Sunday, May 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ. ನಾನು ನೇಮಕ: ದಳಪತಿಗಳಿಗೆ ಸೆಡ್ಡು ಹೊಡೆದ ಇಬ್ರಾಹಿಂ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಡಿಎಸ್ ಉಚ್ಚಾಟಿತ ನಾಯಕ ಸಿ.ಕೆ.ನಾನು ಅವರು ನೇಮಕ ನೇಮಕವಾಗಿದ್ದಾರೆ.

ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಕೆ ನಾಣು ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸಿ.ಎಂ ಇಬ್ರಾಹಿಂ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಸಿ.ಎಂ.ಇಬ್ರಾಹಿಂ ಅವರು ಜಾ.ದಳದ ಘಟನುಘಟಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ ಅವರು, ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸಿ.ಕೆ.ನಾನು ಅವರನ್ನು ನೇಮಕ ಮಾಡಲಾಗಿದೆ. ಇದು ನನ್ನ ನಿರ್ಣಯ ಅಲ್ಲ, ರಾಷ್ಟ್ರೀಯ ಕೌನ್ಸಿಲ್ ನಿರ್ಣಯ. ನಿತೀಶ್ ಕುಮಾರ್, ಲಾಲು ಪ್ರಸಾದ್​ ಭೇಟಿಗೆ ಹೋಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜನವರಿಯಲ್ಲಿ ಸಮಾವೇಶ

ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಸಮಾವೇಶಕ್ಕೆ ಅಖಿಲೇಶ್, ನಿತೀಶ್, ರಾಹುಲ್​ ಗಾಂಧಿ ಅವರಿಗೆ  ಆಹ್ವಾನ ನೀಡಲಾಗುವುದು. ಸತ್ತವರ ಫೋಟೋ ಹಾಕಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ, ಜಯಪ್ರಕಾಶ್ ನಾರಾಯಣ್, ಗಾಂಧೀಜಿ‌, ರಾಮಕೃಷ್ಣ ಹೆಗಡೆ ಇವರು ಸತ್ತರೂ ಸಿದ್ದಾಂತದಿಂದ ಜೀವಂತವಾಗಿರುತ್ತಾರೆ. ಕೆಲವರು ಬದುಕಿದ್ದರೂ ಹೆಣ ಎನ್ನುವುದನ್ನು ಹೇಳಲು ಇಷ್ಟಪಡುತ್ತೇನೆ ಎಂದು ದೇವೇಗೌಡ ಅವರಿಗೆ ತಿರುಗೇಟು ನೀಡಿದರು.

ಸಿದ್ಧಾಂತ ಬಲಿ ಕೊಟ್ಟಿದ್ದೀರಿ

ಮಕ್ಕಳ ಹಿತ, ಎರಡು ಸೀಟ್​ಗಾಗಿ ಸಿದ್ಧಾಂತ ಬಲಿ ಕೊಟ್ಟಿದ್ದೀರಿ. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾನುಗೆ ನೀಡಲಾಗಿದೆ. ನಾವು ಮೂರು ಅವಕಾಶ ಕೊಟ್ಟೆ. ಕೊನೆಗೆ ಇವತ್ತು ಅವರನ್ನ(ದೇವೇಗೌಡ) ಅಧ್ಯಕ್ಷಗಿರಿಯಿಂದ ತೆಗೆದು ಸಿಕೆ ನಾನು ಅವರಿಗೆ ಅಧಿಕಾರ ಕೊಟ್ಟಿದ್ದೇವೆ, 92ನೇ ವಯಸ್ಸಿನಲ್ಲಿ ತಮ್ಮ ಸಿದ್ದಾಂತ ಬಿಟ್ಟು ಕೊಟ್ರಿ. ನಾನು ಹುಟ್ಟಿದ್ದು ಸಿದ್ದಾಂತಕ್ಕಾಗಿ. ವಾಜಪೇಯಿಯವರು ಮಂತ್ರಿಯಾಗಲು ಕರೆದರೂ ನಾನು ಹೋಗಲಿಲ್ಲ. ಗೌವರ್ನರ್ ಆಗಲು ಕರೆದದೂ ಹೋಗಲಿಲ್ಲ. 5 ಮಂದಿ ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಕಳೆದ ಡಿ.9ರಂದು ಬೆಂಗಳೂರಿನ ಜೆಡಿಎಸ್ ಕಚೇರಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ಜೆಡಿಎಸ್​ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನಾಣು ಅವರನ್ನು ಕೂಡ ಉಚ್ಚಾಟನೆ ಮಾಡಲಾಗಿತ್ತು. ಆದಾದ ನಂತರ ಈ ಬೆಳವಣಿಗೆ ನಡೆದಿದೆ.

ಈ ಬೆಳವಣಿಗೆಗಳನ್ನು ಗಮನಿಸಿದರೆ ಮಹಾರಾಷ್ಟ್ರದಲ್ಲಿ ಶಿವಸೇನೆ ಇಬ್ಭಾಗವಾದಂತೆ ಇಲ್ಲಿಯೂ ಅಂತದ್ದೆ ಸನ್ನಿವೇಶ ಸೃಷ್ಟಿಯಾಗಬಹುದು ಎನ್ನಲಾಗುತ್ತಿದೆ, ಆದರೆ ಪಕ್ಷದ ಚಿಹ್ನೆಗೆ ಕಾನೂನು ಹೋರಾಟಗಳು ನಡೆಯುವ ಲಕ್ಷಣಗಳಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!