Wednesday, September 18, 2024

ಪ್ರಾಯೋಗಿಕ ಆವೃತ್ತಿ

ಗುರಿ ಸಾಧನೆಗೆ ಮುಂದಾಗಿ:ಧನರಾಜ್ ಬೋರಳೆ

ಸುಸ್ಥಿರ ಅಭಿವೃದ್ಧಿಯ ಗುರಿಗಳು, ಮಾನವ ಅಭಿವೃದ್ಧಿ ಗುರಿಗಳನ್ನು ಪೂರೈಸುವ ಸಂಘಟನಾ ತತ್ವ. ಅದರಂತೆ ಶಿಬಿರಾರ್ಥಿಗಳು ಸಂಸ್ಥೆಯ ತರಬೇತಿಯನ್ನು ಹಂತ ಹಂತವಾಗಿ ಮೈಗೂಡಿಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಗುರಿಸಾಧನೆಗೆ ಮುಂದಾಗಬೇಕು ಎಂದು ಜಿ. ಪಂ. ಯೋಜನಾ ನಿರ್ದೇಶಕ ಧನರಾಜ್ ಬೋರಳೆ ಸಲಹೆ ನೀಡಿದರು.

ಮಂಡ್ಯ ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ 30 ದಿನಗಳ ಫೋಟೋಗ್ರಫಿ, ವಿಡಿಯೋಗ್ರಫಿ ತರಬೇತಿ ಕಾರ್ಯಕ್ರಮ ಹಾಗೂ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP) ಯ ಫಲಾನುಭವಿಗಳಿಗೆ 10ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಶಿಬಿರಾರ್ಥಿಗಳು ಗಮನವಿಟ್ಟು ಆಸಕ್ತಿಯಿಂದ ತರಬೇತಿಯನ್ನು ಪಡೆಯಬೇಕು. ನಂತರ ತಾವು ಕಲಿತ ವಿದ್ಯೆಯನ್ನು ಬಂಡವಾಳವಾಗಿಟ್ಟುಕೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ ಅವರು ಮಾತನಾಡಿ,ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಸಾಲ ಪಡೆದುಕೊಳ್ಳುವುದು ಮುಖ್ಯವಲ್ಲ. ಅದನ್ನು ಕ್ರಮವಾಗಿ, ಪರಿಪೂರ್ಣವಾಗಿ ಉದ್ಯಮಕ್ಕೆ ಎಂದೇ ಬಳಸಿಕೊಂಡು ಸಾಲವನ್ನು ಮರುಪಾವತಿ ಮಾಡುವುದು ಬಹಳ ಮುಖ್ಯ. ಆಡಂಬರದ ಜೀವನಕ್ಕೆ ಅನಗತ್ಯ ಖರ್ಚು ಮಾಡದೆ ಅಗತ್ಯತೆಗೆ ಬೇಕಾದಷ್ಟು ಹಣವನ್ನು ಉದ್ಯಮದಲ್ಲಿ ಹೂಡಿಕೆ ಮಾಡಿ ಯಶಸ್ವಿ ಉದ್ದಿಮೆದಾರರಾಗಿ ಎಂದು ಹೇಳಿದರು.

ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ಎಂ. ಪಿ.ದೀಪಕ್ ಅವರು ಮಾತನಾಡಿ,ಮಂಡ್ಯದಲ್ಲಿ ಸ್ವುದ್ಯೋಗ, ಸ್ವಾವಲಂಬನೆ ಎಂಬುದು ಬಹಳ ಹಿಂದಿನಿಂದಲೂ ಆಚರಣೆಯಲ್ಲಿದೆ. ಜಿಲ್ಲೆಯಾದ್ಯಂತ ಸ್ಥಳೀಯ ಕೈಗಾರಿಕ ಚಟುವಟಿಕೆಗಳು ಚಾಲ್ತಿಯಲ್ಲಿದ್ದವು. ಆದರೆ ಆಧುನೀಕರಣ ಹಾಗೂ ಜಾಗತೀಕರಣದಿಂದ ದೇಸಿ ಪದ್ಧತಿಗಳು ಮೂಲೆಗುಂಪಾಗಿ ಮಸುಕಾಗಿವೆ.ಆದರೆ ಹಳೆ ಮಂಡ್ಯದ ವೈಭವವನ್ನು, ಉದ್ಯೋಗ ಸೃಷ್ಟಿಸುತ್ತಿದ್ದ ಪರಿಯನ್ನು ಮತ್ತೊಮ್ಮೆ ಸಾಧ್ಯವಾಗಿಸುವುದು ಇಂದಿನ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ. PMSBY, PMJJY, APY ವಿಮಾ ಯೋಜನೆಗಳ ಕುರಿತಾಗಿ ಮಾಹಿತಿ ಪಡೆದು ವಿಮೆಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿ ಸುಧಾಮ ರವರು ಮಾತನಾಡಿ, ಪಿಎಂಇಜಿಪಿ ಯೋಜನೆಯ ಫಲಾನುಭವಿಗಳು ತರಬೇತಿಯಲ್ಲಿ ಪರಿಪೂರ್ಣವಾಗಿ ಭಾಗವಹಿಸಬೇಕು ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯ ಶಿಬಿರಾರ್ಥಿಗಳಿಗೆ ಪಿಎಂಇಜಿಪಿ ಯೋಜನೆಯಲ್ಲಿ ಸಾಲ ಪಡೆಯಲು ಅವಕಾಶವಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

RSETI ಸಂಸ್ಥೆಯ ನಿರ್ದೇಶಕ ವಿ. ವಿವೇಕ್ ಮಾತನಾಡಿ, ಶಿಬಿರಾರ್ಥಿಗಳು ತಮಗೆ ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಂಡು ಯಶಸ್ವಿ ಉದ್ಯಮಿದಾರರಾಗಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ತರಬೇತುದಾರರು ಹಾಗೂ ಶಿಬಿರಾರ್ಥಿಗಳು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!