Saturday, May 18, 2024

ಪ್ರಾಯೋಗಿಕ ಆವೃತ್ತಿ

ಚಿತ್ರ ನಮನ : ವೀರಯೋಧರಿಗೆ ಗೌರವ ಸಮರ್ಪಣೆ

ಕಲಾತಪಸ್ವಿ ಟ್ರಸ್ಟ್ ಹಾಗೂ ಡಾ.ಈ.ಸಿ ನಿಂಗರಾಜ್ ಗೌಡ ಫೌಂಡೇಶನ್ ವತಿಯಿಂದ ಸುವರ್ಣ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಪ್ರಜ್ಞಾಭಾರತ 259 ವಿದ್ಯಾರ್ಥಿಗಳು ಮತ್ತು ಚಿತ್ರ ಕಲಾವಿದರಿಂದ ಚಿತ್ರ ನಮನ ,ದೇಶಭಕ್ತಿಗೀತೆ ಮತ್ತು ನೃತ್ಯ ನಮನ, ವೀರಯೋಧರಿಗೆ ಗೌರವ ನಮನ ಹಾಗೂ ಪ್ರಜ್ಞಾಭಾರತ ಪ್ರಶಸ್ತಿ ಪ್ರಧಾನ ಸಮಾರಂಭವು ಮಂಡ್ಯ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕಲಾತಪಸ್ವಿ ಟ್ರಸ್ಟ್ ನ ಗೌರವಾದ್ಯಕ್ಷ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ ನಿಂಗರಾಜ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ಕಡೆ ಮಹಾತ್ಮ ಗಾಂಧಿ ಇನ್ನೊಂದು ಕಡೆ ಸುಭಾಷ್ ಚಂದ್ರಬೋಸ್ ಅವರು ನಾಯಕತ್ವ ನೀಡಿದ್ದರು. ಇದರ ಪರಿಣಾಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇವತ್ತು ಇಡೀ‌ ವಿಶ್ವ ಭಾರತದ ಕಡೆ ತಿರುಗಿ ನೋಡುತ್ತಿದೆ ಎಂದರು.

ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಪ್ರೇರಣೆಗೊಂಡ ಸಾವಿರಾರು ಮಂದಿ ಯುವಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ ಎಂದರು.

ಇದೇ ವೇಳೆ ಮಕ್ಕಳಿಂದ ಹುತಾತ್ಮ ಯೋಧರಿಗೆ ಗೌರವನಮನ ಸಲ್ಲಿಸಲಾಯಿತು. ನಂತರ ಮಕ್ಕಳಿಂದ ಚಿತ್ರಕಲೆ ಸ್ಪರ್ಧೆ ಏರ್ಪಟ್ಟು ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತದನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಉದಯ್ ಕೆ.ಎಂ, ಕದಲೂರು ಡಾ.ಎಸ್ ಮುರುಳಿ, ಎಸ್ ಶರತ್, ಎಸ್.ಬಿ ಅನಿಲ್ ಕುಮಾರ್, ಟಿ.ಎಸ್ ಸತ್ಯಾನಂದ, ಕೆ.ಟಿ ಹನುಮಂತು, ಸಿ.ಪ್ರಶಾಂತ್, ಸಹನಾರಾಜ್, ಬಿ.ಮಂಜುನಾಥ್, ಎಂ.ಶಿವಪ್ರಸಾದ್, ಎಂ.ಸಿ ಲಾವಣ್ಯ, ದಿವ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!