯಕ್ಕೆ ಬಂದರೆ ಜನರಿಗೆ ಸಾಕಷ್ಟು ಒಳಿತಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕದಲೂರು ತಿಮ್ಮೇಗೌಡ, ಯತೀಶ್,ಶಿವು,ಹರೀಶ್,ಗ್ರಾಮ ಪಂಚಾಯತಿ ಸದಸ್ಯರಾದ ರಾಜೇಶ್,ಸುಮಿತ್ರಾ, ಸತೀಶ್ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!