Wednesday, July 24, 2024

ಪ್ರಾಯೋಗಿಕ ಆವೃತ್ತಿ

ಹೆಚ್.ಡಿ.ದೇವೇಗೌಡರ ಜನ್ಮದಿನ ಆಚರಣೆ

ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ 90ನೇ ಜನ್ಮದಿನದ ಪ್ರಯುಕ್ತ ಪಾಂಡವಪುರ ಜೆಡಿಎಸ್ ಪಕ್ಷದಿಂದ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು,ಮಾಜಿ ಪ್ರಧಾನಿ ದೇವೇಗೌಡರು ಇಂದು 90ನೇ ವರ್ಷಕ್ಕೆ ಕಾಲಿಡುತ್ತಿರುವುದು ಸಂತೋಷ ಸಂಗತಿ. ಅವರು ನೂರಾರು ವರ್ಷಗಳ ಕಾಲ ನಮ್ಮ ಜೊತೆಗಿದ್ದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿ ಎಂದರು.

ಈ ನಾಡಿನ ಬಡಜನರು, ರೈತರು,ಕಾರ್ಮಿಕರು,ಜನಸಾಮಾನ್ಯರು,ಹಿಂದುಳಿದ ವರ್ಗದವರ ಪರವಾಗಿ ಮತ್ತಷ್ಟು ಹೋರಾಟ ನಡೆಸಲಿ.ಅವರ ಮಾರ್ಗದರ್ಶನ, ಸಲಹೆ ನಮ್ಮ ಪಕ್ಷಕ್ಕೆ ಅಗತ್ಯವಿದ್ದು,ತಾಯಿ ಚಾಮುಂಡೇಶ್ವರಿ,ಕುಂತಿದೇವಿ ಅವರಿಗೆ ಇನ್ನೂ ಹೆಚ್ಚಿನ ಆಯಸ್ಸು,ಆರೋಗ್ಯ ನೀಡಲಿ ಎಂದು ಶುಭ ಕೋರುವುದಾಗಿ ತಿಳಿಸಿದರು.

ಜೆಡಿಎಸ್ ಪಕ್ಷದ ಮುಖಂಡರಾದ ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಕಸಬಾ ಸೊಸೈಟಿ ಅಧ್ಯಕ್ಷ ಮಹೇಶ್, ಟಿಎಪಿಸಿಎಂಎಸ್ ನಿರ್ದೇಶಕ ಕಣಿವೆ ಯೋಗೇಶ್, ಪುರಸಭೆ ಸದಸ್ಯರಾದ ಶಿವಕುಮಾರ್, ಚಂದ್ರು, ಇಮ್ರಾನ್, ಬಾಬು, ಸುನಿತಾ, ಆದರ್ಶ, ವೀರಶೈವ ಮುಖಂಡ ಎಸ್.ಎ.ಮಲ್ಲೇಶ್, ಚಂದ್ರು ಸೇರಿದಂತೆ ಅನೇಕರಿದ್ದರು.

ಇದನ್ನು ಓದಿ: ವೃದ್ಧಾಶ್ರಮದಲ್ಲಿ ಹೆಚ್.ಡಿ. ದೇವೇಗೌಡರ ಜನ್ಮದಿನ ಆಚರಣೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!