Saturday, May 18, 2024

ಪ್ರಾಯೋಗಿಕ ಆವೃತ್ತಿ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜು.27ರವರೆಗೆ ಅವಕಾಶ : ಸಚಿವ ಕೆಜೆ ಜಾರ್ಜ್

ಜುಲೈ.26, 27ರವರೆಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಜುಲೈ ತಿಂಗಳ ಬಿಲ್ ಮುಂದಿನ ತಿಂಗಳ ಮೊದಲ ವಾರ ಬರುತ್ತದೆ. ಇನ್ನೆರಡು ತಿಂಗಳಲ್ಲಿ ಕೆಇಬಿ ಕಚೇರಿಗಳಲ್ಲಿ ಅದಾಲತ್ ನಡೆಸುತ್ತೇವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರೆಂಟಿಗಳಲ್ಲಿ ಒಂದಾದ ”ಗೃಹ ಜ್ಯೋತಿ” ಯೋಜನೆ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ​​ಕೆ ಜೆ ಜಾರ್ಜ್ ಅವರು,​ ”ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದವರಿಗಾಗಿ ಈ ಅದಾಲತ್ ಪ್ರಾರಂಭಿಸುತ್ತೇವೆ. ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ” ಎಂದು ತಿಳಿಸಿದರು.

”ಯಾರೆಲ್ಲಾ ಗೃಹಜ್ಯೋತಿಯಡಿ ಅರ್ಜಿ ಹಾಕುವುದರಿಂದ ಬಿಟ್ಟು ಹೋಗಿದ್ದಾರೋ ಅವರಿಗಾಗಿ ಈ ಅದಾಲತ್. ಅದಕ್ಕಾಗಿಯೇ ನಾವು ಈ ಯೋಜನೆಗೆ ಕಟ್ ಆಫ್ ಡೇಟ್ ಇನ್ನೂ ಕೊಡಲಿಲ್ಲ. ಆದಷ್ಟು ಎಲ್ಲಾ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ” ಎಂದು ಜಾರ್ಜ್‌ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರೆಂಟಿಗಳ ಬಗ್ಗೆ ಪ್ರಸ್ತಾಪಿಸಿದರು. ಹೆಚ್​ ಡಿ ಕುಮಾರಸ್ವಾಮಿಯವರ​ ಮಾತಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಿದರು.

”ಯತ್ನಾಳ್ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸುತ್ತಿದ್ದೀರಿ ಅಂದುಕೊಳ್ಳಿ, ಒಂದು ವರ್ಷದಿಂದ ಬಳಸುತ್ತಿದ್ದರೇ ಸರಾಸರಿ ಅಷ್ಟೇ ಬರುತ್ತದೆ. ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡೋ ಅಗತ್ಯ ಇದೆಯಾ? ನೀವು ಪದೇ ಪದೇ ಮಾತಾಡಿದರೇ ಸಂಸದೀಯ ಪಟು ಆಗಲ್ಲ. ನಿಮ್ಮನ್ನು ವಿಪಕ್ಷ ನಾಯಕನಾಗಿಯೂ ಮಾಡಲ್ಲ. ನನಗೆ ಇರುವ ಮಾಹಿತಿ ಪ್ರಕಾರ ನಿಮ್ಮನ್ನು ವಿಪಕ್ಷ ನಾಯಕ ಮಾಡಲ್ಲ” ಎಂದು ಸಿದ್ದರಾಮಯ್ಯ ಅವರು ಕಾಲೆಳೆದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!