ಅಕಾಲಿಕವಾಗಿ ಮರಣಕ್ಕೆ ತುತ್ತಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆರ್ಥಿಕವಾಗಿ ಸಹಾಯ ಹಸ್ತ ಚಾಚುವ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಅವರ ಸೇವಾಕಾರ್ಯವನ್ನು ಶ್ರೀರಂಗಪಟ್ಟಣ ತಾಲೂಕಿನ ಜನರು ಶ್ಲಾಘಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ಮಾಯಣ್ಣನ ಕೊಪ್ಪಲು ಗ್ರಾಮದಲ್ಲಿ ಇತ್ತೀಚೆಗೆ ಮರಣ ಹೊಂದಿದ ಮಂಜುನಾಥ್, ಶಿವಕುಮಾರ್, ಲಕ್ಷ್ಮಮ್ಮ, ನಂದೀಶ್ ಹಾಗೂ ಜವರಪ್ಪ ನಿವಾಸಗಳಿಗೆ ಭೇಟಿ ನೀಡಿದ ಇಂಡುವಾಳು ಸಚ್ಚಿದಾನಂದ ಕುಟುಂಬಸ್ಥರಿಗೆ ನಿಮ್ಮ ಕುಟುಂಬದ ಸದಸ್ಯರ ಸಾವು ನನಗೂ ಸಾಕಷ್ಟು ನೋವು ತಂದಿದೆ.ನಿಮ್ಮ ಕುಟುಂಬದ ಜೊತೆ ನಾನಿರುತ್ತೇನೆ ಎಂದು ಸಾಂತ್ವನ ಹೇಳಿದರು.
ಬಳಿಕ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡಿದರು. ನಂತರ ಅದೇ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಕಮಲಮ್ಮ ಮತ್ತು ವಿಜಯಮ್ಮರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಚ್ಚಿದಾನಂದ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರವಿ ಪಟೇಲ್, ಯಲಿಯೂರು ನವೀನ್, ಮಾಜಿ ಗ್ರಾ.ಪಂ ಸದಸ್ಯ ಕಾಡೇಗೌಡ, ಬಿಜೆಪಿ ಮುಖಂಡರಾದ ನವೀನ್, ತಾ.ಪಂ ಮಾಜಿ ಸದಸ್ಯ ವೆಂಕಟಾಚಾರ್, ಮುಖಂಡರಾದ ಬೋರೇಗೌಡ್ರು, ಗುತ್ತಿಗೆದಾರರಾದ ನಿಂಗಣ್ಣ, ನಾಗಲಿಂಗೇಗೌಡ, ರಾಜ್‌ಕುಮಾರ್, ಕುಮಾರ್, ಆತ್ಮ, ಅಭಿಷೇಕ್, ಚೆಲುವರಾಜ್, ಕಾರ್ತಿಕ್, ರಾಘು, ಹನುಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.