Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಅನ್ನದಾನಿ ವಿರುದ್ದದ ಟೀಕೆ ಸರಿಯಲ್ಲ: ಕಾಂತರಾಜು

ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಾರ್ಕಾಲು ಸಿ.ಮಾಧು ಅವರು ಮಾಜಿ ಶಾಸಕ ಕೆ.ಅನ್ನದಾನಿ ಅವರನ್ನು ಏಕವಚನದಲ್ಲಿ ಟೀಕಿಸಿರುವುದು ಸರಿಯಲ್ಲ, ನಮ್ಮನ್ನು ಕೋಮುವಾದಿ ಬಿಜೆಪಿ ಜೊತೆ ಹೋಗಿದ್ದಾರೆ ಎನ್ನುವ ಅವರು ಹಿಂದೆ ಅವರ ನಾಯಕರು ಯಾರೊಂದಿಗೆ ಹೋಗಿ ಅಧಿಕಾರ ಮಾಡಿದ್ದಾರೆ ಎಂದು
ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ತಾಲ್ಲೂಕು ಅಧ್ಯಕ್ಷ ಕಾಂತರಾಜು ತಿಳಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹತ್ತು ವರ್ಷದ ಹಿಂದೆ ಪಿ.ಎಂ.ನರೇಂದ್ರಸ್ವಾಮಿ ಅವರು ಶಾಸಕ, ಸಚಿವರಾಗಿದ್ದಾಗ ಏಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ, ಆದರೆ ಅದನ್ನು ಕೆ.ಅನ್ನದಾನಿ ಅವರು ಮಾಡಿ ತೋರಿಸಿದ್ದಾರೆ ಎಂದರು.

ನಿರ್ಮಾಣವಾಗಿರುವ ಪುತ್ಥಳಿಯನ್ನು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನವರು ಕೊಟ್ಟಿಲ್ಲ, ನಾವೇ ನಿರ್ಮಾಣ ಮಾಡಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಚಪ್ಪಲಿ ಧರಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಿಲ್ಲ, ಬೇಕಿದ್ದರೆ ವಿಡಿಯೋ ಪರಿಶೀಲಿಸಿ ನಂತರ ಅವರು ಮಾತನಾಡಲಿ. ಶಾಶ್ವತವಾಗಿರುವ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಸಂವಿಧಾನ ಜಾಥಾಕ್ಕೆ ಮಾಡಿದ್ದು, ಸಮಂಜಸಲ್ಲ ಎಂದರು.

ಪುರಸಭೆ ಸದಸ್ಯ ಸಿದ್ದರಾಜು ಮಾತನಾಡಿ, ವಕೀಲರೊಬ್ಬರು ಮಾತನಾಡಿ ಶಾಸಕರು ಪಾಳೇಗಾರರು ಎಂದಿದ್ದಾರೆ. ಅದು ಅವರ ಪಕ್ಷಕ್ಕೆ ಸೀಮಿತವಾಗಿರಲಿ. ಅಲ್ಲದೇ ಸಂವಿಧಾನ ಜಾಥಾದಲ್ಲಿ ಗ್ಯಾರಂಟಿ ಯೋಜನೆಗಳ ಹಾಗೂ ಸಚಿವರ ಭಾವಚಿತ್ರಗಳನ್ನು ಮೇಲೆ ಹಾಕಿ ಕೆಳಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ ಅವರ ಚಿತ್ರ ಅಳವಡಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರಾಜು. ಮಲ್ಲೇಶ್,ಉಪೇಂದ್ರ, ಕುಮಾರ್, ಮಲ್ಲಿಕಾರ್ಜುನ, ಲಿಂಗಣ್ಣ, ಆನಂದ್, ಸಣ್ಣಪ್ಪ ಸೇರಿದಂತೆ ಇತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!