Thursday, September 19, 2024

ಪ್ರಾಯೋಗಿಕ ಆವೃತ್ತಿ

ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಲು ಜೂ.30ರವರೆಗೆ ಕಾಲಾವಕಾಶ

ಆಧಾರ್-ಪಾನ್ ಕಾರ್ಡ್ ಜೋಡಣೆ ಮಾಡಲು ಆದಾಯ ಮತ್ತು ತೆರಿಗೆ ಇಲಾಖೆ ಮುಂಬರುವ ಜೂ.30ರವರೆಗೆ ಕಾಲಾವಕಾಶ ವಿಸ್ತರಣೆ ಮಾಡಿದೆ.

2017 ರ ನಂತರ ಪ್ಯಾನ್ ಮಾಡಿಸಿಕೊಂಡವರ್‍ಯಾರು ಪ್ಯಾನ್‌-ಆಧಾರ್ ಲಿಂಕ್‌ ಮಾಡಿಸಬೇಕಿಲ್ಲ. ಯಾಕೆಂದರೆ, ಅವರಿಗೆ ಪ್ಯಾನ್‌ ಅರ್ಜಿ ಹಾಕುವಾಗಲೇ ಆಧಾರ್ ಕೊಡುವುದು ಕಡ್ಡಾಯವಾಗಿತ್ತು. 80 ವರ್ಷ ತುಂಬಿದ ವಯೋವೃದ್ಧರಿಗೆ ಲಿಂಕ್ ಮಾಡಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಒಂದೋ, ಈ ಐದು ವರ್ಷದಲ್ಲಿ ಬಹುತೇಕರು ಪ್ಯಾನ್‌ ಕಾರ್ಡ್ ಲಿಂಕ್‌ ಮಾಡಿಸಿಕೊಂಡಿದ್ದಾರೆ. ಅಥವಾ 2017 ರ ನಂತರ ಪ್ಯಾನ್ ಕಾರ್ಡ್‌ ಖರೀದಿ ಮಾಡಿರುತ್ತಾರೆ (ಹಾಗಾಗಿ ಪ್ರತ್ಯೇಕ ಲಿಂಕ್‌ ಮಾಡಿಸುವ ಅಗತ್ಯ ಇರುವುದಿಲ್ಲ).

ನೋಡಿಕೊಳ್ಳೋದು ಹೇಗೆ?
ನಿಮ್ಮ ಪ್ಯಾನ್‌ ಲಿಂಕ್‌ ಆಗಿದೆಯೋ ಇಲ್ಲವೋ ಎಂಬುದನ್ನು ಇನ್‌ಕಮ್‌ ಟ್ಯಾಕ್ಸ್‌ ವೆಬ್‌ಸೈಟ್‌ಗೆ ಹೋಗಿ

http://(https://eportal.incometax.gov.in/iec/foservices/#/pre-login/link-aadhaar-status)

ನೋಡಿಕೊಳ್ಳಬಹುದು. ಲಿಂಕ್‌ ಆಗಿದೆಯೋ ಇಲ್ಲವೋ ಎಂಬುದನ್ನು ಅದು ತೋರಿಸುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!