Tuesday, April 30, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಅಂತರಾಷ್ಟ್ರೀಯ ಪುರುಷರ ಟೆನ್ನಿಸ್ ಟೂರ್ನಿ: ದಯಾನಂದ್

ಸಕ್ಕರೆ ನಗರಿ ಮಂಡ್ಯದಲ್ಲಿ 8 ವರ್ಷಗಳ ನಂತರ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿ ನಡೆಯಲಿದ್ದು, ಜಗತ್ತಿನ 18 ರಾಷ್ಟ್ರಗಳ ಸುಮಾರು 90 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆಂದು ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಮಂಡ್ಯ ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ ಕೆ.ಆರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ  ಜ.7ರಿಂದ 14ರವರೆಗೆ ಮಂಡ್ಯನಗರದ ಪಿಇಟಿ ಕ್ರೀಡಾಂಗಣದಲ್ಲಿ ಪಿಇಟಿ ಐಟಿಎಫ್ ಅಂತರಾಷ್ಟ್ರೀಯ ಪುರುಷರ ಟೆನ್ನಿಸ್ ಟೂರ್ನಿ ನಡೆಯಲಿದ್ದು, ಮಂಡ್ಯ ನಗರವು ಕ್ರೀಡಾಕೂಟಕ್ಕೆ ಸಜ್ಜಾಗಿದೆ ಎಂದು ತಿಳಿಸಿದರು.

ಜಗತ್ತಿನ ೧೮ ರಾಷ್ಟ್ರಗಳ ಪ್ರತಿಭಾವಂತ ಟೆನಿಸ್ ಪಟುಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ವಿಜೇತರು ೨೫ ಸಾವಿರ ಡಾಲರ್ (₹23 ಲಕ್ಷ) ಬಹುಮಾನ ಪಡೆಯಲಿದ್ದಾರೆ, ಉಕ್ರೇನ್‌ನ ಎರಿಕ್ ವಾನ್‌ಶೆಲ್‌ಬಾಯ್, ದಕ್ಷಿಣ ಆಫ್ರಿಕಾದ ಕ್ರಿಸ್ ವ್ಯಾನ್ ವಿಕ್, ಗ್ರೇಟ್ ಬ್ರಿಟನ್‌ನ ಗೈಲ್ಸ್ ಹಕ್ಕಿ, ಆಸ್ಟ್ರೇಲಿಯಾದ ಥಾಮಸ್ ಫ್ರಾಂಕಟ್ ಮತ್ತು ಭಾರತದ ಸಸಿಲ್‌ಕುಮಾರ ಮುಕುಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರಮುಖ ಆಟಗಾರರಾಗಿದ್ದಾರೆ ಎಂದರು.

ಐವರು ಆಟಗಾರರಿಗೆ ಕ್ರೀಡಾಕೂಟಕ್ಕೆ ನೇರ ಪ್ರವೇಶ ದೊರೆತಿದ್ದು, ಆ ಪೈಕಿ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟು ಎಸ್.ಡಿ.ಪ್ರಜ್ವಲದೇವ ಕೂಡಾ ಒಬ್ಬರಾಗಿದ್ದಾರೆ. 8 ವರ್ಷಗಳ ನಂತರ ಮಂಡ್ಯದಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿ ಆಯೋಜನೆಗೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಕ್ರೀಡಾಕೂಟದ ಪ್ರತಿಯೊಂದು ಘಳಿಗೆಗಳನ್ನು ಸಂತೋಷದಿಂದ ಕಳೆಯಲು ಆಗತ್ಯವಾದ ವಾತಾವರಣ ನಿರ್ಮಾಣ ಮಾಡುವಲ್ಲಿ ಮಂಡ್ಯ ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಶನ್ ಎಲ್ಲ ಸಿದ್ಧತೆಗಳನ್ನು ಮಾಡಿದೆ. ಈ ಕ್ರೀಡಾಕೂಟಕ್ಕೆ ಪ್ರಾಯೋಜನೆ ಒದಗಿಸಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ, ವಿಶೇಷವಾಗಿ ಪಿ ಇ ಟಿ ಸಂಸ್ಥೆಯ ಅಧಕ್ಷರಾದ ಕೆ. ಎಸ್. ವಿಜಯಾನಂದ ಅವರಿಗೆ ಮತ್ತು ಸ್ಟೋನ್ ಕೋ ಸಂಸ್ಥೆಗೆ ಧನ್ಯವಾದಗಳು ಎಂದರು.

ಮಂಡ್ಯದ ಕ್ರೀಡಾಪ್ರೇಮಿಗಳು ಕ್ರೀಡಾಕೂಟಕ್ಕೆ ಸಾಕ್ಷಿಯಾಗುವ ಮೂಲಕ ಅಂತರಾಷ್ಟ್ರೀಯ ಪ್ರತಿಭೆ ಹೊಂದಿರುವ ಕ್ರೀಡಾಪಟುಗಳ ಆಟದ ಸವಿ ಸವಿಯಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಮಹೇಶ್ವರರಾವ್‌ ಮಾತನಾಡಿ, ರಾಜ್ಯಾದ್ಯಾಂತ ಟೆನಿಸ್ ಕ್ರೀಡೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಬೆಳೆಸುವುದು ಅಸೋಸಿಯೇಶನ್‌ನ ಉದ್ದೇಶ ಮತ್ತು ಗುರಿ. ಕಳೆದ ಕೆಲವು ತಿಂಗಳಲ್ಲಿ ಧಾರವಾಡ, ದಾವಣಗೆರೆ ಮತ್ತು ಕಲಬುರಗಿಯಲ್ಲಿ ಇಂಥವೇ ಅಂತರಾಷ್ಟ್ರೀಯ ಟೆನಿಸ್ ಟೂರ್ನಿಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದರು.

ಪ್ರತಿ ಕ್ರೀಡಾಕೂಟದಲ್ಲಿ ಟೆನಿಸ್ ಪ್ರೇಮಿಗಳು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಸ್ಥೆಯ ಉತ್ಸಾಹ ಹೆಚ್ಚಿಸಿದ್ದಾರೆ ಮತ್ತು ಆಟದ ಸವಿಯನ್ನು ಸವಿದಿದ್ದಾರೆ. ರಾಜ್ಯದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸಲು ಸಾಧ್ಯವಿರುವ 8 ಜಿಲ್ಲೆಗಳನ್ನು ಗುರುತಿಸಿ, ಅಗತ್ಯವಾದ ಸಹಕಾರ ನೀಡಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಕ್ರೀಡಾಕೂಟದ ನಿರ್ದೇಶಕ ಅಮರ್ ನಾಥ್, ಐಟಿಎಫ್ ಮೇಲ್ವಿಚಾರಕ ಪುನೀತ್ ಗುಪ್ತ, ಅನಿಲ್ ಕುಮಾರ್, ಗಗನ್, ಮನೋಹರ್ ಹಾಗೂ ಆದರ್ಶ ಉಪ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!