Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೂಢನಂಬಿಕೆ ಬಿಡಿ : ಆಕ‍ರ್ಷಕ ಸಂಪೂರ್ಣ ಚಂದ್ರಗ್ರಹಣ ಕಣ್ತುಂಬಿಕೊಳ್ಳಿ

✍️ ಹನಿಯಂಬಾಡಿ ಜಗದೀಶ್ 

ಭಾರತದಲ್ಲಿ ಈ ವ‍ರ್ಷದ ಕೊನೆಯ ಆಕರ್ಷಕ ಸಂಪೂರ್ಣ ಚಂದ್ರ ಗ್ರಹಣ ನ.8ರಂದು ಸಂಜೆ 4:23ರಿಂದ ರಾತ್ರಿ 7:26ರ ವರೆಗೆ ನಡೆಯಲಿದೆ. ಆದರೆ ಇದನ್ನು ವೀಕ್ಷಣೆ ಮಾಡಿ, ಆನಂದಿಸಲು ನೀವು ಮೂಢನಂಬಿಕೆಗಳಿಂದ ಹೊರ ಬರಬೇಕಷ್ಟೆ. ಇದು ಸಾಧ್ಯವಾದರೆ ಕೆಂಪು ಬಣ್ಣದಲ್ಲಿ ಕಂಗೊಳಿಸುವ ಚಂದ್ರನನ್ನು ನೋಡಿ ಸಂಭ್ರಮಿಸಬಹುದು.

ಈ ಭಾರಿಯ ಚಂದ್ರಗ್ರಹಣ ಸರಿಸುಮಾರು 85 ನಿಮಿಷಗಳ ಕಾಲ ನಡೆಯುತ್ತದೆ. ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ, ಏಷ್ಯಾ, ಆಸ್ಟ್ರೇಲಿಯಾ ಖಂಡಗಳಲ್ಲಿ ಮತ್ತು ನ್ಯೂಜಿಲೆಂಡ್‌ನ ಕೆಲವು ಭಾಗಗಳಲ್ಲಿ ಕೆಂಪು ಚಂದ್ರನನ್ನು ಕಣ್ತುಂಬಿಕೊಳ್ಳಬಹುದು.

ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ 

ಭೂಮಿಯು, ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಭೂಮಿಯ ನೆರಳು ಚಂದ್ರನನ್ನು ಆವರಿಸಿದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಗ್ರಹಣವು ಪೂರ್ಣವಾಗಿ ಆವರಿಸಿದಾಗ ಚಂದ್ರನು ಕೆಂಪು ಬಣ್ಣಕ್ಕೆ ತಿರುಗುವುದನ್ನು ನೋಡಬಹುದು. ಚಂದ್ರನು ಭೂಮಿಯಿಂದ ಎರಕಹೊಯ್ದ ನೆರಳಿನ ಮೂಲಕ ಹಾದು ಹೋಗುವ ಸಮಯದಲ್ಲಿ ಚಂದ್ರನು ಕೆಂಪಾಗಿ ಕಂಗೊಳಿಸುತ್ತಾನೆ.

ನಾಸಾ (National Aeronautics and Space Administration) ಪ್ರಕಾರ ಅಂಬ್ರಾ ಎಂದು ಕರೆಯಲ್ಪಡುವ ಭೂಮಿಯ ನೆರಳಿನ ಕತ್ತಲೆಯ ಭಾಗವನ್ನು, ಚಂದ್ರನು ಹಾದು ಹೋದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.

ಮೊದಲ ನೋಟಕ್ಕೆ ಸಾಕ್ಷಿಯಾಗುವ ನಗರ ಯಾವುದು ?

ಭಾರತದಲ್ಲಿ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸಂಪೂರ್ಣ “ರಕ್ತ ಚಂದ್ರ” ನ ಮೊದಲ ನೋಟವು ಲಭ್ಯವಾಗಲಿದೆ. ಭಾರತದಲ್ಲಿ ಸಂಜೆ 4:23 ಕ್ಕೆ ಪ್ರಾರಂಭವಾಗಿ ರಾತ್ರಿ 7:26 ಕ್ಕೆ ಕೊನೆಗೊಳ್ಳುತ್ತದೆ. ಇದರ  ಅವಧಿ 3 ಗಂಟೆ 3 ನಿಮಿಷಗಳು.

