Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೈನುಗಾರಿಕೆ ರೈತರಿಗೆ ವರದಾನ : ಶಾಸಕ ಡಾ.ಕೆ.ಅನ್ನದಾನಿ

ಹೈನುಗಾರಿಗೆ ರೈತರಿಗೆ ವರದಾನವಾಗಿದ್ದು, ಪ್ರತಿಯೊಬ್ಬ ರೈತರು ವ್ಯವಸಾಯದ ಜೊತೆಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಅವಲಂಬಿಸಬೇಕೆಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ತಾಲ್ಲೂಕಿನ ಹಂಗ್ರಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಶಾಸಕ ಡಾ.ಕೆ.ಅನ್ನದಾನಿ ಶಂಕುಸ್ಥಾಪನೆ ನೆರೆವೇರಿಸಿದರು.

ತಾಲ್ಲೂಕಿನ ಹಂಗ್ರಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಹಸುಗಳನ್ನು ಸಾಕಿ ಬದುಕುತ್ತಿರುವ ಕುಟುಂಬಗಳು ಸಾಕಷ್ಟು ಇವೆ, ರೈತರ ಅನುಕೂಲಕ್ಕಾಗಿ ಮನ್‌ಮುಲ್ ಕೆಎಂಎಫ್‌ನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಹಸುಗಳನ್ನು ಸಾಕಾಣಿಕೆ ಮಾಡುವುದರ ಮೂಲಕ ಅರ್ಥಿಕತೆಯಲ್ಲಿ ಸದೃಢರಾಗಬೇಕೆಂದು ಹೇಳಿದರು.

ಕೆಎಂಎಫ್ ನಿರ್ದೇಶಕ ವಿಶ್ವನಾಥ್ ಮಾತನಾಡಿ, ರೈತರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶುದ್ದ ಹಾಲುಪೂರೈಕೆ ಮಾಡಿದರೆ ಸಂಘವು ಅಭಿವೃದ್ದಿ ಹೊಂದುವುದರ ಜೊತೆಗೆ ರೈತರು ಅಭಿವೃದ್ದಿ ಹೊಂದಬಹುದು ಎಂದರು.

ತಾಲ್ಲೂಕಿನ ಹಂಗ್ರಪುರ ಗ್ರಾಮದಲ್ಲಿ ಮಹಿಳಾ ಸಹಕಾರ ಸಂಘವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು, ಸಂಘವು ಸ್ವಲ್ಪ ಹಣ ಉಳಿತಾಯ ಮಾಡಿದ್ದರಿಂದ ನಿವೇಶನವನ್ನು ಖರೀದಿಸುವುದರ ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ, ಕೆಎಂಎಫ್ ವತಿಯಿಂದ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಮನ್‌ಮುಲ್ ಮತ್ತು ಕೆಎಂಎಫ್ ವತಿಯಿಂದ ಮೇವು ಕತ್ತರಿಸುವ ಯಂತ್ರ, ಮ್ಯಾಟ್, ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ರೈತರು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಚಂದ್ರಕಲಾ, ಮನ್‌ಮುಲ್ ತಾಲ್ಲೂಕು ಮುಖ್ಯಸ್ಥ ಮಧುಶಂಕರ್, ಸೇರಿದಂತೆ ನಿರ್ದೇಶಕರು ಹಾಗೂ ಮುಖಂಡರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!