Saturday, May 18, 2024

ಪ್ರಾಯೋಗಿಕ ಆವೃತ್ತಿ

ವಿಶ್ವಮಾನವ ಕವಿ ಕುವೆಂಪು ಜನ್ಮದಿನಾಚರಣೆ

ಮಳವಳ್ಳಿ ಪಟ್ಟಣ ಆದಿಜಾಂಬವ ವಿಚಾರ ವೇದಿಕೆ ಕಚೇರಿಯಲ್ಲಿ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ರವರ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕುವೆಂಪು ರವರ ವಿಚಾರಧಾರೆಗಳ ಕುರಿತು ವೇದಿಕೆಯ ಅಧ್ಯಕ್ಷ ನಡಕಲಪುರ ಮಂಜುನಾಥ್ ಮಾತನಾಡಿ, ಕುವೆಂಪು ರವರು ಈ ದೇಶದ ಸಂಪತ್ತು. ಶೂದ್ರ ಸಮಾಜದಲ್ಲಿ ಜನಿಸಿ ಈ ನಾಡಿನ ಗರಿಮೆಯನ್ನು ವಿಶ್ವಕ್ಕೆ ಸಾರಿದ ಕುವೆಂಪುರವರು ಕವಿ ಮಾತ್ರವಲ್ಲದೆ, ಸಮ ಸಮಾಜದ ನಿರ್ಮಾಣಕ್ಕಾಗಿ ಹಾಗು ಮೂಢನಂಬಿಕೆ ಮುಕ್ತ ನಾಡಿಗಾಗಿ ದುಡಿದವರು ಎಂದು ಹೊಗಳಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಸಿ ಎಂ ನಟೇಶ್, ಟೌನ್ ಪೋಲಿಸ್ ಠಾಣೆ ಬರಹಗಾರರಾದ ಹರ್ಷವರ್ಧನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿಜಾಂಬವ ವಿಚಾರ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಹೂವಿನಕೊಪ್ಪಲು ಪ್ರಶಾಂತ್, ಪುರಸಭೆ ಉಪಾಧ್ಯಕ್ಷ ಪ್ರಶಾಂತ್ ಸದಸ್ಯರ ನಂದಕುಮಾರ್ ಮುಖಂಡರಾದ ದುಗ್ಗನಹಳ್ಳಿ ನಾಗರಾಜ್, ಕುಲುಮೆದೊಡ್ಡಿ ಕುಮಾರ್, ಪೊತ್ತಂಡೆ ನಾಗರಾಜ್, ಚೊಟ್ಟನಹಳ್ಳಿ ಕೆಂಪರಾಜ್, ಗೌಡಗೆರೆ ಹರೀಶ್ ಪಾಟೀಲ್, ಪ್ರಮೋದ್, ಎಂ.ಕೃಷ್ಣಮೂರ್ತಿ ಬಿ.ಜಿ ಪುರ, ಮಂಟೇಲಿಂಗಯ್ಯ, ಬಿ.ಪುರ ಪ್ರಸನ್ನ, ಕಿರುಗಾವಲು ರವಿ, ಯ.ಕೃಷ್ಣ, ಯ.ಅರುಣ್, ಯ.ಶ್ರೀನಿವಾಸ್ ಯ.ಮಹದೇವಪ್ಪ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!