Thursday, September 19, 2024

ಪ್ರಾಯೋಗಿಕ ಆವೃತ್ತಿ

ಪರಿಷ್ಕೃತ ಪಠ್ಯ ಪುಸ್ತಕ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ರೋಹಿತ್ ಚಕ್ರತೀರ್ಥ ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ಮತ್ತು ಹಿರಿಯ ಸಾಹಿತಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ ರೈತಸಭಾಂಗಣ ಆವರಣದಲ್ಲಿನ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಮತ್ತು ಹಿರಿಯ ಸಾಹಿತಿಗಳು ಮೆರವಣಿಗೆಯ ಮೂಲಕ ಆರ್.ಪಿ. ರಸ್ತೆಯಲ್ಲಿ ಸಾಗಿ ಡಿಡಿಪಿಐ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಸಿದರು.

ಹಿರಿಯ ಸಾಹಿತಿ, ಚಿಂತಕ ಪ್ರೊ. ಜಯಪ್ರಕಾಶ್ ಗೌಡ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಬ್ರಾಹ್ಮಣೀಕರಣ ಗೊಳಿಸಿರುವ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸದೆ ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ರಾಷ್ಟ್ರಕವಿ ಕುವೆಂಪು ರಚಿತ ಮೂಲ ನಾಡಗೀತೆಯನ್ನು ತಿರುಚಿ ಅಶ್ಲೀಲ ಪದಗಳಿಂದ ರಚಿಸಿರುವ ನಾಡಗೀತೆ ಶೈಲಿಯ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವ್ಯಂಗ್ಯವಾಡಿ ಇಡೀ ನಾಡಿನ ಜನತೆಗೆ ಅವಮಾನಿಸಿರುವ ವಿಕೃತ ಮನಸ್ಸಿನ ವ್ಯಕ್ತಿ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವ ಸರ್ಕಾರದ ಕ್ರಮವನ್ನು ಖಂಡಿಸಿ,ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ ಚಾಮಲಾಪುರ ಮಾತನಾಡಿ, ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥನ್ನು ಬಂಧಿಸಬೇಕು ಮತ್ತು ವಿತರಣೆಗೊಂಡಿರುವ ಪುಸ್ತಕಗಳನ್ನು ವಾಪಸ್ ಪಡೆದು,ಹಿಂದಿನ ಪಠ್ಯಪುಸ್ತಕವನ್ನು ವಿತರಿಸಬೇಕೆಂದು ಆಗ್ರಹಿಸಿದರು .

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮುಖಾಂತರ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿಗಳಾದ ಪ್ರೊ ಹುಲ್ಕೆರೆ ಮಹದೇವು,ರೈತನಾಯಕಿ ಸುನಂದಾ ಜಯರಾಂ,ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಪ್ರೊ.ಮಹದೇವನ್, ಕನ್ನಡಪರ ಹೋರಾಟಗಾರರಾದ ರವೀಂದ್ರ ಕುಮಾರ್,ವಕೀಲ ಬಿ.ಟಿ.ವಿಶ್ವನಾಥ್, ಸಿಪಿಐಎಂನ ಕೃಷ್ಣೇಗೌಡ, ಸಿ.ಕುಮಾರಿ, ಸುಜಾತಕೃಷ್ಣ, ರಾಧಾ, ವೈ.ಎಚ್.ರತ್ನಮ್ಮ, ಅಪ್ಪಾಜಪ್ಪ, ಎಲ್.ಸಂದೇಶ್, ಶಂಕರೇಗೌಡ, ಮಂಜುನಾಥ್, ಬೋರಯ್ಯ, ಮುದ್ದೇಗೌಡ, ಚಿದಂಬರ್, ಎಂ.ವಿ.ಕೃಷ್ಣ, ನಾಗಣ್ಣಗೌಡ, ಮಂಗಲ ಲಂಕೇಶ್, ಎಸ್.ನಾರಾಯಣ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!