Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸ್ಟೇಫಂಡ್ ಹೆಚ್ಚಳಕ್ಕೆ ಆಗ್ರಹ: 2ನೇ ದಿನಕ್ಕೆ ರೆಸಿಡೆಂಟ್ ವೈದ್ಯರ ಮೌನ ಪ್ರತಿಭಟನೆ

ಸ್ಟೇಫಂಡ್ ಹೆಚ್ಚಿಸಬೇಕೆಂದು ಒತ್ತಾಯಿಸಿ ಮಂಡ್ಯ ನಗರದ ಮಿಮ್ಸ್ ಆವರಣದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಗ್ರೂಪ್ ವತಿಯಿಂದ ರೆಸಿಡೆಂಟ್ ವೈದ್ಯರು ಮಂಡ್ಯ ಮಿಮ್ಸ್ ಎದುರು ನಡೆಯುತ್ತಿರುವ ಮೌನ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಕರ್ನಾಟಕ ರಾಜ್ಯದಲ್ಲಿ ತಿಂಗಳಿಗೆ 40,000 ರಿಂದ 45000 ಸ್ಟೇಫಂಡ್ ಕೊಡ್ತಾ ಇದ್ದು, ಆಲ್ ಓವರ್ ಇಂಡಿಯಾ 80,000 ದಿಂದ 85,000 ಹಾಗೂ 1 ಲಕ್ಷದ ವರೆಗೂ ಕೊಡುತ್ತಿದ್ದಾರೆ. ಕರ್ನಾಟಕ ರಾಜ್ಯ ಬಿಟ್ಟು ತಮಿಳುನಾಡು ಆಂಧ್ರ, ಕೇರಳ ಮುಂತಾದ ಬೇರೆ ರಾಜ್ಯಗಳಲ್ಲಿ 10 ವರ್ಷಗಳಿಂದ ವರ್ಷ ವರ್ಷವೂ ಹೆಚ್ಚಿಸುತ್ತಲೆ ಇದ್ದಾರೆ. ಆದರೆ ಕಳೆದ 4-5 ವರ್ಷದಿಂದ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಳವಾಗಿಲ್ಲ, ಒಂದು ವರ್ಷದಿಂದ ನಾವು ಮೌನ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರವನ್ನು ಕೇಳಿಕೊಳ್ಳುತ್ತಿದ್ದರೂ ಸರ್ಕಾರ ಇದರ ಬಗ್ಗೆ ಗಮನ ಹರಿಸುತಿಲ್ಲ ಕೂಡಲೇ ಸರ್ಕಾರ ನಮ್ಮ ಸ್ಟೇಫಂಡ್ ಹೆಚ್ಚಿಸಬೇಕೆಂದು ರೆಸಿಡೆಂಟ್ ವೈದ್ಯರು ಒತ್ತಾಯಿಸಿದರು.

ನಮಗೆ ನೀಡುತ್ತಿರುವ ಸ್ಟೈಫಂಡ್ ಇತರ ರಾಜ್ಯಗಳಲ್ಲಿನ ವೈದ್ಯರು ಪಡೆಯುವ 50%ರಷ್ಟು ಆಗಿದೆ. ಇದು ಹಣದುಬ್ಬರದಿಂದ ಉಲ್ಬಣಗೊಂಡ ಜೀವನ ವೆಚ್ಚಗಳು, ಶೈಕ್ಷಣಿಕ ವೆಚ್ಚಗಳು ಮತ್ತು ಕುಟುಂಬದ ಅಗತ್ಯಗಳನ್ನು ಸರಿದೂಗಿಸಲು ವಿಫಲವಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವ ಮತ್ತು ದೀರ್ಘಾವಧಿ ಕೆಲಸ ಮಾಡಿದರೂ ನಮ್ಮ ಸ್ಟೈಫಂಡ್‌ಗಳು ಬದಲಾಗಿಲ್ಲ, ಅಲ್ಲದೆ. ವೈದ್ಯಕೀಯ ಕೋರ್ಸ್‌ಗಳ ಶುಲ್ಕವು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತ್ಯಧಿಕವಾಗಿದೆ ಎಂದು ದೂರಿದರು.

ನಮ್ಮ ಬಹುನಿರೀಕ್ಷಿತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ನಾವು ಗೌರವಪೂರ್ವಕವಾಗಿ ವಿನಂತಿಸುತ್ತೇವೆ. ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ನಮ್ಮ ಪ್ರತಿಭಟನೆಯನ್ನು ತೀವ್ರ ಗೊಳಿಸಬೇಕಾಗುತ್ತದೆ. ನ್ಯಾಯ ಸಿಗುವವರೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಕರ್ತವ್ಯಗಳಿಂದ ಹಿಂದೆ ಸರಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ, ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ರೆಸಿಡೆಂಟ್ ವೈದ್ಯರು (ಇಂಟರ್ನ್‌ಗಳು, ಸ್ನಾತಕೋತ್ತರ ಪದವೀಧರರು, ಸೂಪರ್-ಸ್ಪೆಷಾಲಿಟಿ ನಿವಾಸಿಗಳು ಮತ್ತು ಹಿರಿಯ ನಿವಾಸಿಗಳು) ಒಳಗೊಂಡಿರುವ ಎಲ್ಲಾ ಇತರ ಸೇವೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ, ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವೈದ್ಯರಾದ ರವಿಕಿರಣ್, ಮೇರಿನ್ ಜೋಸೆಫ್, ಬಸವಲಿಂಗ, ಚಂದ್ರಶೇಖರ್, ಪ್ರಿಯಾಂಕ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!