Friday, October 11, 2024

ಪ್ರಾಯೋಗಿಕ ಆವೃತ್ತಿ

ಡಾಲರ್ vs ರೂಪಾಯಿ

ನಾಗೇಗೌಡ ಕೀಲಾರ ಶಿವಲಿಂಗಯ್ಯ. ಮಂಡ್ಯ

ಫ್ರೆಂಡ್ಸ್ ಇವತ್ತು ಈ ಡಾಲರ್ ಮತ್ತು ರೂಪಾಯಿಯ ಏರುಪೇರು ಏನು ಅಂತ ಅದಷ್ಟು ಸರಳವಾಗಿ ತಿಳಿದುಕೊಳ್ಳುವ. ನೆನಪಿರಲಿ ಇದೊಂದು ಸರಳ ವಿವರಣೆಯೇ ಹೊರತು ಟೆಕ್ನಿಕಲ್ ವಿವರಣೆ ಅಲ್ಲ ಅನ್ನುವುದು.

ಈಗ ಕೀಲಾರ ದವರು ಡಾಲರ್ ಮತ್ತು ಶಿವಳ್ಳಿ ಯವರು ರೂಪಾಯಿ ಅನ್ನುವ ಹಣ ಉಪಯೋಗಿಸುತ್ತಾರೆ ಅಂತ ಅಂದುಕೊಳ್ಳಿ.

ಕೀಲಾರದವರು ಸಕ್ಕತ್ ಆಗಿ ಕಬ್ಬು ಬೆಳೆಯುತ್ತಾರೆ. ಶಿವಳ್ಳಿಯವರಿಗೆ ಕಬ್ಬು ಬೇಕು. ಅವರು ರೂಪಾಯಿ ತಗೊಂಡು ಕೀಲಾರಕ್ಕೆ ಬರುತ್ತಾರೆ. ಕೀಲಾರದವರಿಗೆ ಶಿವಳ್ಳಿಯವರ ಟೋಮೋಟೋ ಬೇಕಿದ್ದರೆ, ಶಿವಳ್ಳಿಯವರಿಗೆ ಟೋಮೋಟೋ ದಷ್ಟೇ ಕಬ್ಬಿನ ಅವಶ್ಯಕತೆ ಇದ್ದು, ಕೀಲಾರದವರಿಗೆ ಕಬ್ಬಿನಸ್ಟೆ ಟೋಮೋಟೋ ಅವಶ್ಯಕತೆ ಇದ್ದರೆ, ಆಗ ಒಂದು ರೂಪಾಯಿಗೆ ಒಂದು ಡಾಲರ್ ಲೆಕ್ಕದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾರೆ.(ಈಗ ಒಂದು ಡಾಲರ್ ಮತ್ತು ಒಂದು ರೂಪಾಯಿಯ ಬೆಲೆ ಒಂದೇ ಸಮ)

ಶಿವಳ್ಳಿಯವರ ಟೋಮೋಟೋ ಕ್ವಾಲಿಟಿ ಕಮ್ಮಿ ಇದ್ದರೆ ಕೀಲಾರದವರು ಹೇಳುತ್ತಾರೆ, ನೋಡ್ರಪ್ಪಾ ನಮ್ಮ ಕಬ್ಬು ಕ್ವಾಲಿಟಿ ಸಕ್ಕತ್ ಇದೆ, ಆದ್ದರಿಂದ ನಿಮ್ಮ ಹತ್ತಿರ ಟೋಮೋಟೋ ತಗೋಬೇಕು ಅಂದರೆ ಒಂದು ಡಾಲರ್ ಗೆ ಎರಡು ರೂಪಾಯಿ ಕೊಡಿ ಅಂತ ಕೇಳುತ್ತಾರೆ. ಅಲ್ಲಿಗೆ ಒಂದು ಡಾಲರ್ ಎರಡು ರೂಪಾಯಿ ಆಯಿತು.

ಬೆಸಗರಳ್ಳಿ ಅವರೂ ಕೂಡ ಟೋಮೋಟೋ ಬೆಳೆಯುತ್ತಿದ್ದರೆ, ಕೀಲಾರದವರ ಹತ್ತಿರ ಬಂದು ನಾವು ನಿಮಗೆ ಒಂದು ಡಾಲರ್ ಗೆ ಮೂರು ರೂಪಾಯಿ ಕೊಡ್ತಿವಿ ನಮ್ಮ ಹತ್ತಿರ ಟೋಮೋಟೋ ವ್ಯವಹಾರ ಮಾಡಿ ಅನ್ನುತ್ತಾರೆ. ಶಿವಳ್ಳಿಯವರಿಗೆ ಕೀಲಾರದ ಕಬ್ಬು ಬಿಟ್ಟರೆ ಬೇರೆ ಕಡೆ ಕಬ್ಬು ಸಿಗುತ್ತಿಲ್ಲ. ಈ ಕಾರಣದಿಂದ ಶಿವಳ್ಳಿಯವರು ಬೆಸಗರಳ್ಳಿ ಸಮವಾಗಿ ಒಂದು ಡಾಲರ್ ಗೆ ಮೂರು ರೂಪಾಯಿ ಕೊಡಬೇಕಾಗುತ್ತೆ.

