Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ವಿಧಾನಸಭೆ | ಚುನಾವಣೆಗೆ ಅಗತ್ಯ ಪೂರ್ವ ಸಿದ್ಧತೆ

ವರದಿ : ಪ್ರಭು ವಿ.ಎಸ್.

ಚುನಾವಣಾ ವೇಳಾ ಪಟ್ಟಿಯನ್ವಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 2,11,909 ಲಕ್ಷ ಮತದಾರರಿದ್ದು ಈ ಪೈಕಿ 1,03,049 ಪುರುಷ, 1,08,839 ಮಹಿಳಾ ಹಾಗೂ ಇತರೆ 21 ಮಂದಿ ಒಳಗೊಂಡಿರುವುದಾಗಿ ಚುನಾವಣೆ ಸಂಬಂಧ ಈಗಾಗಲೇ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳುವ ಸಂಬಂಧ ಎರಡು ಸುತ್ತಿನ ಸಭೆ ನಡೆಸಿರುವುದಾಗಿ ಚುನಾವಣಾಧಿಕಾರಿ ಆರ್. ನಾಗರಾಜು ತಿಳಿಸಿದರು.

ಮದ್ದೂರು ಪಟ್ಟಣದ ತಾಲೂಕು ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರು ಏ.13ರಿಂದ ಅಧಿಸೂಚನೆ ಆರಂಭಗೊಂಡಿದ್ದು ಏ.20ರ ಗುರುವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದು ಮೇ.10ರಂದು ಚುನಾವಣೆ ನಡೆಯಲಿರುವುದಾಗಿ ಹೇಳಿದರು.

ಇದೇ ಪ್ರಥಮಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು ವಿಕಲಚೇತನರಿರುವ ಸ್ಥಳಕ್ಕೆ ತೆರಳಿ ಗೌಪ್ಯತೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಮದ್ದೂರು ಕ್ಷೇತ್ರದಲ್ಲಿ 5,140 ವಯೋವೃದ್ಧರು 2,517 ವಿಶೇಷ ಚೇತನರೂ ಸೇರಿದಂತೆ ಒಟ್ಟು 7,657 ಮಂದಿ ವಿಶೇಷ ಮತದಾನಕ್ಕೆ ಅರ್ಹತೆ ಹೊಂದಿದ್ದಾರೆಂದರು.

ಒಟ್ಟು 254 ಮತಗಟ್ಟೆಗಳಿದ್ದು ಈ ಪೈಕಿ 24 ನಗರ, 230 ಗ್ರಾಮೀಣ ಮತಗಟ್ಟೆಗಳೆಂದು ವಿಶೇಷವಾಗಿ 2 ಪಿಂಕ್, 5 ಯತ್ನಿಕ್, 2 ಯುವ ಮತಗಟ್ಟೆ ಸಿಬ್ಬಂದಿಗಳ ನೇತೃತ್ವ 1 ವಿಶೇಷ ಚೇತನರಿಗಾಗಿ ಅಗತ್ಯ ವ್ಯವಸ್ಥೆಯುಳ್ಳ ಮತಗಟ್ಟೆ ಸ್ಥಾಪಿಸಲು ಉದ್ದೇಶಿಸಿರುವುದಾಗಿ ಹೇಳಿದರು.

ಪಾರದರ್ಶಕ ಚುನಾವಣೆ ಸಂಬAಧ 15 ಸೆಕ್ಟರ್ ಅಧಿಕಾರಿಗಳು ನಿಡಘಟ್ಟ, ಕೊಂಗಬೋರನದೊಡ್ಡಿ, ಕೂಳಗೆರೆ, ಮಲ್ಲನಕುಪ್ಪೆ ಸೇರಿದಂತೆ 4 ಭಾಗಗಳಲ್ಲಿ ಚೆಕ್‌ಪೋಸ್ಟ್ ಅಳವಡಿಸಿದ್ದು ಜಾಗೃತದಳದ 12 ಅಧಿಕಾರಿಗಳು 3 ಪಾಳಿಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದು ಹೋಬಳಿಗೆ 2ರಂತೆ 4 ಹೋಬಳಿಗಳಲ್ಲೂ ಸಂಚಾರಿ ತಪಾಸಣಾ ದಳದ 8 ಅಧಿಕಾರಿಗಳು ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಕುರಿತು ವಿವರಿಸಿದರು.

ಈಗಾಗಲೇ ನಿಡಘಟ್ಟ ಚೆಕ್‌ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ವರ್ಗ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 4.99 ಲಕ್ಷ ರೂಗಳನ್ನು ವಶಕ್ಕೆ ಪಡೆದಿದ್ದು ಈ ಸಂಬAಧ ಅಗತ್ಯ ಕ್ರಮವಹಿಸಿರುವುದಾಗಿ ಹೇಳಿದರು.
305 ಬ್ಯಾಲೆಟ್ ಯುನಿಟ್, 305 ಕಂಟ್ರೋಲ್ ಯುನಿಟ್, 331 ವಿವಿ ಟ್ಯಾಟ್ ಸದರಿ ಚುನಾವಣೆಗೆ ಬಳಕೆಯಾಗಲಿದ್ದು ಮಾದರಿ ನೀತಿ ಸಂಹಿತೆ ಹಿನ್ನೆಲೆ ಮದ್ದೂರು ಪುರಸಭೆ ಮತ್ತು ತಾಲೂಕಿನ ಗ್ರಾ.ಪಂ. ವ್ಯಾಪ್ತಿಯ 534 ವಿವಿಧ ಗೋಡೆ ಬರಹ, ಪೋಸ್ಟ್ರರ್‍ಸ್   ಬ್ಯಾನರ‍್ಸ್ಗಳನ್ನು ತೆರವುಗೊಳಿಸಿರುವುದಾಗಿ ತಿಳಿಸಿದರು.

ಚುನಾವಣಾ ಪ್ರಕ್ರಿಯೆ ಸಂಬಂಧ ಈಗಾಗಲೇ ನಿಯೋಜನೆಗೊಂಡಿರುವ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಧಿಕಾರಿಗಳ ಸಭೆ ಕರೆದು ಚರ್ಚಿಸುವ ಜತೆಗೆ ಮುಂದೆ ಕೈಗೊಳ್ಳಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದ್ದು ಪಾರದರ್ಶಕ ಚುನಾವಣೆಗೆ ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಹಕರಿಸುವಂತೆ ಮನವಿ ಮಾಡಿದರು.

ಗೋಷ್ಠಿ ವೇಳೆ ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರ್ ಟಿ.ಎನ್. ನರಸಿಂಹಮೂರ್ತಿ, ಚುನಾವಣಾ ಶಿರಸ್ತೇದಾರ್ ರೂಪ, ಸಹಾಯಕ ಪವನ್‌ಕುಮಾರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!