Thursday, May 16, 2024

ಪ್ರಾಯೋಗಿಕ ಆವೃತ್ತಿ

ಉಡುಪಿ | ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಬದುಕುಳಿದ ಮೀನುಗಾರ !

ಮೀನು ಹಿಡಿಯಲು ತೆರಳಿದ್ದ ಮೀನುಗಾರನೊಬ್ಬ ಬೋಟ್‌ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದು, 43 ಗಂಟೆಗಳ ಕಾಲ ಈಜಿ ಬದುಕುಳಿದಿದ್ದಾರೆ. ಅವರನ್ನು ಗೊಂಗೊಳ್ಳಿ ಮೂಲದ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ತಮಿಳುನಾಡು ಮೂಲದ ಎಂಟು ಮಂದಿ ಮೀನುಗಾರರು ಬುಧವಾರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅಂದು ರಾತ್ರಿ, ಮುರುಗನ್ ಎಂಬಾತ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾನೆ. ಆದರೆ, ಕತ್ತಲೆಯಲ್ಲಿ ಆತ ಸಮುದ್ರಕ್ಕೆ ಬಿದ್ದಿರುವುದು ಇತರರಿಗೆ ಗೊತ್ತಾಗಿಲ್ಲ ಎಂದು ಹೇಳಲಾಗಿದೆ.

ಬಳಿಕ, ಆತ ಇಲ್ಲದಿರುವುದನ್ನು ಗಮನಿಸಿದ ಮೀನುಗಾರರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆತ ಸಮುದ್ರಕ್ಕೆ ಬಿದ್ದು, ಮೃತಪಟ್ಟಿದ್ದಾನೆಂದು ಭಾವಿಸಿ, ವಾಪಸ್‌ ತೆರಳಿದ್ದರು ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆ ಗಂಗೊಳ್ಳಿಯ ಮೀನುಗಾರರು ಅದೇ ಭಾಗದಲ್ಲಿ ಮೀನುಗಾರಿಕೆಗೆ ತೆರಳಿದ್ದಾರೆ. ಅಲ್ಲಿ ಮುರುಗನ್ ಈಜುತ್ತಿರುವುದನ್ನು ಗಮನಿಸಿದ್ದು, ಆತನನ್ನು ಬೋಟ್‌ಗೆ ಹತ್ತಿಸಿಕೊಂಡಿದ್ದಾರೆ. ಆಳ ಸಮುದ್ರದಲ್ಲಿ ಬರೋಬ್ಬರಿ ಎರಡು ದಿನಗಳ ಮುರುಗನ್ ಈಜುತ್ತಲೇ ಜೀವ ಉಳಿಸಿಕೊಂಡಿದ್ದಾರೆ.

ಸಂಪೂರ್ಣ ನಿತ್ರಾಣಗೊಂಡಿದ್ದ ಮುರುಗನ್‌ಗೆ ಗಂಗೊಳ್ಳಿ ಮೀನುಗಾರರು ಪ್ರಥಮ ಚಿಕಿತ್ಸೆ ನೀಡಿ, ಊಟ ಕೊಟ್ಟಿದ್ದಾರೆ. ತಮಿಳುನಾಡು ಬೋಟ್‌ನವರನ್ನು ಸಂಪರ್ಕಿಸಿ, ಅವರೊಂದಿಗೆ ಕಳುಹಿಸಿದ್ದಾರೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!