Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೇ.1 ರಂದು ಬೃಹತ್ ಆರೋಗ್ಯ ಮೇಳ : ಎಸ್. ಪಿ ಸ್ವಾಮಿ

ಮದ್ದೂರು ಉತ್ಸವದ ಅಂಗವಾಗಿ ಶ್ರೀನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ,ರಕ್ತದಾನ ಶಿಬಿರ, ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಮೇ.1ರಂದು ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.

ಈ ಬಗ್ಗೆ ಪಟ್ಟಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮೇ 1 ರಂದು ಮದ್ದೂರು ಪಟ್ಟಣದ ಕ್ರೀಡಾಂಗಣದಲ್ಲಿ
ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದೇವೆ ಎಂದರು.

ಶ್ರೀ ಡಾ‌. ನಿರ್ಮಲಾನಂದನಾಥ ಮಹಾಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ಉಚಿತ ಸಾಮೂಹಿಕ ಸರಳ ವಿವಾಹ, ರಸಮಂಜರಿ ಕಾರ್ಯಕ್ರಮ ಹಾಗೂ ವಯೋವೃದ್ಧ ಮಹಿಳೆಯರಿಗೆ ಉಚಿತ ಕಂಬಳಿ ಹೊದಿಕೆ ವಿತರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದರು.

ಶಿಬಿರದಲ್ಲಿ ಉಚಿತ ವೈದ್ಯಕೀಯ ಪರೀಕ್ಷೆ ನಡೆಸಿ ತಜ್ಞ ವೈದ್ಯರುಗಳಿಂದ ಚಿಕಿತ್ಸೆ ಕೊಡಿಸಲಾಗುವುದು. ಆರೋಗ್ಯ ಶಿಬಿರದಲ್ಲಿ ಭಾಗವಹಿಸುವವರು ಬೆಳಿಗ್ಗೆ 8:30 ಗಂಟೆಗೆ ಆಧಾರ್ ಕಾರ್ಡ್ ಸಮೇತ ಬರಬೇಕೆಂದು ಮನವಿ ಮಾಡಿದರು.

ಆರೋಗ್ಯ ಶಿಬಿರದಲ್ಲಿ ಹೃದ್ರೋಗ,ಮಧುಮೇಹ, ವೈದ್ಯಕೀಯ ಶಸ್ತ್ರ ಚಿಕಿತ್ಸೆ, ನರರೋಗ,ಗರ್ಭಿಣಿ ಮತ್ತು ಸ್ತ್ರೀರೋಗ, ಮಕ್ಕಳ ಚಿಕಿತ್ಸೆ, ಮಾನಸಿಕ ರೋಗ,ಮೂತ್ರಪಿಂಡ,ಕ್ಯಾನ್ಸರ್‌ ತಪಾಸಣೆ,ಕೀಲು ಮತ್ತು ಮೂಳೆ,ಕಣ್ಣಿನ ಪರೀಕ್ಷೆ, ಸ್ತ್ರೀಯರಿಗೆ ಬಿಳಿಸೆರಗು, ಬಂಜೆತನ, ಗರ್ಭಕೋಶದ ತೊಂದರೆ, ಇನ್ನಿತರ ಸ್ತ್ರೀ ರೋಗಗಳಿಗೆ ನುರಿತ ತಜ್ಞರಿಂದ ಚಿಕಿತ್ಸೆ ಕೊಡಲಾಗುವುದು.

ಶಿಬಿರದಲ್ಲಿ ಉಚಿತವಾಗಿ ಸ್ಕ್ಯಾನಿಂಗ್, ಇ.ಸಿ.ಜಿ., ಎಕೋ-ಸ್ಕ್ಯಾನಿಂಗ್, ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿ ಉಚಿತವಾಗಿ ಔಷಧಿ ಹಾಗೂ ಆಯುಷ್ ಕಿಟ್ ವಿತರಿಸಲಾಗುವುದು, ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಹಾಗೂ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು.

ಮಾಹಿತಿಗಾಗಿ ಜನತೆ ವೈ.ಎಸ್. ಶಿವಕುಮಾರ್-9900758946 ಅವರನ್ನು ಸಂಪರ್ಕಿಸಬೇಕೆಂದು ಕೋರಿದರು.

ಇದನ್ನು ಓದಿ : ಸುಣ್ಣ-ಬಣ್ಣ ಕಂಡ ಈಶ್ವರ ದೇವಾಲಯ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!