Friday, September 20, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ನಾಯಕರು ಯಾವುದೇ ಸಭೆಗೆ ನನ್ನನ್ನು ಕರೆಯಲಿಲ್ಲ: ಸುಮಲತಾ

ಅಂಬರೀಶ್ ಪಡೆಯ ಶಕ್ತಿಯನ್ನ ಎನ್’ಡಿಎ ಗೆ ಕೊಟ್ಟಿದ್ದೇವೆ. ನಾನು ನಿಷ್ಠೆಯಿಂದ ಕೆಲಸ ಮಾಡಿದ್ದೀನಿ.
ಈ‌ ದಿನದವರೆಗೂ ಜೆಡಿಎಸ್ ನ ಯಾವುದೇ ನಾಯಕರು ಯಾವುದೇ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದರು.

ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನವರು ಸಭೆಗೆ ಕರೆದು ನಾನು ಬರದೆ ಇದ್ದರೆ ತಪ್ಪಾಗುತ್ತೆ, ಆದ್ರೆ ಅವರು ನನ್ನ‌ ಕರೆದೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮತದಾನ ಮಾಡೋದು ಕರ್ತ್ಯವ್ಯ ಅದನ್ನ ನಿರ್ವಹಿಸಿದ್ದೀನಿ ಎಂದರು.

ದೇವೇಗೌಡ ದೊಡ್ಡವರು, ಅವರು ಸುಮಲತಾ ಬೆಂಬಲ ನೀಡಿಲ್ಲ ಎಂದು ಹೇಳಿದ್ಧಾರೆ, ಬಹುಶಃ ಅವರಿಗೆ ಸರಿಯಾದ ಮಾಹಿತಿ ಕೊಡದೆ ಆ ರೀತಿ ಹೇಳಿರಬಹುದು. ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ
ಸ್ಚತಂತ್ರ ಸಂಸದೆಯಾಗಿ ನನ್ನ‌ಜವಾಬ್ದಾರಿಯನ್ನ ನಿರ್ವಹಿಸಿದ್ದೀನಿ. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ಅನ್ನ ತ್ಯಾಗ ಮಾಡಿದ್ದೀನಿ. ನಾನಿಲ್ಲದೆ ಅವರು ಚುನಾವಣೆ ಮಾಡಿಕೊಳ್ಳುತ್ತೀವಿ ಎಂಬ ಭಾವನೆ ಇರಬಹುದು ಎಂದರು.

ದೇವೇಗೌಡರು ಹೇಳಿಕೆ ನೀಡಿದ ನಂತರ, ನಿನ್ನೆಯಿಂದ ನನಗೆ ಒಂದಷ್ಟು ಕರೆಗಳು ಬಂದವು, ನನ್ನನ್ನು ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತ್ರ ನನಗೆ ಒಂದು ಪೋನ್ ಸಹ ಕರೆ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ, ಇಷ್ಟು ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಯ್ತು ಎಂದರು.

ಹಾಗಿದ್ರೆ ನಾನು ಮಾಡಿದ್ದು ತಪ್ಪಾ ? ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು.
ಸೋತ ಸೀಟನ್ನೇ ಬಿಡಲ್ಲ, ಅಂತಹುದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದಿನಿ, ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ, ಆದ್ರೆ ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ, ಪಕ್ಷ‌ ಸೂಚನೆ ನೀಡಿದ ಕಡೆ ಹೋಗಿ ನಾನು ಪ್ರಚಾರಕ್ಕೆ ಹೋಗಿದ್ದೇನೆ, ಮಂಗಳೂರುವರೆಗೂ ಹೋಗಿದ್ದೀನಿ ಮಂಡ್ಯಕ್ಕೆ ಬರ್ತಿರಲಿಲ್ವಾ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!