NASA ಪ್ರಕಾರ, ಭಾರತೀಯ ಕಾಲಮಾನದಂತೆ ಮಧ್ಯಾಹ್ನ 2.47ಕ್ಕೆ ವಿಶ್ವದ ಬೇರೆ ದೇಶಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರವಾಗುವ ನಿರೀಕ್ಷೆಯಿದೆ. ಇದು ಗುವಾಹಟಿ, ಸಿಲಿಗುರಿ, ಕೋಲ್ಕತ್ತಾ ಮತ್ತು ಭುವನೇಶ್ವರದಲ್ಲಿಯೂ ಗೋಚರಿಸುತ್ತದೆ. ಆದಾಗ್ಯೂ, ದೆಹಲಿ, ಶ್ರೀನಗರ, ಚೆನ್ನೈ, ಗಾಂಧಿನಗರ ಮತ್ತು ಮುಂಬೈನಲ್ಲಿ ಭಾಗಶಃ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಬ್ಲಡ್ ಮೂನ್ ಎಂದೂ ಕರೆಯಲ್ಪಡುವ ಸಂಪೂರ್ಣ ಗ್ರಹಣ ಹಂತವು ಸಂಜೆ  4:29ಕ್ಕೆ ಉತ್ತುಂಗದಲ್ಲಿರುತ್ತದೆ.

ರಕ್ತಚಂದ್ರ ಎಂದು ಏಕೆ ಕರೆಯುತ್ತಾರೆ

`ಬ್ಲಡ್ ಮೂನ್’ ನನ್ನು ಕನ್ನಡದಲ್ಲಿ ರಕ್ತಚಂದ್ರ ಎಂದೇ ಕರೆಯುತ್ತಾರೆ. ಆದರೆ ರಕ್ತಕ್ಕೂ ಚಂದ್ರನಿಗೂ ಯಾವುದೇ ಸಂಬಂಧವಿಲ್ಲ. ಈ ಗ್ರಹಣದ ಅವಧಿಯಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ  ಗಾಢ ಕೆಂಪು ಬಣ್ಣದಲ್ಲಿ ಕಾಣುವುದರಿಂದ ಈ ಹೆಸರು ಬಂದಿದೆಯಷ್ಟೆ.

ಮುಂದಿನ ಗ್ರಹಣ ಯಾವಾಗ ? 

ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳ ನಂತರ ಅಂದರೆ ಮಾರ್ಚ್ 14, 2025 ರಂದು ಸಂಭವಿಸುತ್ತದೆ ಎಂದು ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.  ಆ ಸಮಯದಲ್ಲಿ ಪ್ರಪಂಚವು ಭಾಗಶಃ ಚಂದ್ರಗ್ರಹಣವನ್ನು ವೀಕ್ಷಿಸಬಹುದು.

ಬರಿಗಣ್ಣಿನಿಂದ ವೀಕ್ಷಿಸಬಹುದೇ 

ಚಂದ್ರ ಗ್ರಹಣವನ್ನು ಹೇಗೆ ವೀಕ್ಷಿಸುವುದು ಎಂಬ ಚಿಂತಯೇ…ಅದನ್ನು ಬಿಡಿ, ಇದು ಸೂರ್ಯಗ್ರಹಣಕ್ಕಿಂತ ಭಿನ್ನವಾಗಿರುವುದರಿಂದ ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದು ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಬರಿಗಣ್ಣಿನ ವೀಕ್ಷಣೆಯೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಚಂದ್ರಗ್ರಹಣ ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ, ಆದರೂ ದುರ್ಬೀನುಗಳು ಅಥವಾ ದೂರದರ್ಶಕದ ಮೂಲಕ ವೀಕ್ಷಣೆ ಮಾಡಿದರೆ ಪ್ರಕೃತಿಯ ಕೌತುಕವು ಇನ್ನಷ್ಟು ಆಕರ್ಷಕವಾಗಿರಲಿದೆ.

ಗ್ರಹಣಕ್ಕೆ ಹೆದರುವ ಅವಶ್ಯಕತೆ ಇಲ್ಲ

ಚಂದ್ರಗ್ರಹಣ ಪ್ರಕೃತಿಯ ವಿಸ್ಮಯ. ಹಾಗಾಗಿ ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದು ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೂ ಕೆಲವು ಕಡೆ ನಕಲಿ ಜ್ಯೋತಿಷಿಗಳು, ವೈಜ್ಞಾನಿಕ ಹಾಗೂ ವೈಚಾರಿಕ ಪ್ರಜ್ಞೆ ಇಲ್ಲದವರು, ಜನರಿಗೆ ತಪ್ಪು ಮಾಹಿತಿ ನೀಡಿ ಹೆದರಿಸುವ ಕೆಲಸ ಮಾಡುತ್ತಾರೆ. ಆದರೂ ಕೆಲವು ದೇವಾಲಯಗಳು ಗ್ರಹಣ ಸಮಯದಲ್ಲಿ ಬಂದ್ ಆಗವ ನಿರೀಕ್ಷೆ ಇದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!