Friday, September 20, 2024

ಪ್ರಾಯೋಗಿಕ ಆವೃತ್ತಿ

ಮನ್ ಮುಲ್| ಆನ್ ಲೈನ್ ವ್ಯವಸ್ಥೆಯಡಿ ಹಾಲು ಖರೀದಿ ಸ್ವಾಗತಾರ್ಹ: ನ.ಲಿ.ಕೃಷ್ಣ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು (ಮನ್ ಮುಲ್) ರಾಜ್ಯದ ಇತರೆ ಒಕ್ಕೂಟಗಳ ಮಾದರಿಯಲ್ಲಿ  ಏಕರೂಪದ ಸಾಪ್ಟ್ ವೇರ್ ಅಳವಡಿಕೆ ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಖರೀದಿ ಹಾಗೂ ಲೆಕ್ಕಪತ್ರ ನಿರ್ವಹಣೆ ಮಾಡುವಲ್ಲಿ ವಹಿಸುತ್ತಿರುವ ಕ್ರಮ ಸ್ವಾಗತಾರ್ಹ ಎಂದು ನಗರಕೆರೆ ಹಾಲು ಉತ್ಪಾದಕ ಸಂಘದ ಸಂಘದ ನಾಮನಿರ್ದೇಶಿತ ನಿರ್ದೆಶಕ ನ.ಲಿ.ಕೃಷ್ಣ ತಿಳಿಸಿದ್ದಾರೆ

ಮನ್ ಮುಲ್ ನ ಇಂತಹ ಕ್ರಮವು ಹಾಲಿನ ಪರಿಮಾಣ ಮತ್ತು ಹಾಲಿನ ಗುಣಮಟ್ಟವನ್ನು ಪಾರದರ್ಶಕವಾಗಿ ನಮೂದಾಗಿಸಿ ಸಂಘ ಹಾಗೂ ಉತ್ಪಾದಕರ ನಡುವಿನ ವ್ಯವಹರಣೆಯನ್ನು ಖಾತರಿಗೊಳಿಸುವ ಜೊತೆಗೆ ನಂಬುಗೆಯನ್ನು ಮತ್ತಷ್ಠು ಗಟ್ಟಿಗೊಳಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನವಾಗಿ ಜಾರಿಗೆ ತಂದಿರುವ ಸಾಪ್ಟ್ ವೇರ್ ನಲ್ಲಿ ಹಾಲಿನ ಗುಣಮಟ್ಟಕ್ಕೆ ಪೂರಕವಾದ ಎಸ್ ಎನ್ ಎಪ್ ಹಾಗು ಜಿಡ್ಡಿನ ಅಂಶವನ್ನು ತಂತ್ರಜ್ಞಾನ ಆಧಾರಿತವಾಗಿ ದಾಖಲು ಮಾಡುವುದರಿಂದ ಉತ್ಪಾದಕರಿಗೆ ನೈಜ ಹಾಗು ನಿಖರ ಮಾಹಿತಿ ಲಭ್ಯವಾಗಲಿದೆ, ಅಲ್ಲದೆ ಹಾಲಿನ ಲೆಕ್ಕಪತ್ರಗಳು ಕೂಡ ಈ ಸಾಪ್ಟ್ ವೇರ್ ನಲ್ಲಿ ಸುಧಾರಿತ ತಂತ್ರಜ್ಞಾನದ ಆಧಾರಿತವಾಗಿ ದಾಖಲಿಸಲ್ಪಡುವುದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಈ ಮೊದಲು ಬೇರೆ ಬೇರೆ ಹೆಸರಿನ ಖಾಸಗಿ ಸಾಪ್ಟ್ ವೇರ್ ಗಳನ್ನು ಹಾಲು ಉತ್ಪಾದಕರ ಸಂಘಗಳು ಅಳವಡಿಕೆ ಮಾಡಿಕೊಂಡಿದ್ದವು, ಈ ಸಾಪ್ಟ್ ವೇರ್ ನಲ್ಲಿ ಸಮಗ್ರವಾದ ಅವಕಾಶ ಮತ್ತು ಪೂರಕ ನಿರ್ವಹಣಾ ವ್ಯವಸ್ಥೆ ಕೊರತೆಗಳು ಇದ್ದವು. ಈ ಸಾಪ್ಟ್ ವೇರ್ ಗಳ ನಿರ್ವಹಣೆ ವೆಚ್ಚವಾಗಿ ಸಂಬಂದಿಸಿದ ಕಂಪನಿಗಳಿಗೆ ಹಾಲು ಉತ್ಪಾದಕರ ಸಂಘಗಳು ವಾರ್ಷಿಕವಾಗಿ ಎಂಟು ಸಾವಿರ ಪಾವತಿಸಬೇಕಾಗಿದ್ದು, ಇದೀಗ ಅಳವಡಿಕೆಯಾಗಿರುವ ಸಾಪ್ಟ್ ವೇರ್ ಗೆ ಯಾವುದೆ ನಿರ್ವಹಣಾ ಶುಲ್ಕ ಪಾವತಿಸಬೇಕಾಗಿಲ್ಲವಾದ್ದರಿಂದ ಸಂಘಗಳಿಗೆ ಆರ್ಥಿಕ ಹೊರೆಯು ತಗ್ಗಲಿದೆ ಎಂದು ಅವರು ತಿಳಿಸಿದ್ದಾರೆ.

