Saturday, May 25, 2024

ಪ್ರಾಯೋಗಿಕ ಆವೃತ್ತಿ

ದುಬೈ| ಯುಎಇ ಒಕ್ಕಲಿಗರ ಸಂಘದಿಂದ ಅದ್ದೂರಿ ಮಹಿಳಾ ದಿನ ಆಚರಣೆ

ಅರಬ್ ರಾಷ್ಟ್ರಗಳ ಒಕ್ಕೂಟ (UAE)  ಒಕ್ಕಲಿಗರ ಸಂಘದ ವತಿಯಿಂದ ದುಬೈ ನ ಮಶ್ರೀಫ್ ಪಾರ್ಕ್ ನಲ್ಲಿ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸುಮಾರು 200ಕ್ಕೂ ಹೆಚ್ಚು ಜನ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಉದ್ಯೋಗದ ಜೊತೆಗೆ ಸಾಮಾಜಿಕ, ಅರೋಗ್ಯ, ಶಿಕ್ಷಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಮಾದರಿ ಮಹಿಳೆಯರಾದ ವಿಪುಲ ಶೆಟ್ಟಿ, ಡಾ.ಲೇಖಾ ತಮ್ಮಯ್ಯ, ರೂಪಾ ಶಶಿಧರ್ ಮತ್ತು ಪ್ರಭಾ ಪ್ರದೀಪ್ ಅವರನ್ನು ಯುಎಇ ಒಕ್ಕಲಿಗರ ಸಂಘವು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿತು.

ಆಗಮಿಸಿದ ಎಲ್ಲಾ ಮಹಿಳೆಯರಿಗೂ ಗುಲಾಬಿ ಹೂವುಗಳನ್ನು ನೀಡುವ ಮುಖಾಂತರ ಸ್ವಾಗತಿಸಲಾಯಿತು. ಅದೇ ರೀತಿ ಎಲ್ಲಾ ಮಹಿಳೆಯರು, ಮಕ್ಕಳು, ಪುರುಷರು ಮನೋರಂಜನಾ ಕಾರ್ಯಕ್ರಮ ಹಾಗೂ ಆಟೋಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತುಂಬಾ ಸಂತಸ ಪಟ್ಟರು. ಆಟೋಟಗಳಲ್ಲಿ ಭಾಗವಹಿಸಿ ಜಯಗಳಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು ಮತ್ತು ಸಂಘದ ವತಿಯಿಂದ ಎಲ್ಲರಿಗೂ ಒಕ್ಕಲಿಗರ ಶೈಲಿಯ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

nudika

ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಯುಎಇ ಒಕ್ಕಲಿಗರ ಸಂಘದ ನಿರ್ದೇಶಕರಾದ ಶೋಭಾ ಗೌಡ, ಕಾಂತ ಗೌಡ,  ಪುಟ್ಟರಾಜು ಗೌಡ, ಯತೀಶ ಗೌಡ, ದೀಪಕ್ ಗೌಡ, ಗೋಕುಲ್ ಗೌಡ, ಸತೀಶ್ ಗೌಡ, ಪ್ರದೀಪ್ ಗೌಡ , ರಮೇಶ್ ರಂಗಪ್ಪ, ಮಹೇಶ್ ಗೌಡ, ಅಕ್ಷಯ್ ಗೌಡ, ಮೋಹನ್ ಗೌಡ, ನಾರಾಯಣ ಸ್ವಾಮಿ, ಚೇತನ್ ಗೌಡ ಅವರನ್ನು ಸಂಘದ ಅಧ್ಯಕ್ಷರಾದ ಡಾ.ರಶ್ಮಿ ನಂದಕಿಶೋರ್ ಅವರು ವೇದಿಕೆ ಮೇಲೆ ಕರೆದು ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!