Friday, September 20, 2024

ಪ್ರಾಯೋಗಿಕ ಆವೃತ್ತಿ

ಹರಿಯಾಣದಲ್ಲಿ ಕಾಂಗ್ರೆಸ್ ಗೆ ಬಹುಮತ| ಮೋದಿಜೀ ಟೀಂ ನಿದ್ದೆಗೆಡಿಸಿದೆ ಚುನಾವಣಾ ಪೂರ್ವ ಸಮೀಕ್ಷೆ!

ಮುಂಬರುವ ಅಕ್ಟೋಬರ್ ನಲ್ಲಿ ನಡೆಯಲಿರುವ ಹರಿಯಾಣದ ವಿಧಾನಸಭೆಯ ಚುನಾವಣಾ ಪೂರ್ವ ಸಮೀಕ್ಷೆಯು ಹೊರಬಿದ್ದಿದ್ದು, ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಲಿದೆ ಎಂಬ ಸಮೀಕ್ಷೆಯು ಅಕ್ಷರಶಃ ಬಿಜೆಪಿ ಮತ್ತು ಮೋದಿಜೀ ಟೀಂ ನ ನಿದ್ದೆಗೆಡಿಸಿದೆ.

ಜನಮತ ಸಂಸ್ಥೆ ಸರ್ವೆ ಪ್ರಕಾರ 99 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ ಕಾಂಗ್ರೆಸ್ 52 ರಿಂದ 54 ಸ್ಥಾನಗಳಿಸುವ ಮೂಲಕ ಸರ್ಕಾರ ರಚಿಸಿದರೆ, ಬಿಜೆಪಿ 28 ರಿಂದ 32 ಸ್ಥಾನಗಳಿಗೆ ತೃಪ್ತಿಪಟ್ಟಿಕೊಳ್ಳಬೇಕಾಗುತ್ತೆ ಎನ್ನುವ ಸಮೀಕ್ಷೆ ವರದಿ ಹೇಳಿದೆ.

ಯಾವಾಗ ಚುನಾವಣೆ ನಡೆಯಲಿದೆ ?

ಹರಿಯಾಣ ವಿಧಾನಸಭಾ ಚುನಾವಣೆಯು ಅಕ್ಟೋಬರ್- 2024ರಲ್ಲಿ ಅಥವಾ ಅದಕ್ಕೂ ಮೊದಲು ನಡೆಯುವ ಸಾಧ್ಯತೆಯಿದೆ, ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿಯು ನವೆಂಬರ್ 3, 2024 ರಂದು ಕೊನೆಗೊಳ್ಳಲಿದೆ.

ಹರಿಯಾಣ ರಾಜ್ಯದಲ್ಲಿ ಪ್ರಸ್ತುತ ಭಾರತೀಯ ಜನತಾ ಪಕ್ಷ (ಬಿಜೆಪಿ), ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಮತ್ತು ಏಳು ಸ್ವತಂತ್ರ ಶಾಸಕರ ಮೈತ್ರಿಕೂಟ ಸೇರಿ ಸರ್ಕಾರವನ್ನು ರಚಿಸಿವೆ. ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿ ಮತ್ತು ದುಷ್ಯಂತ್ ಚೌತಾಲ ಉಪಮುಖ್ಯಮಂತ್ರಿಯಾಗಿದ್ದಾರೆ.

2019ರ ಚುನಾವಣೆಯ ಫಲಿತಾಂಶ ಹೇಗಿತ್ತು ?

ಅಕ್ಟೋಬರ್ 21, 2019 ರಲ್ಲಿ ನಡೆದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿಯು 40 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅಧಿಕಾರ ಹಿಡಿಯಲು ಕನಿಷ್ಠ 50 ಸ್ಥಾನಗಳ ಅವಶ್ಯಕತೆ ಇತ್ತು. ಆದ್ದರಿಂದ ಜನನಾಯಕ ಜನತಾ ಪಕ್ಷ 10 ಶಾಸಕರು ಹಾಗೂ 7 ಸ್ವತಂತ್ರ ಶಾಸಕ ಬೆಂಬಲ ಪಡೆದು, ಚುನಾವಣೋತ್ತರ ಮೈತ್ರಿ ಮಾಡ ಸರ್ಕಾರವನ್ನು ರಚಿಸಿತು. ಕಾಂಗ್ರೆಸ್ 31 ಸ್ಥಾನಗಳೊಂದಿಗೆ ಎರಡನೇ ಸ್ಥಾನವನ್ನು ಗಳಿಸಿದರೆ, ಪ್ರಾದೇಶಿಕ ಸತ್ರಪ್ ಐಎನ್‌ಎಲ್‌ಡಿ ಕೇವಲ 1 ಸ್ಥಾನವನ್ನು ಗಳಿಸಲು ಸಾಧ್ಯವಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!