Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಸದೆ ಬಿಡುಗಡೆ ಮಾಡಿಸಿರುವ ಅನುದಾನಕ್ಕೆ ಶಾಸಕರಿಂದ ತಡೆ : ಆಕ್ರೋಶ

ಮದ್ದೂರು ತಾಲ್ಲೂಕಿನ ಹೊಟ್ಟೇಗೌಡನ ದೊಡ್ಡಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾರ್ಯಕ್ಕೆ ಸಂಸದರು ಮಾಡಿಸಿರುವ ಅನುದಾನವನ್ನು ತಡೆಹಿಡಿಯಲು ಶಾಸಕ ಡಿ.ಸಿ. ತಮ್ಮಣ್ಣ ಯತ್ನಿಸುತ್ತಿದ್ದಾರೆ ಎಂದು ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದೆ ಸುಮಲತಾ ಅಂಬರೀಶ್ ರವರು ಕಳೆದ ಮಾರ್ಚ್ ತಿಂಗಳಲ್ಲಿ ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪತ್ರ ಬರೆದು 52 ಲಕ್ಷ ರೂಪಾಯಿ ಮಂಜೂರು ಮಾಡಿಸಿ ಕೊಟ್ಟಿದ್ದಾರೆ.

ಆದರೆ ಶಾಸಕ ಡಿ.ಸಿ. ತಮ್ಮಣ್ಣನವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಟೆಂಡರ್ ಕರೆಯಲು ವಿಳಂಬವಾಗುವುದರಿಂದ ಕೆ.ಆರ್.ಐ.ಡಿ.ಎಲ್ (ಲ್ಯಾಂಡ್ ಆರ್ಮಿ) ಗೆ ಅನುದಾನ ವರ್ಗಾವಣೆ ಮಾಡ ಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಪತ್ರ ಬರೆದಿದ್ದಾರೆ.

ಶಾಸಕರು ಸುಮಲತಾ ಅವರು ತಂದಿರುವ ಅನುದಾನ ತಡೆಹಿಡಿಯುವ ಬದಲು ಅವರ ಅನುದಾನವನ್ನು ನಮ್ಮ ಗ್ರಾಮಕ್ಕೆ ನೀಡಲಿ. ಅದು ಬಿಟ್ಟು ಸಂಸದರು ತಂದಿರುವ ಅನುದಾನವನ್ನು ವರ್ಗಾವಣೆ ಮಾಡಿ ಎಂದು ಪತ್ರ ಬರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಟೆಂಡರ್ ಕರೆದು ಕಾಮಗಾರಿ ಮಾಡಿದರೆ ಅವರಿಗೂ ಅವರ ಹಿಂಬಾಲಕರಿಗೆ ಕಮಿಷನ್ ಸಿಗುವುದು ಸಾಧ್ಯವಿಲ್ಲ ಎಂಬ ಉದ್ದೇಶದಿಂದ ಅನುದಾನ ಲ್ಯಾಂಡ್ ಆರ್ಮಿಗೆ ವರ್ಗಾವಣೆ ಮಾಡಿಸಲು ಹೊರಟಿದ್ದಾರೆ ಎಂಬ ಅನುಮಾನ ನಮಗೆ ಮೂಡಿದೆ‌.2018ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗ್ರಾಮದಿಂದ ಡಿಸಿ ತಮ್ಮಣ್ಣನವರಿಗೆ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದ್ದೇವೆ. ಅವರಿಗೆ ನಮ್ಮ ಗ್ರಾಮದ ಮೇಲೆ ವಿಶೇಷ ಕಾಳಜಿ ಇದ್ದರೆ ಅವರ ಅನುದಾನವನ್ನು ಬಿಡುಗಡೆ ಮಾಡಿಸಲಿ ಎಂದು ಸವಾಲು ಹಾಕಿದರು.

ನಮ್ಮ ಪಕ್ಕದ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಶಾಸಕರು ಮೊದಲು ಅದನ್ನು ಸರಿ ಮಾಡಲಿ.ಶಾಸಕರು ತಮ್ಮ ಜೇಬಿಗೆ ಕಮಿಷನ್ ತುಂಬಿಕೊಳ್ಳುವ ಕುತಂತ್ರ ಕೈಬಿಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಲೋಕೇಶ್, ಸಿದ್ದೇಶ್, ಅಭಿಷೇಕ್ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!