Tuesday, May 14, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಇಂದಿನಿಂದಲೇ ನಾಲೆಗಳಿಗೆ ಕಟ್ಟುಪದ್ದತಿಯಲ್ಲಿ ನೀರು….ಇಲ್ಲಿದೆ ಸಂಪೂರ್ಣ ಮಾಹಿತಿ….

ಕೃಷ್ಣರಾಜಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕೃಷ್ಣರಾಜಸಾಗರ ಜಲಾಶಯದಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹಣೆಯಂತೆ ಆ.9ರಿಂದ ವಿ.ಸಿ.ನಾಲೆ ಮತ್ತು ಆಣೆಕಟ್ಟು ನಾಲೆಗಳಿಗೆ ತಿಂಗಳಲ್ಲಿ 15 ದಿನ ನಾಲೆಗಳ ಕಾಲ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನ ಕೈಗೊಂಡಿದೆ.

ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ಹಾಗೂ ಅಲ್ಪಾವಧಿ ಅರೆ ಖುಸ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಮಿತ ಬಳಕೆಯಲ್ಲಿ ಉಪಯೋಗಿಸಲು ರೈತ ಬಾಂಧವರಲ್ಲಿ ಮನವಿ ಮಾಡಲಾಗಿದೆ. ನಿಗಧಿತ ಅಲ್ಪಾವಧಿ ಬೆಳೆಗಳನ್ನು ಹೊರತುಪಡಿಸಿ, ಇತರ ಪ್ರಮುಖ ಬೆಳೆಗಳನ್ನು ಬೆಳೆದು ನೀರಿನ ಕೊರತೆಯಿಂದ ಬೆಳೆ ನಷ್ಟ ಉಂಟಾದರೆ ಇಲಾಖೆ ಜವಾಬ್ದಾರಿಯಾಗುವುದಿಲ್ಲ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರು ಹರಿಸುವ ದಿನಾಂಕ ಮತ್ತು ಅವಧಿ

  • ಆಗಸ್ಟ್ : 9 ರಿಂದ 24, 2023 (15ದಿನಗಳ ಕಾಲ)
  • ಸೆಪ್ಟೆಂಬರ್ : 8 ರಿಂದ 24, 2023 (15ದಿನಗಳ ಕಾಲ)
  • ಅಕ್ಟೋಬರ್ : 8 ರಿಂದ 23, 2023  (15ದಿನಗಳ ಕಾಲ)
  • ನವೆಂಬರ್ : 7 ರಿಂದ 22, 2023 (15ದಿನಗಳ ಕಾಲ)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!