Thursday, September 19, 2024

ಪ್ರಾಯೋಗಿಕ ಆವೃತ್ತಿ

ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ದಂಡ

ಮದ್ದೂರು ಪಟ್ಟಣದಲ್ಲಿ Single use plastic ಅಂದರೆ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಹೋಲ್‌ಸೇಲ್ ವ್ಯಾಪಾರಿಗಳ ಅಂಗಡಿಗಳನ್ನು ಪುರಸಬೆ ಅಧಿಕಾರಿಗಳಿಂದ ತಪಾಸಣೆ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ಹಾಕಲಾಯಿತು.

ಮದ್ದೂರಿನ ಪುರಸಭೆ ಅಧಿಕಾರಿಗಳಿಂದ ಕೆಲವು ದಿನಗಳ ಮೊದಲೇ ಎಲ್ಲಾ ಹೋಲ್ ಸೇಲ್ ವ್ಯಾಪಾರಿ ಅಂಗಡಿಗಳಿಗೆ ಪ್ಲಾಸ್ಟಿಕ್ ನಿಷೇಧವನ್ನು ಮಾಡುವಂತೆ ಸೂಚನೆ ನೀಡಲಾಗಿತ್ತು.

ಇದರಂತೆ ಇಂದು ಪುರಸಭೆ ಅಧಿಕಾರಿಗಳು ಎಲ್ಲಾ ಅಂಗಡಿ ಮುಗ್ಗಟ್ಟನ್ನು ಪರಿಶೀಲಿಸಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ.

ಇನ್ನು ಮುಂದೆ ಗ್ರಾಹಕರು ಬಟ್ಟೆ ಬ್ಯಾಗ್ ಅನ್ನು ಉಪಯೋಗಿಸಬೇಕು ಅಂಗಡಿ ಮಾಲೀಕರು ಸಹ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಹೊರಗಡೆಯಿಂದ ಬರುವ ಪ್ಲಾಸ್ಟಿಕ್ ಲೋಟ ತಟ್ಟೆ ರೋಲ್ ಹಾಗೂ ಇನ್ನು ಇತರ ಏಕ ಬಳಕೆ ಪ್ಲಾಸ್ಟಿಕ್ ಅನ್ನು ತಡೆಹಿಡಿಯಲಾಗುವುದು ಎಂದು ತಿಳಿಸಿದರು.

ಪರಿಸರದ ಬಗ್ಗೆ ಕಾಳಜಿ ಇರುವ ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು,

ಸಾಮಾಜಿಕ ಕಾರ್ಯಕರ್ತ ಮತ್ತು ಪರಿಸರಸ್ನೇಹಿ ನಗರಗೆರೆ ಜಗದೀಶ್ ರವರು ಈ ಹಿಂದೆ ಪುರಸಭೆಗೆ ಪ್ಲಾಸ್ಟಿಕ್ ನಿಷೇಧಿಸುವಂತೆ ಪತ್ರ ಬರೆದಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!