ನೂತನ ಕಾಮನ್ ಸಾಪ್ಟ್ ವೇರ್ ನಲ್ಲಿ ಪ್ರತಿ ಹಾಲು ಉತ್ಪಾದಕರ ವ್ಯವಹರಣೆಯ ವೈಯಕ್ತಿಕ ದಾಖಲೆಗಳನ್ನು ಸಾಕಷ್ಠು ವರ್ಷಗಳ ಕಾಲ ಸಂರಕ್ಷಿಸುವ ಅವಕಾಶ ಇರಲಿದೆ, ಯಾವಾಗ ಬೇಕಿದ್ದರೂ ವೈಯಕ್ತಿಕ ವಿವರ, ಸಂಘವು ಸರಬರಾಜು ಮಾಡಿದ ಹಾಲಿನ ವಿವರ ಹಣ ಪಾವತಿ ವಿವರ ಪರಿಶೀಲಿಸುವ ಸೌಲಭ್ಯ ಗ್ರಾಹಕರಿಗೆ ಮತ್ತು ಆಸಕ್ತರಿಗೆ ಇರಲಿದೆ ಎಂದು ಪೂರಕ ಅಂಶಗಳ ಮಾಹಿತಿ ನೀಡಿದ್ದಾರೆ.

ಸಂಘದ ಕನಿಷ್ಠ ವ್ಯವಹಾರದಲ್ಲಿ ಪಾಲ್ಗೊಂಡ ಸದಸ್ಯರ ವಿವರ ಕೂಡ ಈ ತಂತ್ರಾಂಶದಲ್ಲಿ ಒಳಗೊಂಡಿದ್ದು ಸ್ತಳೀಯವಾಗಿ ಹಾಲು ಕೊಂಡುಕೊಂಡವರ ಮಾಹಿತಿಯು ಒಳಗೊಂಡಿರುತ್ತದೆ. ಜೊತೆಗೆ ಪ್ರತಿ ಹಾಲು ಉತ್ಪಾದಕರ ಸಂಘಕ್ಕೆ ಪೂರೈಕೆ ಮಾಡಿದ ಹಾಲಿನ ಮಾಹಿತಿ ಮರುಕ್ಷಣವೆ ಅವರ ದೂರವಾಣಿ ಗೆ ಎಸ್ ಎಮ್ ಎಸ್ ಸಂದೇಶ ನೀಡುವ ವ್ಯವಸ್ಥೆಯು ಅಳವಡಿಕೆಯಾಗಲಿದ್ದು ಉತ್ಪಾದಕರಿಗೆ ತತಕ್ಷಣ ನಿಖರ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.

