Friday, September 20, 2024

ಪ್ರಾಯೋಗಿಕ ಆವೃತ್ತಿ

ಗುಜರಾತ್ 40 ಶಾಸಕರ ವಿರುದ್ದ ಕ್ರಿಮಿನಲ್‌ ಪ್ರಕರಣ: ಎಡಿಆರ್ ವರದಿ

ಗುಜರಾತ್‌ ವಿಧಾನ ಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ 182 ಸದಸ್ಯರ ಪಟ್ಟಿಯಲ್ಲಿ 40 ಮಂದಿ ವಿರುದ್ದ ಕ್ರಿಮಿನಲ್‌ ಕೇಸ್‌ ಗಳು ದಾಖಲಾಗಿವೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌(ಎಡಿಅರ್)‌ ಮತ್ತು ಗುಜುರಾತ್‌ ಚುನಾವಣಾ ಕಾವಲು ಸಮಿತಿ ಭಾನುವಾರ ವರದಿ ಮಾಡಿವೆ.

ಎಡಿಆರ್‌ ಚುನಾವಣಾ ಸುಧಾರಣೆಗಳಿಗಾಗಿ ಕಾರ್ಯ ನಿರ್ವಹಿಸುತ್ತದೆ. 182 ಕ್ಷೇತ್ರಗಳಿಂದ ಆಯ್ಕೆಯಾಗಿರುವ ಚುನಾಯಿತರ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿ ಈ ವರದಿ ಮಾಡಿದೆ.

ವರದಿಯ ಪ್ರಕಾರ ಬಿಜೆಪಿಯ 29 ಶಾಸಕರು, ಕಾಂಗ್ರೆಸ್‌ನ 9, ಇಬ್ಬರು ಸ್ವತಂತ್ರ ಶಾಸಕರು, ಸಮಾಜವಾದಿ ಪಕ್ಷದಿಂದ ಆಯ್ಕೆಯಾದ ಒಬ್ಬ ಶಾಸಕನ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಶಾಸಕರಾದ ಅನಂತ ಪಟೇಲ್‌, ಕಿರೀಟ್‌ ಪಟೇಲ್‌, ಹಾಗೂ ಕುಲಭಾಯಿ ರಾಥಾಡ್‌ ಕೊಲೆ ಯತ್ನದ ಆರೋಪಗಳನ್ನು ಎದುರಿಸುತ್ತಿದ್ದಾರೆ. ನಾಲ್ವರು ಶಾಸಕರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಕೇಸ್‌ಗಳನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!