Wednesday, May 15, 2024

ಪ್ರಾಯೋಗಿಕ ಆವೃತ್ತಿ

ಸಾಲಮನ್ನಾದಿಂದ ರೈತರಿಗೆ ಅನುಕೂಲವಾಗಿದೆ : ಅನಿತಾ ಕುಮಾರಸ್ವಾಮಿ

ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಇತರರಿಂದ ಯಾವುದೇ ಸಹಕಾರ ಇಲ್ಲದಿದ್ದರೂ ಸಾಲಮನ್ನಾ ಮಾಡಿದ್ದರು, ಇದರಿಂದ ಮಂಡ್ಯದ ರೈತರಿಗೆ ಅನುಕೂಲವಾಗಿದೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಮಂಡ್ಯನಗರದ ಎಸ್.ಬಿ.ಸಮುದಾಯ ಭವನದಲ್ಲಿ ಜೆಡಿಎಸ್‌-ಬಿಜೆಪಿ ಮಹಿಳಾ ಘಟಕದ ವತಿಯಿಂದ ನೆಡೆದ ಜೆಡಿಎಸ್‌-ಬಿಜೆಪಿ ಮಹಿಳಾ ಸಮನ್ವಯ ಸಮಾವೇಶವನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮೈತ್ರಿ ಅಭ್ಯರ್ಥಿಯಾಗಿ ಹೆಚ್ಡಿಕೆ ಸ್ಪರ್ಧೆ ಮಾಡಿದ್ದಾರೆ. ಅವರು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅಂತಾ ಅನ್ಕೊಂಡಿರಲಿಲ್ಲ. ದೇವರೇ ಅವರಿಗೆ ಮನಸ್ಸು ಕೊಟ್ಟಿರಬಹುದು ಮಂಡ್ಯ ಜನರ ಬಗ್ಗೆ ಅಭಿಮಾನ ಹೆಚ್ಚು ಎಂದು ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ.ಹೋಬಳಿ ಮಟ್ಟಕ್ಕೆ ಆಸ್ಪತ್ರೆ, ಶಾಲಾ,ಕಾಲೇಜು, ವಿದ್ಯುತ್ ಸಬ್ ಸ್ಟೇಷನ್, ರಸ್ತೆ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಕೊಡುಗೆ ಅಪಾರವಾಗಿದೆ. ಪ್ರಧಾನಿಯಾಗಿದ್ದಾಗ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ನ್ಯಾಯ ಕೊಡಿಸಿದ್ದಾರೆ ಎಂದರು.

ಎಲ್ಲ ರಾಜಕಾರಣಿಗಳಿಗೂ ಕೆಲಸಮಾಡುವ ಇಚ್ಛಾಶಕ್ತಿ ಇರಬೇಕು. ಮಂಡ್ಯಕ್ಕೆ ಕುಮಾರಸ್ವಾಮಿ, ದೇಶಕ್ಕೆ ಮೋದಿ ಬೇಕು. ನಮ್ಮ ಮಾವನವರು ಕೂಡ ಒಪ್ಪಿದ್ದಾರೆ. ಈ ದೇಶಕ್ಕೆ ಮೋದಿಯಂತಹ ನಾಯಕತ್ವ ಬೇಕು ಅಂದಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟು ಹೆಚ್ಚು ಮತ ಹಾಕಿಸಿ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್‌ ಮುಖಂಡ ಬಿ.ಆರ್.ರಾಮ
ಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯಶಂಕರ್, ನಗರ ಘಟಕದ ಅಧ್ಯಕ್ಷೆ ಜಯಶೀಲಮ್ಮ, ಪದ್ಮಾವತಿ, ನಾಗಮ್ಮ, ಕಲ್ಪನಾ ರಾಮಚಂದ್ರ, ಮಂಗಳ ನವೀನ್
ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!