Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಸಂಬದ್ಧ ಪದಬಳಕೆ : ಪಿ.ಎಂ.ನರೇಂದ್ರಸ್ವಾಮಿ ವಿಷಾದ

ಮಳವಳ್ಳಿ ತಾಲ್ಲೂಕಿನ ಯತ್ತಂಬಾಡಿ ಬಳಿ ಅಪೂರ್ಣಗೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ ಸಂದರ್ಭದಲ್ಲಿ ಬಳಸಿದ ಅಸಂಬದ್ಧ ಪದಬಳಕೆಗೆ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ‘ನಿಮ್ಮ ಕಾರ್ಯಕರ್ತರನ್ನು ನೀವು ಕಂಟ್ರೋಲ್, ಮಾಡಿ ಅವರ (ಜೆಡಿಎಸ್) ಕಾರ್ಯಕರ್ತರನ್ನು ಅವರು ಕಂಟ್ರೋಲ್ ಮಾಡಲಿ, ಇಲ್ಲವಾದಲ್ಲಿ ಘರ್ಷಣೆ ಸಂಭವಿಸಬಹುದು ಎಂದು ತಿಳಿಸಿದರು. ಆ ಸಂದರ್ಭದಲ್ಲಿ ನಾನು ಒತ್ತಡದಲ್ಲಿದ್ದೆ.ಆಗ ಯಾವ ಪಕ್ಷವಾದರೇನು ? ಎಂದು ಅಸಂಬದ್ಧ ಪದ ಬಳಕೆ ಮಾಡಿದ್ದೆ. ಅನಂತರ ಅದು ಸಾರ್ವಜನಿಕವಾಗಿ ಬಳಸಿದ್ದು ತಪ್ಪೆಂದು ನನ್ನ ಅರಿವಿಗೆ ಬಂದಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸುತ್ತೇನೆ.ಈ ವಿಚಾರವನ್ನು ನಾನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ ಎಂದರು.

ಆದರೆ ರಾಜಕೀಯವಾಗಿ ನಮ್ಮ ಹೋರಾಟ ಎಂದಿಗೂ ಮುಂದುವರೆಯುತ್ತದೆ.ಕೆಲಸ ಅಪೂರ್ಣವಾಗಿದ್ದರೂ
ತರಾತುರಿಯಲ್ಲಿ ವಸತಿ ಶಾಲೆ ಉದ್ಘಾಟಿಸುವ ಸಂದರ್ಭದಲ್ಲಿ ಆಡಳಿ ಯಂತ್ರದ ದುರುಪಯೋಗವಾಗಿದೆ ಎಂದು ನಾವು ಹೋರಾಟ ಮಾಡುತ್ತಿದ್ದೆವು. ಶಾಸಕರ ಹಕ್ಕು ಮತ್ತು ಜವಾಬ್ದಾರಿಯ ಬಗ್ಗೆ ನಮಗೆ ಯಾವ ತಕರಾರು ಇಲ್ಲ. ಆದರೆ ಕ್ಷೇತ್ರದಲ್ಲಿ ಅರಾಜಕತೆ, ದುರಾಡಳಿತ, ಅಭಿವೃದ್ಧಿ ಶೂನ್ಯ ನಡೆ, ಕೆಟ್ಟ ಆದೇಶಗಳನ್ನು ಮಾಡುತ್ತಿರುವ ಬಗ್ಗೆ ನಮಗೆ ಆಕ್ರೋಶವಿದೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡುವುದಕ್ಕಿಂತ ಮುಖ್ಯವಾಗಿ ಜನರಿಗೆ ಸತ್ಯ ತಿಳಿಸಿ ಕೊಡಬೇಕಾಗಿದೆ.ಜಿಲ್ಲಾಡಳಿತದ ತಪ್ಪಿನಿಂದ ಇಂದು ಇಷ್ಟೆಲ್ಲ ಅಕ್ಷಮ್ಯಗಳು ನಡೆಯುತ್ತಿದ್ದು,ಇನ್ನು ಮುಂದಾದರೂ ಸರ್ಕಾರಿ ಯಂತ್ರ ದುರುಪಯೋಗವಾಗುವುದನ್ನು ನಿಲ್ಲಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ವಿಶ್ವಾಸ್,ಮುಖಂಡರಾದ ನಾಗೇಶ್, ದ್ಯಾಪೇಗೌಡ,ವಿಶ್ವನಾಥ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!