Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ವರ್ ಡೌನ್ : ವಾಟ್ಸಾಪ್ ಬಳಕೆದಾರರ ಪರದಾಟ

ಭಾರತ ದೇಶದಾದ್ಯಂತ ಪ್ರಮುಖ ನಗರಗಳಾದ ನವದೆಹಲಿ, ಬೆಂಗಳೂರು, ಮುಂಬೈ ಹಲವಾರು ನಗರಗಳಲ್ಲಿ ಸೇರಿದಂತೆ ಜಿಲ್ಲೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಟ್ಸಾಪ್ ಸರ್ವರ್ ಕೈಕೊಟ್ಟಿದ್ದರಿಂದ ಕೊಟ್ಯಾಂತರ ಬಳಕೆದಾರರು ಯಾವುದೇ ಸಂದೇಶಗಳನ್ನು ಕಳಿಸಲು ಹಾಗೂ ಸ್ವೀಕರಿಸಲು ಸಾಧ್ಯವಿಲ್ಲದೆ ಅಡಚಣೆ ಅನುಭವಿಸುವಂತಾಯಿತು.

ಇಂದು ಬೆಳಿಗ್ಗೆಯಿಂದಲೇ ವಾಟ್ಸಾಪ್ ಕಾರ್ಯನಿರ್ವಹಣೆ ಸ್ಥಗಿತಕೊಂಡಿತು, ಎಲ್ಲಾ ಗ್ರಾಹಕರು ತಮ್ಮ ಮೊಬೈಲ್ ನಲ್ಲಿಯೇ ದೋಷವಿಬಹುದೆಂದು ಕೆಲವರು ರಿಸ್ಟಾರ್ಟ್ ಮಾಡಿದರು, ಇಂಟರೇನೆಟ್ ಸಂಪರ್ಕ ಕಡಿತವಾಗಿದೆಯೇ ಎಂದು ಪರಿಶೀಲಿಸಿದರು. ಅನಂತರ ವಾಟ್ಸಾಪ್ ಗೆ ಪರ್ಯಾಯ ಮಾಧ್ಯಮಗಳಾದ ಟೆಲಿಗಾಂ, ಟ್ವಿಟರ್, ಇನ್ಸ್ಟಾಗ್ರಾಮ್, ಷೇರ್ ಚಾಟ್ ಹಾಗೂ ಟೆಕ್ಸ್ಟ್ ಮೇಸೆಜ್ ಗಳನ್ನು ಬಳಸಲು ಮುಂದಾದರು.

ವಾಟ್ಸಾಪ್ ಅಡಚಣೆ ಬಗ್ಗೆ ಹಲವು ನೆಟ್ಟಿಗರು ವ್ಯಂಗ್ಯ ಚಿತ್ರಗಳನ್ನು ಟ್ವಿಟರ್ ಗಳಲ್ಲಿ ಪೋಸ್ಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದರು.

ವಾಟ್ಸಾಪ್ ಅನ್ನು ನಿರ್ವಹಿಸುತ್ತಿರುವ ಮೇಟಾ ಕಂಪನಿಯು ಎಷ್ಟು ಸಾಧ್ಯವೋ ಅಷ್ಟು ಬೇಗ ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ಗ್ರಾಹಕರಿಗೆ ಎಂದಿನಂತೆ ಸೇವೆ ಒದಗಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿತ್ತು, ಮಧ್ಯಾಹ್ನ 2.15ರ ನಂತರ ವಾಟ್ಸಾಪ್ ಎಂದಿನಂತೆ ತನ್ನ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!