Saturday, July 13, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ

ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ರಾಮು ಪರವಾಗಿ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ಮಂಡ್ಯ ನಗರದ ಹಲವೆಡೆ ಮತಯಾಚನೆ ಮಾಡಲಾಯಿತು.

ಮಂಡ್ಯ ನಗರ ವ್ಯಾಪ್ತಿಯ ಹಲವು ವಾರ್ಡ್ ಗಳಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಪಿ.ಗೌರೀಶ್ ಅವರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರುಗಳ ಜೊತೆ ಪದವೀಧರರ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಟಿ. ಶ್ರೀಕಂಠೇಗೌಡ ಅವರು, ನಗರದ ಎಲ್ಲಾ 35 ವಾರ್ಡಗಳಲ್ಲಿ ಸಂಚಾರ ಮಾಡಿ ಜೆಡಿಎಸ್ ಅಭ್ಯರ್ಥಿ ರಾಮು ಪರ ಮತಯಾಚನೆ ಮಾಡುತ್ತಿದ್ದು, ರಾಮು ಅವರ ಪರ ಪೂರಕವಾದ ವಾತಾವರಣವಿದ್ದು, ಸಕರಾತ್ಮಕ ಅಭಿಪ್ರಾಯ ಕೇಳಿ ಬರುತ್ತಿದೆ.ರಾಮು ಅವರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮಾಡಿರುವ ಸೇವಾ ಕಾರ್ಯ ಮತದಾರರಿಗೆ ಅರಿವಿದ್ದು ಅವರಿಗೆ ಮತ ಕೊಡಿಸುವ ವಿಶ್ವಾಸವಿದೆ ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ರಾಮು ಅವರು ಪದವೀಧರರು ಹಾಗೂ ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ಶ್ರಮ ಹಾಕಿದ್ದಾರೆ. ಸರ್ಕಾರಿ ನೌಕರರ 5ಮತ್ತು 6ನೇ ವೇತನ ಬರಲು ಹೋರಾಟ ಮಾಡಿದ್ದಾರೆ ಎಂದರು.

ಪದವೀಧರರ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷದಿಂದ ಸ್ಟೈಪಂಡ್ ಕೊಡಲು ಕುಮಾರಸ್ವಾಮಿ ಅವರು ಸೇರಿಸಿದ್ದು ಈ ನಿಟ್ಟಿನಲ್ಲಿ ಪದವೀಧರ ಮತದಾರರು ರಾಮು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಮಂಜುಳಾ ಉದಯ ಶಂಕರ್,ನಗರ ಘಟಕದ ಅಧ್ಯಕ್ಷೆ ಜಯಶೀಲಮ್ಮ, ಜೆಡಿಎಸ್ ಅಲ್ಪಸಂಖ್ಯಾತ ಅಧ್ಯಕ್ಷ ಮಹಮದ್, ಶ್ರೀನಿವಾಸ್, ದಾಸೇ ಗೌಡ,ನಗರಸಭಾ ಮಾಜಿ ಸದಸ್ಯ ಶಂಕರೇ ಗೌಡ,ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!