nudikarnataka.com KMF

ಈ ಮೊದಲಿನ ಸಾಪ್ಟ್ ವೇರ್ ಬಳಕೆ ವೇಳೆ ಹಾಲಿನ ಪ್ರೊತ್ಸಾಹ ಧನದ ಲೆಕ್ಕ ಹಾಗೂ ಹಾಲಿನ ಹಣವನ್ನು ಕಾರ್ಯದರ್ಶಿಯವರು ಪ್ರತ್ಯಕವಾಗಿ ಕಂಪ್ಯೂಟರ್ ನಲ್ಲಿ ಸಿದ್ದಪಡಿಸಿಕೊಡಬೇಕಾಗಿತ್ತು. ಆದರೆ ನೂತನ ಕಾಮನ್ ಸಾಪ್ಟ್ ವೇರ್ ಈ ಲೆಕ್ಕವನ್ನು ಸಿದ್ದಪಡಿಸಿಕೊಡಲಿದೆ, ಇದರಿಂದ ನೌಕರರ ಸಮಯ ಶ್ರಮ ಹಾಗು ಸಂಘದ ಹಣ ಉಳಿತಾಯವಾಗಲಿದೆ ಎಂದಿದ್ದಾರೆ.

ಈ ಸಾಪ್ಟ್ ವೇರ್ ನಲ್ಲಿ ಹಾಲಿನ ಪ್ರಮಾಣ ಎಸ್ ಎನ್ ಎಪ್ ಜಿಡ್ಡಿನಾಂಶ ಮತ್ತಿತರ ದಾಖಲೆಗಳನ್ನು ಅತ್ಯಗತ್ಯ ಇದ್ದಾಗ ಬದಲಿಸಲು ಅಯ್ಕೆ ಇದ್ದು, ಇಂತಹ ತಿದ್ದುಪಡಿಯ ವಿವರವು ಹಾಲು ಉತ್ಪಾದಕರ ಮೊಬೈಲ್ ಗೆ  ಪಾರ್ಮರ್ಸ್ ಆಪ್ ಮೂಲಕ ಕೆಂಪುಬಣ್ಣದ ಮೂಲಕ ನಮೂದಾಗಲಿದ್ದು, ಹಾಲು ಉತ್ಪಾದಕರ ಗಮನಕ್ಕೆ ಮಾಹಿತಿ ದೊರಕಲಿದ್ದು ಯಾವುದೇ ವ್ಯತ್ಯಯಗಳಿಗೆ ಸಂಶಯಗಳಿಗೆ ಅವಕಾಶವಿರುವುದಿಲ್ಲ ಎಂದು ತಂತ್ರಾಂಶದ ಉಪಯುಕ್ತತೆ ಕುರಿತು ಶ್ಲಾಘಿಸಿದ್ದಾರೆ.

ಇದರ ಬಳಕೆಯಿಂದ ಹಾಲು ಉತ್ಪಾದಕರ ಸಂಘದ ವ್ಯವಹರಣೆ ಸಂಪೂರ್ಣ ಪಾರದರ್ಶಕವಾಗಲಿದೆ,
ಇದಲ್ಲದೆ ಮುಂದೆ “ಪಾರ್ಮರ್ ಆಪ್” ಹಾಲು ಉತ್ಪಾದಕರ ಮೊಬೈಲ್ ಗೆ ಅಳವಡಿಸಿಕೊಡಲಿದ್ದು ಇದರಲ್ಲಿ ರೈತರು ಹಾಲು ಉತ್ಪಾದಕರ ಸಂಘಕ್ಕೆ ಪಶು ಆಹಾರದ ಬೇಡಿಕೆಯನ್ನು ಸಲ್ಲಿಸುವ ಜೊತೆಗೆ, ಕಾಲಕಾಲಕ್ಕೆ ಬೇಕಾದ ಮುಂದುವರೆದ ಮಾಹಿತಿಯನ್ನು ಮನ್ ಮುಲ್ ನಿಂದ ಪಡೆಯಬಹುದಾಗಿರುತ್ತದೆ.

