Saturday, May 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಭಾರತೀನಗರ ಬಂದ್

ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನನ್ನು ವಿರೋಧಿಸಿ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಮದ್ದೂರು ತಾಲ್ಲೂಕಿನ ಭಾರತೀನಗರವನ್ನು ಬಂದ್ ಮಾಡಿ, ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀನಗರದ ಸಜನ್ ಕಾಂಪ್ಲೆಕ್ಸ್ ಬಳಿ ಜಮಾಯಿಸಿದ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೆಡಿಕಲ್ ಸ್ಟೋರ್ ಹೊರತು ಪಡಿಸಿ ಇನ್ನೆಲ್ಲ ಅಂಗಡಿ ಮಳಿಗೆಗಳನ್ನು ಬಂದ್ ಗೊಳಿಸಲಾಗಿತ್ತು.  ಸರ್ಕಾರಿ ಬಸ್ ಗಳ ಸಂಚಾರ ಎಂದಿನಂತೆ ಇತ್ತು. ಆದರೆ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಬಸ್ ಗಳ ಸಂಖ್ಯೆ ಇಳಿಮುಖಗೊಂಡವು.

ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿದೆ. ಇಂತಹ ಬರದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬೇಕೆಂಬುವುದು ಎಷ್ಟರ ಮಟ್ಟಿಗೆ ಸರಿ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಕರ್ನಾಟಕ ದಲ್ಲಿ ಕುಡಿಯುವ ನೀರಿಗೂ ತೊಂದರೆ ಉಂಟಾಗುತ್ತಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತಮಿಳುನಾಡಿಗೆ ನೀರು ನೀಡುವಂತೆ ಆದೇಶ ಮಾಡಿರುವುದನ್ನು ವಾಪಸ್ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮದ್ದೂರು-ಮಳವಳ್ಳಿ ಹೆದ್ದಾರಿಯುದ್ದಕ್ಕೂ ಪ್ರತಿಭಟನೆಯಲ್ಲಿ ಸಾಗಿ ಹಲಗೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆ ಸಂಚಾರ ಸಂಪೂರ್ಣ ಜಖಂಗೊಂಡಿತು. ಇನ್ಸ್ಪೆಕ್ಟರ್ ಆನಂದ್ ಅವರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ರಸ್ತೆಯನ್ನು ತೆರವುಗೊಳಿಸಿದರು.

ಪ್ರತಿಭಟನೆಯಲ್ಲಿ ಕ್ಯಾತಘಟ್ಟದ ರವಿಕುಮಾರ್, ಮಾದರಹಳ್ಳಿ ಕೃಷ್ಣ, ಆರ್.ಸಿದ್ದಪ್ಪ, ತೊರೆಚಾಕನಹಳ್ಳಿ ಶಂಕರೇಗೌಡ, ದೇವೇಗೌಡನದೊಡ್ಡಿ ಗಿರೀಶ್, ಚಿಕ್ಕತಿಮ್ಮೇಗೌಡ, ಕಾರ್ಕಹಳ್ಳಿ ಸ್ವರೂಪ್ ಚಂದ್ರ, ಮಹೇಂದ್ರ, ಎ.ಎಸ್.ರಾಜೀವ್, ವೆಂಕಟೇಶ್, ಕೆ.ಪಿ.ದೊಡ್ಡಿ ಶಿವರಾಮು, ಪುಟ್ಟಸ್ವಾಮಿ, ಕಬ್ಬಾಳಯ್ಯ, ಕೆ.ಟಿ.ಸುರೇಶ್, ಕೆಂಪಯ್ಯ, ವೈ.ಬಿ.ಶ್ರೀಕಂಠಸ್ವಾಮಿ, ಹಾಗಲಹಳ್ಳಿ ಬಸವರಾಜೇಗೌಡ, ಚಂದ್ರಶೇಖರ್, ಬಸವರಾಜು, ರಾಮಲಿಂಗೇಗೌಡ, ವಿನು, ಕರಡಕೆರೆ ವಸಂತ, ಯೋಗೇಶ್, ಬಸವರಾಜು, ರಾಜಣ್ಣ, ದೋಚಿಗೌಡ, ಚಿಕ್ಕರಸಿನಕೆರೆ ನಿಂಗಯ್ಯ, ಮೂತರ್ಿ, ಯತೀಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!