Wednesday, September 18, 2024

ಪ್ರಾಯೋಗಿಕ ಆವೃತ್ತಿ

ಶ್ರೀ ವೆಂಕಟೇಶ್ವರ ಸ್ವಾಮಿ ಪ್ರತಿಷ್ಠಾಪನಾ ವಿಗ್ರಹದ ಭವ್ಯ ಮೆರವಣಿಗೆ

ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಜೂನ್ 7 ರಿಂದ 9 ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಇಂದು ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನು ಭವ್ಯ ಮೆರವಣಿಗೆಯಲ್ಲಿ ಬಿಡದಿಯ ಕೈಗಾರಿಕ ಪ್ರದೇಶದಿಂದ ಭಾರತೀನಗರಕ್ಕೆ ತರಲಾಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ಸುರೇಶ್ ಗಡಿಯವರಿಂದ ಕೆತ್ತಲ್ಪಟ್ಟಿರುವ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನು ಕ್ರೇನ್ ಮುಖಾಂತರ ಟೆಂಪೋದಲ್ಲಿ ಹಾಕಿಕೊಂಡು ರಸ್ತೆ ಮಾರ್ಗವಾಗಿ ತರಲಾಯಿತು.ಚನ್ನಪಟ್ಟಣದ ಕೆಂಗಲ್ ಹನುಮಂತರಾಯ ದೇವಸ್ಥಾನದಲ್ಲಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಚಿಕ್ಕರಸಿನಕೆರೆ ಕಾಲ ಭೈರವೇಶ್ವರ ದೇವಸ್ಥಾನದ ಬಳಿ ಪೂಜೆ ಸಲ್ಲಿಸಲಾಯಿತು.

ಹನುಮಂತಾಯ ,ಭೂವರಾಹಸ್ವಾಮಿ,ಉಗ್ರನರಸಿಂಹ ಸ್ವಾಮಿ ವಿಗ್ರಹಗಳೊಂದಿಗೆ ಕರೆತರಲಾಯಿತು. ವಾದ್ಯ, ತಮಟೆ, ನಗಾರಿಗಳ ಮೂಲಕ ಪಟಾಕಿ ಸಿಡಿಸಿ ಭಾರತೀನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಮಾರಿಗುಡಿಯ ಬೀದಿಯಲ್ಲಿರುವ ದೇವಸ್ಥಾನದ ಆವರಣದಲ್ಲಿರಿಸಿ, ಜೂನ್ 8ರವರೆಗೂ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ.

ನಂತರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ದೇವಸ್ಥಾನದ ಅಧ್ಯಕ್ಷ ವೆಂಕಟೇಗೌಡ ತಿಳಿಸಿದರು.ಶ್ರೀ ದೇವರ ಮೂರ್ತಿ ಕೃಷ್ಣ ಶಿಲೆಯಿಂದ ಕೆತ್ತಲ್ಪಟ್ಟಿದ್ದು 5 ಅಡಿ ಎತ್ತರವಿದ್ದು, ಪೀಠ ಸೇರಿ 7.1ಅಡಿ ಎತ್ತರವಿದೆ.ದೇವರ ವಿಗ್ರಹ ಮತ್ತು ಪೀಠ ಎರಡು ತಿರುಪತಿ ಮಾದರಲ್ಲಿರುವುದು ವಿಶೇಷ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!