ಈ ಎಲ್ಲಾ ಕಾರಣಗಳ ಹಿನ್ನಲೆಯಲ್ಲಿ ಪಾರದರ್ಶಕ ವ್ಯವಹರಣೆಗೆ ಅವಕಾಶ ನೀಡುವ ಕಾಮನ್ ಸಾಪ್ಟ್ ವೇರ್ ಅಳವಡಿಕೆ ಹಾಗೂ ಆನ್ ಲೈನ್ ವ್ಯವಸ್ಥೆಯಡಿ ಹಾಲು ಖರೀದಿ ಹಾಗೂ ಇಂಟರ್ ಪೇಸ್ ಮೂಲಕ ಜಿಡ್ಡಿನಾಂಶ ಅನ್ ಲೈನ್ ಮೂಲಕ ಅಳವಡಿಕೆ ಕ್ರಮ ಸ್ವಾಗತಾರ್ಹ ಮತ್ತು ಹಾಲು ಉತ್ಪಾದಕರಿಗೆ ಸಾಕಷ್ಠು ಅನುಕೂಲಕರವಾಗಿದೆ ಎಂದಿದ್ದಾರೆ

ಇದಲ್ಲದೆ ಹಾಲಿನ ಗುಣಮಟ್ಟ ಕಾಯ್ದುಕ್ಕೊಳ್ಳಲು ರಾಸುಗಳ ಪಾಲನೆ ಪಶು ಆಹಾರ ನೀಡುವ ಪದ್ದತಿ ಕುರಿತು ಮಾಹಿತಿ ಶಿಕ್ಷಣ ಸಂವಹನಕ್ಕಾಗಿ ಮನ್ ಮುಲ್ ನಲ್ಲಿ ಇರುವ ಪಶು ವೈದ್ಯರನ್ನೊಳಗೊಂಡ ತರಬೇತಿ ತಂಡದವರಿಂದ ಹಾಲು ಉತ್ಪಾದಕರ ಸಂಘದವರು ಉತ್ಪಾದಕರಿಗೆ ಮಾಹಿತಿ ಕೊಡಿಸುವಲ್ಲಿ ಇರುವ ಅವಕಾಶ ಬಳಕೆಮಾಡಿಕ್ಕೊಳ್ಳಬೇಕಾಗಿದೆ ಎಂದಿದ್ದಾರೆ.

ಮಾರುಕಟ್ಟೆಯಲ್ಲಿ ನಂದಿನಿ ಬ್ರಾಂಡ್ ಗೆ ಇರುವ ವಿಶ್ವಾಸಾರ್ಹತೆ ಯನ್ನು ಕಾಪಿಟ್ಟುಕ್ಕೊಳ್ಳುವ ಜೊತೆಗೆ ‘ಗೋವಿನಿಂದ ಗ್ರಾಹಕರವರೆಗೆ ಪರಿಶುದ್ದತೆ’ ಕಾಯ್ದುಕ್ಕೊಂಡು ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆ ಎದುರಿಸಿ ಕೆಎಂಎಫ್ ಹಾಲು ಉತ್ಪಾದಕರ ಹಿತ ಕಾಯುವಲ್ಲಿ ಮತ್ತು ನಿರಂತರ ಮಾರುಕಟ್ಟೆ ಕಂಡುಕ್ಕೊಳ್ಳುವಲ್ಲಿ ಇಂತಹ ಕ್ರಮಗಳನ್ನು ಹಾಲು ಉತ್ಪಾದಕರು ನೈಜ ನೆಲೆಯಲ್ಲಿ ವಿಮರ್ಶಿಸಿ ಅರ್ಥೈಸಿಕ್ಕೊಂಡು ಪ್ರೋತ್ಸಾಹಿಸುವಂತೆ ನ.ಲಿ.ಕೃಷ್ಣ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!