Thursday, May 16, 2024

ಪ್ರಾಯೋಗಿಕ ಆವೃತ್ತಿ

ಕೆ‌.ಆರ್.ಪೇಟೆ ಸರ್ಕಾರಿ ಮಹಿಳಾ ಕಾಲೇಜಿಗೆ ನ್ಯಾಕ್ ಸಮಿತಿಯಿಂದ ಬಿ+ ಶ್ರೇಣಿ

ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯ ಬಿ ಪ್ಲಸ್ ಗ್ರೇಡ್ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಸಂಭ್ರಮಾಚರಣೆ ನಡೆಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ದೇವರಾಜು ಮಾತನಾಡಿ, ಇದೇ ಪ್ರಪ್ರಥಮ ಬಾರಿಗೆ ಭಾರತ ಸರ್ಕಾರದ ನ್ಯಾಕ್ ಸಮಿತಿಯು ಭೇಟಿ ನೀಡಿ ಕಾಲೇಜಿನ ಗುಣಮಟ್ಟದ ಅಧ್ಯಯನ ನಡೆಸಿ ಬಿ’ ಪ್ಲಸ್ ಗ್ರೇಡ್ ನೀಡಿದ್ದರಿಂದ ಕಾಲೇಜಿನ ಹಿರಿಮೆಯು ಬೆಳಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಕಾಲೇಜು ಅತ್ಯುತ್ತಮ ಗುಣಮಟ್ಟದ ಬೋಧನೆ ಹಾಗೂ ಶಿಕ್ಷಣದ ಜ್ಞಾನವನ್ನು ನೀಡುವ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿಯೇ ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ನ್ಯಾಕ್ ಸಮಿತಿಯ ಗಮನ ಸೆಳೆದಿತ್ತು ಎಂದರು.

ಅದರಂತೆ ನ್ಯಾಕ್ ಸಮಿತಿಯು ಕಾಲೇಜಿಗೆ ಭೇಟಿ ನೀಡಿ, ಗುಣಮಟ್ಟವನ್ನು ಅಧ್ಯಯನ ಮಾಡಿ, ಇರುವ ವ್ಯವಸ್ಥೆಯಲ್ಲಿಯೇ ಅತ್ಯುತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡಿ, ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರ ಶೈಕ್ಷಣಿಕ ವಿಕಾಸಕ್ಕೆ ನೆರವಾಗಿದೆ ಎಂಬ ಅಂಶವನ್ನು ಮನಗಂಡು ಬಿ+ ಗ್ರೇಡನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿ+ ಗ್ರೇಡ್ ನೀಡಿರುವುದರಿಂದ ರೂಸೋದಿಂದ ಪ್ರತಿವರ್ಷ ಎರಡು ಕೋಟಿ ರೂ.ಹಣ ಬರಲಿದ್ದು,ಮುಂದಿನ ದಿನಗಳಲ್ಲಿ ಕಾಲೇಜಿಗೆ ಉತ್ತಮವಾದ ಸಭಾಂಗಣ, ವಾಚನಾಲಯ, ಶೌಚಾಲಯ, ವಸತಿನಿಲಯ ಎಲ್ಲವನ್ನೂ ಪ್ರಾರಂಭಿಸಬಹುದು.ಮುಂದೆ ಸ್ನಾತಕೋತ್ತರ ಶಿಕ್ಷಣವನ್ನು ಪ್ರಾರಂಭಿಸಿಬಹುದು ಎಂದು ಹರ್ಷ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಸಿಬ್ಬಂದಿಗಳು ಪರಸ್ಪರ ಸಂತಸ ವ್ಯಕ್ತಪಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವ್ಯವಸ್ಥಾಪಕ ಬಿ.ಎ.ಮಂಜುನಾಥ್, ಐಕ್ಯುಎಸ್ ಸಿ ಸಂಚಾಲಕರಾದ ಶ್ಯಾಮ್, ಪ್ರಾಧ್ಯಾಪಕರಾದ ಮಹದೇವ್, ರೀನಾ, ಪೂರ್ಣಿಮಾ ಅಧೀಕ್ಷಕರು ಗಳಾದ ಶಿವಕುಮಾರ್, ಎಂ.ಎಸ್.ಪುರುಷೋತ್ತಮ್, ನವೀದ್, ಸಿದ್ಧೀಕ್, ಗ್ರಂಥಪಾಲಕ ಪುಟ್ಟಮಾದಪ್ಪ, ಪ್ರಾಧ್ಯಾಪಕರಾದ ಡಾ.ಪಿ.ಕೆ.ಧನಂಜಯ, ಎಸ್.ವಿನಯ್, ಕೆ.ಸಿ.ರಾಜಣ್ಣ, ಡಿ.ಆರ್.ನಾಗೇಶ್, ಚಂದ್ರು, ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!