Thursday, September 19, 2024

ಪ್ರಾಯೋಗಿಕ ಆವೃತ್ತಿ

ಗುತ್ತಿಗೆ ಪೌರಕಾರ್ಮಿಕರ ಖಾಯಂಗೊಳಿಸಲು ಒತ್ತಾಯ

ಪಾಂಡವಪುರ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಒತ್ತಾಯಿಸಿ ಧರಣಿ ನಡೆಸಲಾಯಿತು.

ಪುರಸಭೆಯಲ್ಲಿ ತಾತ್ಕಾಲಿಕ‌ ಹುದ್ದೆ ಮಾದರಿಯಲ್ಲಿ‌ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು,ನೀರು ಸರಬರಾಜುದಾರರು, ಕಸ ಸಂಗ್ರಹದಾರರು ಹಾಗೂ ವಾಹನ ಚಾಲಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಪುರಸಭೆ ಮುಂಭಾಗ ಧರಣಿ ನಡೆಸಿ, ನಾವೆಲ್ಲರೂ ಕಳೆದ‌ 20 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇವೆ.

ನಮ್ಮನ್ನು ಖಾಯಂಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸರ್ಕಾರ ನಮ್ಮನ್ನು ಕಾಯಂ ಮಾಡಬೇಕು.ಈಗ ಬರುತ್ತಿರುವ ವೇತನ ಯಾವುದಕ್ಕೂ ಸಾಲುತ್ತಿಲ್ಲ.ನಾವು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ಧರಣಿಯಲ್ಲಿ ಪಾಂಡವಪುರ ಪುರಸಭೆ ಹಂಗಾಮಿ ನೌಕರರಾದ ಗಣೇಶ, ಸದಾಶಿವ,ಮಣಿ,ಮಹೇಶ,ರುಕ್ಕು,ಮಂಜುಳ,‌ನಾಗಮ್ಮ, ಶಿವರಾಜು, ರವಿ, ರಾಮಕೃಷ್ಣ ಸೇರಿದಂತೆ ಅನೇಕರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!