Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೋಷಣಾ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ

ಇಂದು ಸಮಾಜದಲ್ಲಿ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಅವರಲ್ಲಿ ಪೌಷ್ಟಿಕತೆ ತುಂಬಲು ಪೋಷಣಾ ಅಭಿಯಾನ ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಇವರ ಆಶ್ರಯದಲ್ಲಿ ಮಂಡ್ಯದ ಬಾಲ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ‌ ಇಲಾಖೆ ವತಿಯಿಂದ ಪೋಷಣಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ.

ಸಮುದಾಯದಲ್ಲಿರುವ ಜನಪ್ರತಿನಿಧಿಗಳನ್ನು ಇದರಲ್ಲಿ ಭಾಗವಹಿಸುವುದು ಒಂದು ಅಂಶವಾಗಿದೆ. ಪೋಷಣಾ ಅಭಿಯಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ಮಹಿಳಾ ಮತ್ತು ಆರೋಗ್ಯ, ಮಹಿಳಾ ಮತ್ತು ಶಿಕ್ಷಣ, ಮಕ್ಕಳು, ಶಿಕ್ಷಣ ಮತ್ತು ಆರೋಗ್ಯ ಅದಕ್ಕಿಂತ ಹೆಚ್ಚಾಗಿ ಸಮುದಾಯದವರನ್ನು ಸೇರಿಸಿಕೊಳ್ಳುವುದು ಎಂದರು.

ಟಿಹೆಚ್ಓ ಡಾ.ಜವರೇಗೌಡ ಮಾತನಾಡಿ, ದೇಶದಲ್ಲಿ ಹುಟ್ಟುವಂತಹ ಮಕ್ಕಳು ವಯಸ್ಸಿಗೆ ತಕ್ಕನಾಗಿ ಬೆಳವಣಿಗೆ ಯಾಗುವುದು ಸಾಮಾನ್ಯ ವಾಗಿರುತ್ತದೆ.

ಕೆಲವು ಮಕ್ಕಳ ತೂಕ ವಯಸ್ಸಿಗಿಂತ ಕಡಿಮೆ ಇರುತ್ತದೆ. ಅಂತಹವರನ್ನು ಕಡಿಮೆ ತೂಕದ ಮಕ್ಕಳು ಎಂದು ನಿರ್ಧಾರ ಮಾಡಲಾಗುತ್ತದೆ ಎಂದರು.

ಅಂಗನವಾಡಿ ಆಹಾರದ ಜೊತೆಗೆ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶದ ಆಹಾರವನ್ನು ತಿನ್ನಿಸಿ ಆ ವಯಸ್ಸಿಗೆ ತಕ್ಕಂತೆ ತೂಕ ತರಿಸುವಂತಹ ಕಾರ್ಯಕ್ರಮವನ್ನು ಪೋಷಣಾ ಅಭಿಯಾನ ಕಾರ್ಯಕ್ರಮ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಿಡಿಪಿಓ ಎಮ್.ಕೆ. ಕುಮಾರಸ್ವಾಮಿ, ಡಿಪಿಓ ನಂಜಮ್ಮಣ್ಣಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಧರ್ ನಿರೂಪಣಾಧಿಕಾರಿ ಕುಮಾರ್, ಅಶೋಕ್, ಮಹದೇವ, ಮೇಲ್ವಿಚಾರಕಿಯರಾದ ಶಕುಂತಲಾ, ರೇಖಾ,ಜ್ಯೋತಿ ಉಷಾರಾಣಿ, ವನಿತಾ, ಮಂಜುನಾಥ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!