ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿದ್ದು,ಅವುಗಳನ್ನು ತಕ್ಷಣ ಬಗೆಹರಿಸುವಂತೆ ಬಿಜೆಪಿ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ರಸ್ತೆ, ಬೀದಿದೀಪ,ಸ್ವಚ್ಚತೆ ಸೇರಿದಂತೆ ಅನೇಕ ಮೂಲಭೂತ ಸಮಸ್ಯೆಗಳನ್ನು ಪುರಸಭೆ ಕೂಡಲೇ ಪರಿಹರಿಸಬೇಕು ಎಂದು ಬಿಜೆಪಿ ಸದಸ್ಯ ಅಶೋಕ್, ನಾಮ ನಿರ್ದೇಶಿತ ಸದಸ್ಯರಾದ ಶ್ರೀನಿವಾಸನಾಯಕ, ರಾಮು, ಶ್ರೀಧರ್, ಹೋರಾಟಗಾರ ಹೊನ್ನಗಿರಿಗೌಡ ಹಾಗೂ ಮುಖಂಡರ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿಗೆ ಮನವಿ ಸಲ್ಲಿಸಿ, ಮುಂದಿನ ಪುರಸಭೆ ಸಾಮಾನ್ಯ ಸಭೆಗೆ ವಿಷಯ ಪ್ರಸ್ತಾಪಿಸಲು ನಮೂದಿಸಬೇಕು ಎಂದು ಕೋರಿದರು. ಪಾಂಡವಪುರ ಪಟ್ಟಣದಲ್ಲಿರುವ ಸಾಕಷ್ಟು ಸಮಸ್ಯೆ ವಿಷಯವನ್ನು ಮನವಿಯಲ್ಲಿ ನಮೂದಿಸಲಾಗಿದೆ.