ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅಚಿವರ್ಸ್ ಅಕಾಡೆಮಿ ಸದಸ್ಯರು ವಿಶ್ವ ಅಥ್ಲೆಟಿಕ್ಸ್ ದಿನಾಚರಣೆಯನ್ನು ಆಚರಿಸಿದರು.
ನಂತರ ಅಕಾಡೆಮಿ ಮುಖ್ಯಸ್ಥ ಡಾ. ರಾಘವೇಂದ್ರ ಮಾತನಾಡಿ, ಕ್ರೀಡೆ ಮತ್ತು ಅಥ್ಲೆಟಿಕ್ಸ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಜನರನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ. 7 ರಂದು ವಿಶ್ವ ಅಥ್ಲೆಟಿಕ್ಸ್ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (IAAF) ಅಧ್ಯಕ್ಷ ಸಿಮೊ ನೆಬಿಯೊಲೊ ಮೊದಲಿಗೆ 1996ರಲ್ಲಿ ಅಥ್ಲೆಟಿಕ್ ದಿನಾಚರಣೆಯನ್ನು ಆಚರಿಸಿದ್ದರು. ನಂತರ ಪ್ರತಿ ವರ್ಷ, ವಿಶ್ವ ಅಥ್ಲೆಟಿಕ್ ದಿನದಂದು, ವಿಶ್ವ ಅಥ್ಲೆಟಿಕ್ ಫೆಡರೇಶನ್ ಮತ್ತು IAAF ಅಂದಿನಿಂದ ಹಲವಾರು ಶಾಲಾ ಕಾಲೇಜುಗಳಲ್ಲಿ ಮತ್ತು ಆಕಾಡೆಮಿಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ 100 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಹಾಗೂ ಗುಂಡು ಎಸೆತ ಕ್ರೀಡೆಯನ್ನು ಆಯೋಜನೆ ಮಾಡಲಾಗಿತ್ತು.
ವಕೀಲರಾದ ಸೋಮಶೇಖರ್, ನೇತ್ರಾಧಿಕಾರಿ ಜ್ಞಾನಾನಂದ, ದೇವರಾಜ್, ದೇವೇಂದ್ರ, ಗುರು, ಸುನಿಲ್ , ರೋಹನ್, ಸಂತೋಷ್, ಪುಷ್ಕಕ್, ಮಣಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.