Saturday, May 18, 2024

ಪ್ರಾಯೋಗಿಕ ಆವೃತ್ತಿ

ಬೇಸಿಗೆ ಕಲಾ ಶಿಬಿರದಲ್ಲಿ ಚಿಣ್ಣರಿಗೆ ಚಿತ್ರಕಲೆ ಪಾಠ

ಏಪ್ರಿಲ್ 17ರಿಂದ 26 ರವರೆಗೆ ಚಿತ್ರ ಕಲಾವಿದ ಎಂ.ಎಲ್.ಸೋಮುವರದ ನೇತೃತ್ವದಲ್ಲಿ ಮಂಡ್ಯನಗರದ ಕಲ್ಲಹಳ್ಳಿಯಲ್ಲಿ ಬೇಸಿಗೆ ಕಲಾ ಶಿಬಿರವನ್ನು ಆಯೋಜಿಸಲಾಗಿತ್ತು.

ಎಂ. ಎಲ್. ಸೋಮುವರದರವರು ಚಿತ್ರಕಲೆಯ ಮೂಲ ಪಾಠಗಳನ್ನು ಹೇಳಿಕೊಡುವುದರ ಜೊತೆಗೆ ಚಿತ್ರಕಲೆಯ ವಿವಿಧ ತಂತ್ರಗಳನ್ನು ಹೇಳಿಕೊಟ್ಟರು.

ಚೌಕ, ಆಯತ, ತ್ರಿಭುಜ, ವೃತ್ತಾ, ಅಂಡಾಕಾರ ಮುಂತಾದ ಜ್ಯಾಮಿತಿಯ ಆಕಾರಗಳನ್ನು ಸುಲಭವಾಗಿ ಚಿತ್ರ ರಚಿಸುವ ವಿಧಾನಗಳನ್ನು ಹೇಳಿಕೊಟ್ಟರು. ಹಾಗೆಯೇ ದಾರ, ಎಲೆಗಳು, ಸ್ಟ್ರಾ, ಇಂಕ್ ಮುಂತಾದ ಪರಿಕರಗಳನ್ನು ಬಳಸಿ ಸೃಜನಶೀಲವಾಗಿ ವೈವಿಧ್ಯಮಯ ಚಿತ್ರಗಳನ್ನು ಚಿತ್ರಿಸುವುದನ್ನು ಹೇಳಿಕೊಟ್ಟರು.

ಕಾಗದದಲ್ಲಿ ಅನೇಕ ಬಗೆಯ ಏರೋಪ್ಲೇ,ನ್ ರಾಕೆಟ್, ದೋಣಿಗಳು ಮಾಡುವುದನ್ನು ಹೇಳಿಕೊಟ್ಟರು. ಇವುಗಳ ಜೊತೆಗೆ ಆಕಾಶ, ಸೌರಮಂಡಲ, ನಕ್ಷತ್ರಪುಂಜ, ಬ್ಲಾಕ್ ಕೋಲ್, ವಿಶ್ವದ ಉಗಮ, ದೂರದರ್ಶಕ, ಐನ್ಸ್ಟೀನ್, ಸ್ಟೀಫನ್ ಹಾಕಿಂಗ್ ಮುಂತಾದ ವಿಜ್ಞಾನದ ಕೌತುಕಮಯ ವಿಷಯಗಳ ಬಗ್ಗೆ, ವಿಜ್ಞಾನಿಗಳ ಬಗ್ಗೆ ತಿಳಿಸಿಕೊಟ್ಟರು.

ಕವನ, ಪದ್ಯಗಳು, ಹಾಡುಗಳು, ಅವುಗಳನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ, ಕವನಗಳನ್ನು ಓದುವ ಬಗ್ಗೆ ಮುಂತಾದ ಸಾಹಿತ್ಯದ ವಿಷಯಗಳನ್ನು ತಿಳಿಸಿಕೊಡಲಾಯಿತು. ಇವುಗಳ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ರೀತಿಯ ವಿಜ್ಞಾನ, ಸಾಹಿತ್ಯ ಕೃತಿಗಳ ಬಗ್ಗೆ ಕಲಿಸಲಾಯಿತು.

ಟಿ.ಡಿ. ನಾಗರಾಜ್ ಮಕ್ಕಳಿಗೆ ರಂಗಭೂಮಿಯ ನಟನೆ ಆಟಗಳು ಹಾಡುಗಳನ್ನು ಹೇಳಿಕೊಟ್ಟರು. ಮೈಸೂರಿನ ನಿವೃತ್ತ ಮುಖ್ಯೋಪಾಧ್ಯಾಯರಾದ ನಟರಾಜ್ ರವರು ಮಕ್ಕಳ ಕಥೆಗಳನ್ನು ಹೇಳಿದರು. ವಿಚಾರವಾದಿ ಕೆ. ಮಾಯೀಗೌಡ  ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ ಮತ್ತು ಕುವೆಂಪು, ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ ತಿಳಿಸಿಕೊಟ್ಟರು.

ಅರ್ಥಪೂರ್ಣ ಬೇಸಿಗೆ ಕಲಾಶಿಬಿರ ಯಶಸ್ವಿಯಾಗಿ ನಿನ್ನೆಯಷ್ಟೆ ಮುಕ್ತಾಯವಾಯಿತು ಎಂದು ಚಿತ್ರಕಲಾವಿದ ಎಂ.ಎಲ್. ಸೋಮುವರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!