Friday, September 20, 2024

ಪ್ರಾಯೋಗಿಕ ಆವೃತ್ತಿ

ಅಮುಲ್ ಹಾಲು ಮಾರಾಟದ ಬಗ್ಗೆ ಸುಳ್ಳು ಹೇಳುತ್ತಿರುವ ಜಯನ್ ಮೆಹತಾ AMUL MD ಯೋ? ಬಿಜೆಪಿಯ ರಾಜಕಾರಣಿಯೇ?

✍️ ಶಿವಸುಂದರ್

ಜಸ್ಟ್ ಆಸ್ಕಿಂಗ್

ಇಂದಿನ ಎಲ್ಲಾ ಪತ್ರಿಕೆಗಳಲ್ಲೂ AMUL ಸಂಸ್ಥೆಯ MD ಆಗಿರುವ ಜಯನ್ ಮೆಹತಾ ಅವರು ನಂದಿನಿಗೆ ಅಮುಲ್ ಪ್ರತಿಸ್ಪರ್ಧಿಯಲ್ಲವೆಂದೂ , ತಾವು ಅಮುಲ್ ಬ್ರಾಂಡಿನ ತಾಜಾ ಹಾಲನ್ನು ಕೇವಲ ಈ-ಕಾಮರ್ಸ್ ಪ್ಲಾಟ್ ಫಾರ್ಮ್ ನಿಮ್ದ ಮಾತ್ರ ಮಾರಾಟ ಮಾಡುತ್ತೇವೆಂದು , ಸಾಮೂಹಿಕ ಮಾರಾಟ ಮಾಡುವುದಿಲ್ಲವೆಂದೂ ಹೇಳಿಕೆ ಇತ್ತಿದ್ದಾರೆ .

ಇದು ಅವರೇ ಮೊನ್ನೆ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿದ್ದು ಕನ್ನಡಿಗರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ.

ಎರಡು ದಿನಗಳ ಕೆಳಗೆ ಇವರೇ Financial Express ಗೆ ನೀಡಿರುವ ಸಂದರ್ಶನದಲ್ಲಿ :

“ I would like to indicate that we are only looking at e-commerce/quick commerce channels right now. We are not looking at general trade at the moment. … And a modern trade entry of Amul in Bengaluru will happen only six months later”

https://www.financialexpress.com/industry/amul-vs-nandini-milk-war-hots-up-in-karnataka/3039474/

ಎಂದರೆ ಈ ಸದ್ಯಕ್ಕೆ ತಾವು ಈ-ಕಾಮರ್ಸ್ ಮೂಲಕ ಹಾಲು ಸರಬರಾಜು ಮಾಡುವ ಉದ್ದೇಶ ಹೊಂದಿದ್ದೇವೆ ಮತ್ತು ಇನ್ನಾರು ತಿಂಗಳ ನಂತರ ಬೆಂಗಳೂರಿನಲ್ಲಿ modern trade ಸಾಧನಗಳ ಮೂಲಕ ಪ್ರವೇಶ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ modern trade ಎಂದರೇನು?

ಆರ್ಥಿಕ ಪರಿಭಾಷೆಯಲ್ಲಿ modern trade ಎಂದರೆ ಉತ್ಪಾದಕರಿಂದ ನೇರ ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸಿವ ಸಂಪೂರ್ಣ ಏಕಸ್ವಾಮ್ಯ ವ್ಯವಸ್ಥೆ ಮತ್ತು ಅದಕ್ಕೆ ಬೇಕಿರುವ ಮಳಿಗೆ, ದಾಸ್ತಾನು, ಹಾಗೂ ಮಾಲ್ ಗಳ ಸರಣಿಯನ್ನು ಹೊಂದಿರುವ ದೊಡ್ಡ ದೊಡ್ಡ ಉದ್ಯಮಿಗಳ ಸಂಘಟಿತ ಚಿಲ್ಲರೆ ವ್ಯಾಪಾರ ವಹಿವಾಟು ಎಂದರ್ಥ.

ಅಂದರೆ

ಇನ್ನಾರು ತಿಂಗಳಲ್ಲಿ AMUL ಸಂಸ್ಥೆಯೂ ಸ್ಥಳೀಯ ಹಾಲು ಉತ್ಪಾದಕರಿಂದ ನೇರ ಖರೀದಿಸಿ , ದಾಸ್ತಾನು ಮಾಡಿ, ಗ್ರಾಹಕರಿಗೆ ತಲುಪಿಸುತ್ತಾರೆಂದು ಅರ್ಥ. ಅವರ “ಕೆಂಗೇರಿಯಿಂದ ವೈಟ್ ಫೀಲ್ಡ್ ವರೆಗೂ ತಾಜಾ ಅಮುಲ್ ಹಾಲು ಸವಿಯಿರಿ” ಜಾಹೀರಾತಿನ ಉದ್ದೇಶವೂ ಇದೆ ಆಗಿದೆ.

ಅರ್ಥಾತ್

ಅಮುಲ್ ನಂದಿನಿಗೆ ಪರ್ಯಾಯವಾದ ಮತ್ತು ಪ್ರತ್ಯೇಕವಾದ ಹಾಲು ಮಾರಾಟವನು ಕರ್ನಾಟಕದಲ್ಲಿ ಪ್ರಾರಂಭಿಸಲಿದೆ.

ಇದು ಈಗಾಗಲೇ ಅಮಿತ್ ಷಾ ಅವರು ಸಹಕಾರಿ ಇಲಾಖೆಯ ಮೂಲಕ ಪ್ರಾರಂಭಿಸಿರುವ ಹಾಲು ರಫ್ತ್ತುಯೋಜನೆಯ ಸಹಕಾರಿ-ಕಾರ್ಪೊರೇಟ್ ಹೈಬ್ರಿಡ್ ವ್ಯವಸ್ಥೆಯ ಭಾಗವೂ ಆಗಿದೆ.

ಆದ್ದರಿಂದ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹತಾ ಸುಳ್ಳು ಹೇಳುತ್ತಿದ್ದಾರೆ.

ಸ್ವಾಭಿಮಾನಿ ರೈತರು ಮತ್ತು ಜವಾಬ್ದಾರಿಯುತ ನಂದಿನಿಯ ಗ್ರಾಹಕರು ನಂದಿನಿಯ ಮೇಲಿನ ಅಮುಲ್ ದಾಳಿ ರೈತಾಪಿಯ ಮೇಲಿನ ಕಾರ್ಪೊರೇಟ್ ದಾಳಿಯ ಮೊದಲ ಹೆಜ್ಜೆಎಂದು ಪರಿಗಣಿಸಿ ಹೋರಾಟ ತೀವ್ರಗೊಳಿಸಬೇಕಿದೆ.

ಅಲ್ಲವೇ?
ಜಸ್ಟ್ ಆಸ್ಕಿಂಗ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!