Friday, May 17, 2024

ಪ್ರಾಯೋಗಿಕ ಆವೃತ್ತಿ

ಹಿಂದಿ ಹೇರಿಕೆ ಪರಭಾಷಿಕರ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ

ಕನ್ನಡ ನಾಡು-ನುಡಿ-ನೆಲಜಲ, ಸಂಸ್ಕೃತಿ, ಕನ್ನಡಿಗರ ಉದ್ಯೋಗಕ್ಕೆ ಕುತ್ತು ಬಂದಿದೆ. ಹಿಂದಿ ಹೇರಿಕೆ  ಪರಭಾಷಿಕರ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಕದಂಬ ಸೈನ್ಯದ ಕಾರ್ಯಕರ್ತರು ಮಂಡ್ಯ ನಗರದ ಗಾಂಧಿಭವನದ ಬಳಿ ಪ್ರತಿಭಟಿಸಿದರು.

2008ರಿಂದ ಬೆಳಗಾವಿ ಜಿಲ್ಲೆ ಹಿರೇಬಾಗವಾಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಗಜ್ಯೋತಿ ಬಸವಣ್ಣನವರ ಮತ್ಥಳಿ ಅನಾವರಣ ಮಾಡಲೇ ಇಲ್ಲ. ಕನ್ನಡ ಚಕ್ರವರ್ತಿ ಚಾಲುಕ್ಯ ಪರಮೇಶ್ವರ, ದಕ್ಷಿಣಪಥೇಶ್ವರ, ಇಮ್ಮಡಿ ಪುಲಕೇಶಿ, ಜಗಜ್ಯೋತಿ ಬಸವಣ್ಣನವರ ಮತ್ಥಳಿಗಳಿಗೆ ಸ್ಥಳ ಅವಕಾಶ ನೀಡಿದೆ, ಚಾಲುಕ್ಯ ರಾಜಧಾನಿ ಬಾದಾಮಿ ರಾಮದುರ್ಗ ರಸ್ತೆ ಪಕ್ಕದಲ್ಲಿ ಬಿದ್ದಿವೆ. ಗಾಳಿ ಮಳೆ, ಬಿಸಿಲಿಗೆ ಸಿಲುಕಿವೆ. ರಾಜ್ಯಸರ್ಕಾರ ಮತ್ಥಳಿಗಳನ್ನು ಸ್ಥಾಪಿಸಲು ಇಚ್ಛಾಶಕ್ತಿ ಇಲ್ಲವೇ ಇಲ್ಲ. ಆದರೆ ಮರಾಠ ಛತ್ರಪತಿ ಶಿವಾಜಿ ಮತ್ಥಳಿಗಳನ್ನು ಬೆಳಗಾವಿ ಮತ್ತು ಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸಲು ತೀರಾ ಆಸಕ್ತಿ ವಹಿಸುತ್ತಿದ್ದಾರೆ ಎಂದು ದೂರಿದರು.

ಬೆಳಗಾವಿ ಜಿಲ್ಲೆ ಬಿಜೆಪಿ ಕಾಂಗ್ರೆಸ್ ಶಾಸಕರು ಒಂದೇ ಸ್ಥಳದಲ್ಲಿ ಛತ್ರಪತಿ ಶಿವಾಜಿ ಮತ್ಥಳಿಯನ್ನು ಮುಖ್ಯಮಂತ್ರಿ ಉದ್ಘಾಟನೆ ಮಾಡಿದರೆ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ‌ ಎರಡನೇ ಸಲ ಉದ್ಘಾಟನೆ ಮಾಡಿ ಮರಾಠಿಗರ ಗುಲಾಮರಾಗಿದ್ದಾರೆ. ಛತ್ರಪತಿ ಶಿವಾಜಿ ಶಿವಚರಿತಾ ಧ್ವನಿಬೆಳಕು ಕಾರ್ಯಕ್ರಮ ಮರಾಠಿಗರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿ ಮಹಾರಾಷ್ಟ್ರ ರಾಜ್ಯದ ದೇವಸ್ಥಾನಗಳಿಗೆ ಕಳಿಸಿಕೊಡುತ್ತಿದ್ದಾರೆ. ಇದರ ಪರಿಣಾಮ ಬೆಳಗಾವಿ ಜಿಲ್ಲೆಯನ್ನು ಮರಾಠಿಗರಿಗೆ ಕೊಡುವ ಹುನ್ನಾರವಾಗಿದೆ. ಓಟ್‌ ಬ್ಯಾಂಕ್‌ಗಾಗಿ ಮರಾಠಿಗರ ಕಾಲಿಗೆ ಬೀಳುತ್ತಿದ್ದಾರೆ. ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಕಿಡಿಕಾರಿರು.

ರಾಜ್ಯಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದೆ. ದಾವಣಗೆರೆ ಜಿಲ್ಲೆಯಲ್ಲಿರುವ ಷಹಾಜಿ ಮಹಾರಾಜರ ಸಮಾಧಿಗೆ 5 ಕೋಟಿ ರೂ. ಬಿಡುಗಡೆ ಮಾಡಿದೆ. ಕನ್ನಡಿಗರ ಸ್ವಾಭಿಮಾನದ ನೆಲೆಯಾದ ಕದಂಬರ ರಾಜಧಾನಿ ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ 5 ವರ್ಷಗಳಿಂದ ಒಂದು ರೂಪಾಯಿ ಬಿಡುಗಡೆ ಮಾಡಲಿಲ್ಲ. ಸರ್ಕಾರವು ಕನ್ನಡಿಗರಿಗೆ ಮಲತಾಯಿಧೋರಣೆ, ಮರಾಠಿಗರಿಗೆ ಪುರಸ್ಕಾರ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!