ಯಾವಾಗ ಕೀಲಾರದ ಡಾಲರ್ ಗೆ ಡಿಮ್ಯಾಂಡು ಜಾಸ್ತಿ ಆಯಿತು, ಕೀಲಾರದ ಸರ್ಕಾರ, ಡಾಲರ್ ಬೆಲೆ ಎಷ್ಟು ಅಂತ ನಿರ್ಧಾರ ಮಾಡದೇ, ಮಾರ್ಕೆಟ್ ನಿರ್ಧಾರ ಮಾಡಲು ಬಿಡುತ್ತೆ. ಬೇರೆ ದಾರಿ ಇಲ್ಲದೆ ಶಿವಳ್ಳಿ ಮತ್ತು ಬೆಸಗರಳ್ಳಿ ಸರ್ಕಾರಗಳು  ರೂಪಾಯಿ ಬೆಲೆಯನ್ನು  ಮಾಡಲು ಆಗದೆ ಮಾರ್ಕೆಟ್ ಗೆ ಶರಣಾಗುತ್ತಾರೆ.

ಬೆಸಗರಳ್ಳಿ- ಶಿವಳ್ಳಿಯವರು ಬರಿ ಟೋಮೋಟೋ ಬೆಳೆದುಕೊಂಡು ಇದ್ದರೆ ಕೀಲಾರದವರು ಬತ್ತ, ರಾಗಿ, ಜೋಳ ಇತ್ಯಾದಿ ಇತ್ಯಾದಿ ಬೆಳೆದು ಶಿವಳ್ಳಿ, ಬೆಸಗರಳ್ಳಿ ಜನಕ್ಕೆ ಅದೇನು ಯಾವಾಗಲೂ ಟೋಮೋಟೋ ತಿಂದುಕೊಂಡು ಸಾಯುತ್ತೀರ, ಬತ್ತ, ರಾಗಿ, ಜೋಳ ಎಲ್ಲ ತಿನ್ನಿ ಅಂತ ಮನವೊಲಿಸುತ್ತೆ.

ಅದೆಲ್ಲವನ್ನು ತಗೋಬೇಕು ಅನ್ನಿಸಿದರೆ ಶಿವಳ್ಳಿ ಮತ್ತು ಬೆಸಗರಳ್ಳಿಯವರ ಹತ್ತಿರ ಇರೋದು ಟೋಮೋಟೋ ಮಾತ್ರ. ಇವರಿಬ್ಬರ ಮದ್ಯೆ ಅಸಾಧ್ಯ ಸ್ಪರ್ಧೆ ಉಂಟಾಗಿ ತಾವೇ ಮುಂದೆ ಬಂದು ಒಂದು ಡಾಲರ್ ಗೆ ಮೂರು ರೂಪಾಯಿ ಅಲ್ಲ ಐದು ರೂಪಾಯಿ ಕೊಡ್ತಿನಿ, ಹತ್ತು ರೂಪಾಯಿ ಕೊಡ್ತಿನಿ ಅಂತ ಮಾರ್ಕೆಟ್ ನಲ್ಲಿ ಡಿಮ್ಯಾಂಡು ಕ್ರಿಯೆಟ್ ಮಾಡುತ್ತವೆ. ಅಲ್ಲಿಗೆ ಒಂದು ಡಾಲರ್ ಹತ್ತು ರೂಪಾಯಿ ಗೆ ಬಂದು ನಿಲ್ಲುತ್ತೆ.

ಇಸ್ಟು ಅದ ತಕ್ಷಣ ಕೀಲಾರದವರ ಹತ್ತಿರ ಯಾವುದೇ ಊರಿನವರು ಯಾವುದೇ ವಸ್ತು ತಗೊಂಡು ಬಂದಾಗ, ನೋಡ್ರಪ್ಪಾ ಶಿವಳ್ಳಿ, ಬೆಸಗರಳ್ಳಿ ಯವರು ಒಂದು ಡಾಲರ್ ಗೆ ಹತ್ತು ರೂಪಾಯಿ ಕೊಡುತ್ತಿದ್ದಾರೆ, ನಿಮ್ಮದು ಯಾವುದೇ ಹಣ ಇರಲಿ ಒಂದು ಡಾಲರ್ ಗೆ ನಿಮ್ಮ ಹಣದಲ್ಲಿ ಒಂದಕ್ಕಿಂತ ಜಾಸ್ತಿ ಕೊಟ್ಟರೆ ನಿಮ್ಮ ಜೊತೆಗೆ ವ್ಯವಹಾರ ಮಾಡ್ತಿವಿ ಇಲ್ಲ ಅಂದ್ರೆ ಮಾಡಲ್ಲ ಅಂತಾರೆ. ಅಲ್ಲಿಗೆ ಬೇರೆ ಹಳ್ಳಿಯವರ ಹಣ ಡಾಲರ್ ಮುಂದೆ ಶರಣಾಗುತ್ತೆ.

ಎಲ್ಲಿಯವರೆಗೂ ಶಿವಳ್ಳಿ, ಬೆಸಗರಳ್ಳಿಯವರು ಕೀಲಾರದವರ ತರ ಕಬ್ಬು, ಬತ್ತ, ರಾಗಿ, ಜೋಳ ಬೆಳೆಯಲ್ಲವೋ ಅಲ್ಲಿಯವರೆಗೂ ಕೀಲಾರದ ಡಾಲರ್ ಎದುರಿಗೆ ಶಿವಳ್ಳಿ-ಬೆಸಗರಳ್ಳಿ ರೂಪಾಯಿ ಬೆಲೆ ಕಳೆದುಕೊಳ್ಳುತ್ತಲೇ ಹೋಗುತ್ತೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!