Wednesday, July 24, 2024

ಪ್ರಾಯೋಗಿಕ ಆವೃತ್ತಿ

ಕೃಷಿ ತಜ್ಙರಿಂದ ರೈತರಿಗೆ ಮಾಹಿತಿ ಕಾರ್ಯಕ್ರಮ

ಮದ್ದೂರು ತಾಲ್ಲೂಕಿನ ಭಾರತೀನಗರ ಹೋಬಳಿಯ ಚಿಕ್ಕರಸಿನಕೆರೆ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಮಂಡ್ಯ ಜಿಲ್ಲೆ ವತಿಯಿಂದ ರೈತರಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಹಿಂದೂ ಸಂಸ್ಕ್ರತಿ ಪ್ರಕಾರ ಗಿಡ ನೆಟ್ಟು, ಗೋಪೂಜೆ ಹಾಗೂ ರಾಗಿ ಭತ್ತದ ರಾಶಿಗೆ ಪೂಜೆ ಮಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಶಿವಲಿಂಗೇಗೌಡ ನೆರೆವೇರಿಸಿದರು.

ಕೃಷಿ ಬಗ್ಗೆ ನುರಿತ ತಜ್ಞರು ಸರ್ಕಾರಿ ಇಲಾಖೆಗಳಲ್ಲಿ ರೈತರು ಹೇಗೆ ಉಪಯೋಗ ಪಡೆಯಬೇಕೆಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಸಾವಯವ ಕೃಷಿ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಬಗ್ಗೆ, ಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವ ಬಗ್ಗೆ ರೈತರಿಗೆ ವಿಷಯ ತಜ್ಞರು ಸಮರ್ಪಕ ಮಾಹಿತಿ ನೀಡಿದರು.

ಇಂತಹ ಕಾರ್ಯಕ್ರಮಗಳಲ್ಲಿ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೆಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾದ ಯಲಿಯೂರು ಆನಂದ್, ಜಿಲ್ಲಾ ಮಹಿಳಾ ಪ್ರಮುಖರಾದ ತೊರೆಬೊಮ್ಮನಹಳ್ಳಿ ಪುಟ್ಟಮ್ಮ ಶ್ರೀಕಂಠೇಗೌಡ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಟಕರಾದ ನಾರಾಯಣಸ್ವಾಮಿ ಮತ್ತು ಪಣಕನಹಳ್ಳಿ ವೆಂಕಟೇಶ್, ಹಾಡ್ಯ ರಮೇಶ್ ರಾಜು, ಗಾಜಿ ಸ್ವಾಮಿ ಮತ್ತು ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಎಲ್ಲ ಪ್ರಮುಖ ಪ್ರತಿನಿಧಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!